ಆನ್ ಲೈನ್ ನಲ್ಲಿ ಬನ್ನೇರುಘಟ್ಟ ಮೃಗಾಲಯಕ್ಕೆ ಟಿಕೆಟ್ ಬುಕ್ಕಿಂಗ್ ವ್ಯವಸ್ಥೆ
ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನಕ್ಕೆ ಭೇಟಿ ನೀಡಲು ಪ್ರವಾಸಿಗರು ಇನ್ನುಮುಂದೆ ಸರತಿ ಸಾಲಲ್ಲಿ ನಿಲ್ಲುವಂತಿಲ್ಲ, ಏಕೆಂದರೆ ಆನ್ ಲೈನ್ ನಲ್ಲೂ ಇನ್ನು ಮುಂದೆ ಬುಕ್ ಮಾಡಬಹುದಾಗಿದೆ. ಜೊತೆಗೆ ಸಫಾರಿಗೂ ಟಿಕೆಟ್ ಬುಕಿಂಗ್ ಮಾಡಬಹುದಾಗಿದೆ.

ಬೆಂಗಳೂರು: ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನಕ್ಕೆ ಭೇಟಿ ನೀಡಲು ಪ್ರವಾಸಿಗರು ಇನ್ನುಮುಂದೆ ಸರತಿ ಸಾಲಲ್ಲಿ ನಿಲ್ಲುವಂತಿಲ್ಲ, ಏಕೆಂದರೆ ಆನ್ ಲೈನ್ ನಲ್ಲೂ ಇನ್ನು ಮುಂದೆ ಬುಕ್ ಮಾಡಬಹುದಾಗಿದೆ. ಜೊತೆಗೆ ಸಫಾರಿಗೂ ಟಿಕೆಟ್ ಬುಕಿಂಗ್ ಮಾಡಬಹುದಾಗಿದೆ.
ಕಳೆದ ವರ್ಷ ಆನ್ ಲೈನ್ ನಲ್ಲಿ ಟಿಕೆಟ್ ಬುಕ್ಕಿಂಗ್ ಆರಂಭಿಸಲಾಗಿತ್ತು. ಆದರೆ ತಾಂತ್ರಿಕ ಕಾರಣಗಳಿಂದಾಗಿ ಸಫಲವಾಗಲಿಲ್ಲ, ಪ್ರವಾಸಿಗರಿಂದ ಫೀಡ್ ಬ್ಯಾಕ್ ತೆಗೆದುಕೊಂಡು ಮತ್ತಷ್ಟು ಸುಧಾರಿತ ಕ್ರಮ ಅನುಸರಿಸಲಾಗಿದೆ. ಸದ್ಯಕ್ಕೆ ಶೇ. 50 ರಷ್ಟು ಟಿಕೆಟ್ ಲಭ್ಯವಾಗಲಿದೆ.
ಕೌಂಟರ್ ನಲ್ಲಿ ಕೂಡ ಜನ ಟಿಕೆಟ್ ಖರೀದಿಸಬಹುದಾಗಿದೆ, ಇದೊಂದು ಡೈನಾಮಿಕ್ ಆನ್ ಲೈನ್ ಟಿಕೆಟ್ ಬುಕ್ಕಿಂಗ್ ವ್ಯವಸ್ಥೆಯಾಗಿದೆ. ಸುಮಾರು 30 ಬಸ್ ಗಳಿದ್ದು 5ಸಾವಿರ ಜನರನ್ನು ಸಫಾರಿಗೆ ಕರೆದೊಯ್ಯಬಹುದಾಗಿದೆ. ಆನ್ ಲೈನ್ ನಲ್ಲಿ ಟಿಕೆಟ್ ಬುಕ್ಕಿಂಗ್ ಮಾಡಿದವರಿಗೆ ಹಾಗೂ ಕೌಂಟರ್ ನಲ್ಲಿ ಟಿಕೆಟ್ ಖರಿದಿಸಿವರಿಗೆ ಸಮಾನವಾದ ಆದ್ಯತೆ ನೀಡಲಾಗುವುದು.
ಯಾರೂ ಹೊರಗೆ ಇರದಂತೆ ಆನ್ ಲೈನ್ ಟಿಕೆಟ್ ವ್ಯವಸ್ಥೆ ಮಾಡಲಾಗುವುದು, ಒಂದು ವೇಳೆ ಟಿಕೆಟ್ ಖಾಲಿಯಾದರೇ ಕೌಂಟರ್ ಕ್ಲೋಸ್ ಮಾಡಲಾಗುತ್ತದೆ. ಆದರೆ ಈಗ ಆನ್ ಲೈನ್ ನಲ್ಲಿ ಇರುವುದರಿಂದ ಜನರು ರಜಾ ದಿನಗಳಲ್ಲಿ ಬರಲು ಟಿಕೆಟ್ ಬುಕ್ ಮಾಡಬಹುದು ಮತ್ತು ತಮಗೆ ಬೇಕಾದ ದಿನಕ್ಕೆ ಮುಂಗಡವಾಗಿ ಟಿಕೆಟ್ ಬುಕ್ಕಿಂಗ್ ಮಾಡಬಹುದಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


