ಆರೋಗ್ಯಕರ ನಗರಗಳಲ್ಲಿ ಬೆಂಗಳೂರಿಗೆ ಮೊದಲ ಸ್ಥಾನ
ಭಾರತದ ಬೇರೆ ಮೆಟ್ರೊ ನಗರಗಳಿಗೆ ಹೋಲಿಸಿದರೆ ಬೆಂಗಳೂರು ಜನತೆ ಹೆಚ್ಚು ಆರೋಗ್ಯವಾಗಿದ್ದಾರೆ ಎಂದು ...

ಭಾರತದ ಬೇರೆ ಮೆಟ್ರೊ ನಗರಗಳಿಗೆ ಹೋಲಿಸಿದರೆ ಬೆಂಗಳೂರು ಜನತೆ ಹೆಚ್ಚು ಆರೋಗ್ಯವಾಗಿದ್ದಾರೆ ಎಂದು ಸಮೀಕ್ಷೆಯೊಂದು ಹೇಳುತ್ತದೆ. ಇಂಡಿಯಾ ಫಿಟ್ ರಿಪೋರ್ಟ್ 2019ರ ಪ್ರಕಾರ, ಬೆಂಗಳೂರು ಮುಂಬೈ, ದೆಹಲಿ-ಎನ್ ಸಿಆರ್, ಅಹಮದಾಬಾದ್, ಹೈದರಾಬಾದ್, ಚೆನ್ನೈ, ಪುಣೆ ಮತ್ತು ಕೋಲ್ಕತ್ತಾ ನಗರಗಳಿಗೆ ಹೋಲಿಸಿದರೆ ಬೆಂಗಳೂರಿನ ನಾಗರಿಕರು ಆರೋಗ್ಯವಾಗಿದ್ದಾರೆ.
ದೇಶದ 8 ನಗರಗಳನ್ನು ವಿವಿಧ ಮಾನದಂಡ ಮೇಲೆ ವರದಿ ತಯಾರಿಸಲಾಗಿದೆ. ಆರೋಗ್ಯ ವಿಷಯದಲ್ಲಿ ಮೆಟ್ರೊಪಾಲಿಟನ್ ನಗರಗಳಲ್ಲಿ ತೆಗೆದುಕೊಂಡಿರುವ ಕ್ರಮಗಳು, ಜೀವನಶೈಲಿಯ ಕಾಯಿಲೆಗಳಾದ ಸಕ್ಕರೆಕಾಯಿಲೆ, ಅಧಿಕ ರಕ್ತದ ಒತ್ತಡ, ಹೃದ್ರೋಗ ಸಮಸ್ಯೆಗಳು, ನಗರವಾಸಿಗಳ ಬಿಎಂಐ (Body Mass Index) ಮೊದಲಾದವುಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಗಿದೆ.
ಇದಲ್ಲದೆ ನಗರವಾಸಿಗಳಿಗೆ ಸಿಗುವ ಪೌಷ್ಟಿಕಾಂಶ, ನೀರಿನ ಬಳಕೆ, ಒತ್ತಡದ ಮಟ್ಟ, ನಿದ್ದೆಯ ಅವಧಿ, ದೇಹದ ಶಕ್ತಿ, ಸಿಗರೇಟು, ಆಲ್ಕೋಹಾಲ್ ಸೇವನೆ ಇತ್ಯಾದಿಗಳನ್ನು ಕೂಡ ಪರಿಗಣನೆಗೆ ತೆಗೆದುಕೊಳ್ಳಲಾಗಿದೆ. ಬೆಂಗಳೂರಿನಲ್ಲಿ ದೆಹಲಿ, ಹೈದರಾಬಾದ್, ಚೆನ್ನೈ ನಗರಗಳಿಗೆ ಹೋಲಿಸಿದರೆ ಅಧಿಕ ತೂಕದ ವ್ಯಕ್ತಿಗಳು ಕೂಡ ಹೆಚ್ಚು ಎಂದು ವರದಿ ಹೇಳುತ್ತದೆ.
ದೇಶಾದ್ಯಂತ ಬೊಜ್ಜು ಹೊಂದಿರುವ ವ್ಯಕ್ತಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು 2017ರ ಸಮೀಕ್ಷೆಗೆ ಹೋಲಿಸಿದರೆ ಶೇಕಡಾ 55ರಿಂದ ಶೇಕಡಾ 57ಕ್ಕೆ ಏರಿಕೆಯಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


