ಬೆಂಗಳೂರು: ಕಾಲೇಜು ವಿದ್ಯಾರ್ಥಿನಿ ಅನುಮಾನಾಸ್ಪದ ಸಾವು
ಮೊದಲನೇ ವರ್ಷದ ಬಿಎಸ್'ಸಿ ಪದವಿ ವ್ಯಾಸಾಂಗ ಮಾಡುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಮೌಂಟ್ ಕಾರ್ಮೆಲ್ ಕಾಲೇಜಿನ ಬಳಿ ನಡೆದಿದೆ...

Published On :
ಬೆಂಗಳೂರು: ಮೊದಲನೇ ವರ್ಷದ ಬಿಎಸ್'ಸಿ ಪದವಿ ವ್ಯಾಸಾಂಗ ಮಾಡುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಮೌಂಟ್ ಕಾರ್ಮೆಲ್ ಕಾಲೇಜಿನ ಬಳಿ ನಡೆದಿದೆ.
ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಮೊದಲನೇ ವರ್ಷದ ಬಿಎಸ್ಸಿ ಪದವಿ ಮಾಡುತ್ತಿದ್ದ ಸರೋಜ (ಹೆಸರು ಬದಲಿಸಲಾಗಿದೆ) ಎಂದಿನಂತೆ ಗುರುವಾರ ಕೂಡ ಕಾಲೇಜಿಗೆ ಬಂದಿದ್ದಾರೆ. ಈ ವೇಳೆ ಕಾಲೇಜು ಆವರಣದಲ್ಲಿ ಇದ್ದಕ್ಕಿದ್ದಂತೆ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಕೂಡಲೇ ಸರೋಜ ಅವರನ್ನು ಬೌರಿಂಗ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ರಾತ್ರಿ ಮೃತಪಟ್ಟಿದ್ದಾರೆ.
ಸಂಜೆ 4.30ರ ಸುಮಾರಿಗೆ ಘಟನೆ ನಡೆದಿದೆ. ಆದರೆ, ವಿದ್ಯಾರ್ಥಿನಿ ಮನೆ ಬಿಟ್ಟ ಬಳಿಕ ಬೇರೆಲ್ಲಿಯೋ ವಿಷವನ್ನು ಸೇವನೆ ಮಾಡಿದ್ದಾರೆ. ಸೂಸೈಡ್ ನೋಟ್ ಯಾವುದೂ ದೊರಕಿಲ್ಲ. ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.
ಕಾಲೇಜು ಬಳಿ ಯುವಕನೊಬ್ಬ ಬಂದಿದ್ದ. ಆ ಯುವಕರನೇ ಸರೋಜಾ ಅವರ ತಂದೆ ಮಾಹಿತಿ ಮುಟ್ಟಿಸಿದ್ದ. ಬಳಿಕ ಆತನ ಮೊಬೈಲ್ ಸ್ವಿಚ್ ಆಫ್ ಆಗಿತ್ತು ಎಂದು ಸರೋಜ ಅವರ ಸಹಪಾಠಿಯೊಬ್ಬರು ಹೇಳಿದ್ದಾರೆ.
ಸರೋಜಾ ಅವರ ಪೋಷಕರು ಮಾತನಾಡಿ, ತರಗತಿಗೆ ಹೋಗಬೇಕಿದ್ದು, ಬೆಳಿಗ್ಗೆ 7.30ಕ್ಕೇ ಮನೆ ಬಿಟ್ಟಿದ್ದಳು ಎಂದು ಹೇಳಿದ್ದಾರೆ.
ಘಟನೆ ಬಗ್ಗೆ ಮಾತನಾಡಿರುವ ಕಾಲೇಜು ಆಡಳಿತ ಮಂಡಳಿ, ಘಟನೆ ನಡೆದ ದಿನದಂದು ಸರೋಜ ಕಾಲೇಜಿಗೆ ಬಂದಿರಲಿಲ್ಲ. ಘಟನೆ ಬಗ್ಗೆ ನಮಗೆ ಮಾಹಿದಿ ತಿಳಿದಿದ್ದೂ ಕೂಡ ಶುಕ್ರವಾರ. ಮಾಹಿತಿ ತಿಳಿದ ಕೂಡಲೇ ಈ ಬಗ್ಗೆ ದೃಢೀಕರಣಕ್ಕಾಗಿ ಪೋಷಕರನ್ನು ಸಂಪರ್ಕಿಸಲಾಗಿತ್ತು. ಕಾಲೇಜಿನಲ್ಲಿ ಯಾವುದೇ ಸಮಸ್ಯೆಗಳಿರಲಿಲ್ಲ. ವಿದ್ಯಾರ್ಥಿನಿ ಕೂಡ ಯಾವುದೇ ಸಮಸ್ಯೆಗಳನ್ನೂ ಮಾಡಿರಲಿಲ್ಲ ಎಂದು ಹೇಳಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


