ರಾಜ್ಯ

ವಿಧಾನಸೌಧ ಗೇಟ್ ಬಳಿ 14 ಲಕ್ಷ ರು. ನಗದು ಜಪ್ತಿ, ಸಚಿವರ ಕಚೇರಿ ಸಿಬ್ಬಂದಿ ವಶಕ್ಕೆ

ರಾಜ್ಯದ ಶಕ್ತಿ ಕೇಂದ್ರ ವಿಧಾನಸೌಧದ ವೆಸ್ಟ್ ಗೇಟ್ ನಲ್ಲಿ ಪೊಲೀಸರು ಶುಕ್ರವಾರ ಸಚಿವರ ಕಚೇರಿಯ ಸಿಬ್ಬಂದಿಯೊಬ್ಬರಿಂದ...

ವಿಧಾನಸೌಧ ಗೇಟ್ ಬಳಿ 14 ಲಕ್ಷ ರು. ನಗದು ಜಪ್ತಿ, ಸಚಿವರ ಕಚೇರಿ ಸಿಬ್ಬಂದಿ ವಶಕ್ಕೆ
ವಿಧಾನಸೌಧ
Published On :
ಬೆಂಗಳೂರು: ರಾಜ್ಯದ ಶಕ್ತಿ ಕೇಂದ್ರ ವಿಧಾನಸೌಧದ ವೆಸ್ಟ್ ಗೇಟ್ ನಲ್ಲಿ ಪೊಲೀಸರು ಶುಕ್ರವಾರ ಸಚಿವರ ಕಚೇರಿಯ ಸಿಬ್ಬಂದಿಯೊಬ್ಬರಿಂದ 14 ಲಕ್ಷ ರುಪಾಯಿ ನಗದು ಜಪ್ತಿ ಮಾಡಿದ್ದಾರೆ.
ಸೂಕ್ತ ದಾಖಲೆ ಇಲ್ಲದೆ ಹಣ ಸಾಗಿಸುತ್ತಿದ್ದ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಸಿ.ಪುಟ್ಟರಂಗಶೆಟ್ಟಿ ಅವರ ಕಚೇರಿ ಸಿಬ್ಬಂದಿ ಮೋಹನ್ ಅವರನ್ನು ವಿಧಾನಸೌಧ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸುತ್ತಿದ್ದಾರೆ.
ಇದು ಅಕ್ರಮ ವ್ಯವಹಾರದ ದುಡ್ಡಾಗಿದೆ ಎಂಬ ಮಾಧ್ಯಮದವರ ವಾದವನ್ನು ಮೋಹನ್ ಅವರು ತಳ್ಳಿಹಾಕಿದ್ದಾರೆ.
ಈ ಬ್ಯಾಗಲ್ಲಿ 14-15 ಲಕ್ಷ ರುಪಾಯಿ ಇದ್ದು, ಇದು ತನ್ನ ಸ್ವಂತ ಹಣ ಎಂದು ಮೋಹನ್ ಅವರು ಹೇಳಿಕೊಂಡಿದ್ದಾರೆ. ಅತ್ತ, ಇದು ಅಕ್ರಮ ಹಣ ಎಂದು ದೂರು ಕೊಟ್ಟರೆ ಮಾತ್ರ ಹಣದ ಚೀಲ ತೆರೆಯುವುದಾಗಿ ವಿಧಾನಸೌಧ ಠಾಣೆಯ ಪೊಲೀಸರು ಹೇಳಿಕೆ ನೀಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.