ಬೆಂಗಳೂರು: ತಾಯಿಯ ಸಹೋದ್ಯೋಗಿ ಮೇಲೆ ಅತ್ಯಾಚಾರಕ್ಕೆ ಯತ್ನ, ಯುವಕನ ಬಂಧನ
ಯಶವಂತಪುರದ ತಾಜ್ ಹೋಟೆಲ್ ನಲ್ಲಿ ಮಹಿಳೆಯ ಮೇಲೆ ಪರಿಚಯಸ್ಥನೇ ಅತ್ಯಾಚಾರಕ್ಕೆ ಯತ್ನಿಸಿರುವ ಘಟನೆ ಆರ್ ಎಂಸಿ ಯಾರ್ಡ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ...

Published On :
ಬೆಂಗಳೂರು: ಯಶವಂತಪುರದ ತಾಜ್ ಹೋಟೆಲ್ ನಲ್ಲಿ ಮಹಿಳೆಯ ಮೇಲೆ ಪರಿಚಯಸ್ಥನೇ ಅತ್ಯಾಚಾರಕ್ಕೆ ಯತ್ನಿಸಿರುವ ಘಟನೆ ಆರ್ ಎಂಸಿ ಯಾರ್ಡ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಶುಕ್ರವಾರ ರಾತ್ರಿ 39 ವರ್ಷದ ಮಹಿಳೆ ಮೇಲೆ 23 ವರ್ಷದ ನಿತಿನ್ ಮುಖರ್ಜಿ ಎಂಬಾತ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ, ಕೊಲ್ಕೊತ್ತಾದ ಕಂಪನಿಯೊಂದರಿಂದ ಬೆಂಗಳೂರಿನಲ್ಲಿ ನಡೆಯುತ್ತಿದ್ದ ಸಮಾವೇಶಕ್ಕೆ ಆಗಮಿಸಿದ್ದರು. ಮಹಿಳೆಯು ವಾಸವಿದ್ದ ಪಕ್ಕದ ಕೊಠಡಿಯಲ್ಲಿಯೇ ಇದ್ದ,
ರಾತ್ರಿ 11.45 ರ ಸುಮಾರಿಗೆ ನೀರು ಕೇಳುವ ನೆಪದಲ್ಲಿ ಬಂದ ಆರೋಪಿ, ಆಕೆಯನ್ನು ಹಿಡಿದೆಳೆದಿದ್ದಾನೆ, ಹಾಸಿಗೆ ಮೇಲೆ ತಳ್ಳಿ ಆಕೆಗೆ ಲೈಂಗಿಕ ಕಿರುಕುಳ ನೀಡಲು ಆರಂಭಿಸಿದ್ದಾನೆ,ನಂತರ ಬಾತ್ ರೂಂ ಗೆ ಎಳೆದೊಯ್ದು, ಸಿಗರೇಟ್ ನ್ನು ಆಕೆಯ ಬಾಯಿಗಿಟ್ಟು ದೂಮುಪಾನ ಮಾಡುವಂತೆ ಒತ್ತಾಯಿಸಿದ್ದಾನೆ, ನಾನು ಮಗುವಿನ ತಾಯಿ,ನೀನು ನನ್ನನ್ನು ನಿನ್ನ ತಾಯಿಯಂತೆ ನೋಡಬೇಕು ಎಂದು ಹೇಳಿದ್ದಾರೆ,
ಆಕೆಯ ಮೇಲೆ ಅಕ್ರಮಣ ಮಾಡಲು ಪ್ರಯತ್ನಿಸಿದ ಆತ ಆಕೆಯ ತಲೆಯನ್ನು ಪದೇ ಪದೇ ಗೋಡೆಗೆ ಬಡಿದಿದ್ದಾನೆ, ಸುಮಾರು 30 ನಿಮಿಷಗಳ ಹೋರಾಟದ ನಂತರ ಆತನಿಂದ ತಪ್ಪಿಸಿಕೊಳ್ಳಲು ಸಫಲರಾಗಿದ್ದಾರೆ, ನಂತರ ಆಕೆ ಜೋರಾಗಿ ಕಿರುಚಿಕೊಂಡಿದ್ದಾರೆ, ನಂತರ ರೂಂ ನಿಂದ ಓಡಿಹೋಗಿ, ವಿಷಯವನ್ನು ಯಾರಿಗೂ ತಿಳಿಸದಂತೆ ಬೆದರಿಕೆ ಹಾಕಿದ್ದಾನೆ,
ಆರೋಪಿ ಮುಖರ್ಜಿ ತಾಯಿ ಮತ್ತು ಮಹಿಳೆ ಇಬ್ಬರು ಕೊಲ್ಕೊತಾದ ಅಪ್ಯಾರೆಲ್ ಕಂಪನಿಯ ಉದ್ಯೋಗಿಯಾಗಿದ್ದಾರೆ. ಕೂಡಲೇ ತನ್ನ ಪತಿಗೆ ಕರೆ ಮಾಡಿದ ಮಹಿಳೆ ನಡೆದ ಘಟನೆಯನ್ನು ತಿಳಿಸಿದ್ದಾರೆ, ಮಹಿಳೆಯ ಪತಿ ಹೊಟೇಲ್ ಸಿಬ್ಬಂದಿಗೆ ಕರೆ ಮಾಡಿ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ, ಆರೋಪಿ ತನ್ನ ತಪ್ಪೊಪ್ಪಿಕೊಂಡಿದ್ದಾನೆ, ಹೋಟೆಲ್ ನ ಸಿಸಿಟಿವಿ ಫೂಟೇಜ್ ಅನ್ನು ಪೊಲೀಸರಿಗೆ ನೀಡಿರುವುದಾಗಿ ಹೋಟೆಲ್ ಮ್ಯಾನೇಜ್ ಮೆಂಟ್ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಬೆಂಗಳೂರುBengaluruRMC Yard police stationRape attemptಅತ್ಯಾಚಾರ ಯತ್ನYouth Arrestಆರ್ ಎಂ ಸಿ ಯಾರ್ಡ್ ಪೊಲೀಸ್ ಠಾಣೆಯುವಕ ಬಂಧನ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


