ಆನ್ ಲೈನ್

ಹಾಪ್ ಕಾಮ್ಸ್ ವತಿಯಿಂದ ಹಣ್ಣಿನ ಮೇಳ: ತಾಜಾ ಉತ್ಪನ್ನಗಳಿಗಾಗಿ Online ಸೇವೆ ಲಭ್ಯ!
ತೋಟಗಾರಿಕಾ ಉತ್ಪಾದಕರ ಸಹಕಾರಿ ಮಾರುಕಟ್ಟೆ ಮತ್ತು ಸಂಸ್ಕರಣಾ ಸೊಸೈಟಿ (ಹಾಪ್‌ಕಾಮ್ಸ್) ತನ್ನ ವ್ಯಾಪ್ತಿಯನ್ನು ವಿಸ್ತರಿಸಲು ಓಪನ್ ನೆಟ್‌ವರ್ಕ್ ಫಾರ್ ಡಿಜಿಟಲ್ ಕಾಮರ್ಸ್ (ONDC) ಮೂಲಕ ಆನ್‌ಲೈನ್ ಪ್ಲಾಟ್‌ಫಾರ್ಮ್ ಪ್ರಾರಂಭಿಸಿದೆ.

ಮುಂಬೈ: ಆನ್ ಲೈನ್ ನಲ್ಲಿ ತರಿಸಿದ್ದ cone ಐಸ್ ಕ್ರೀಮ್ ನಲ್ಲಿ ಮಾನವನ ಬೆರಳು ಪತ್ತೆ!
ಐಸ್ ಕ್ರೀಮ್ ಗಾಗಿ ಆರ್ಡರ್ ಮಾಡಿದ್ದ ಮಹಿಳೆ ತಾನು ಸೇವಿಸುತ್ತಿದ್ದ ಪದಾರ್ಥದಲ್ಲಿ ಮನುಷ್ಯನ ಬೆರಳು ಇದ್ದದ್ದನ್ನು ಕಂಡು ದಂಗಾಗಿದ್ದಾರೆ.

ಇದೇ ಮೊದಲ ಬಾರಿಗೆ ಆನ್‌ಲೈನ್‌ನಲ್ಲಿ ಬೆಂಗಳೂರಿನ ಡಾ. ಕಾರಂತ್ ಲೇಔಟ್ ಬಿಡಿಎ ಸೈಟ್‌ಗಳ ಹಂಚಿಕೆ!
ಮೇ 30ರಂದು ಕರ್ನಾಟಕ ಹೈಕೋರ್ಟ್ ಡಾ.ಶಿವರಾಮ ಕಾರಂತ ಬಡಾವಣೆ ನಿವೇಶನ ಹಂಚಿಕೆಗೆ ಹಸಿರು ನಿಶಾನೆ ತೋರುವ ನಿರೀಕ್ಷೆಯಲ್ಲಿರುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಆನ್‌ಲೈನ್‌ನಲ್ಲಿ ಸಾರ್ವಜನಿಕರಿಗೆ ನಿವೇಶನ ಹಂಚಿಕೆ ಮಾಡಲು ಸಿದ್ಧತೆ ನಡೆಸಿದೆ.

ಆನ್‌ಲೈನ್ ಹಣದ ವಹಿವಾಟು ಪತ್ತೆ ಹಚ್ಚುವುದು ದೊಡ್ಡ ಸವಾಲು: ಮುಖ್ಯ ಚುನಾವಣಾಧಿಕಾರಿ (ಸಂದರ್ಶನ)
ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ನೀಡಿದ ವಿಶೇಷ ಸಂದರ್ಶನದಲ್ಲಿ, ಮಾತನಾಡಿರುವ ಕರ್ನಾಟಕದ ಮುಖ್ಯ ಚುನಾವಣಾ ಅಧಿಕಾರಿ ಮನೋಜ್‌ಕುಮಾರ್ ಮೀನಾ ಅವರು ಆನ್‌ಲೈನ್ ಹಣದ ವಹಿವಾಟುಗಳನ್ನು ವಿಶೇಷವಾಗಿ ಯುಪಿಐ (ಯುನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್) ಮೂಲಕ ಮಾಡುವ ಬಗ್ಗೆ ನಿಗಾ ಇಡುವುದು ಸವಾಲಿನ ಸಂಗತಿಯಾಗಿದೆ ಎಂದಿದ್ದಾರೆ.

ಶೀಘ್ರದಲ್ಲೇ ಆನ್ ಲೈನ್ ನಲ್ಲಿ ಹಿಂದೂ ವಿವಾಹ ಪ್ರಮಾಣಪತ್ರ ಲಭ್ಯ
ಮುದ್ರಾಂಕ ಮತ್ತು ನೋಂದಣಿ ಇಲಾಖೆಯು ಶೀಘ್ರದಲ್ಲೇ ಹಿಂದೂ ವಿವಾಹ ಪ್ರಮಾಣಪತ್ರಗಳನ್ನು ಆನ್‌ಲೈನ್‌ನಲ್ಲಿ ನೀಡಲಿದೆ. ಸದ್ಯ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಪ್ರಕ್ರಿಯೆ ನಡೆಯುತ್ತಿದೆ.

ಹಿಮಾಚಲ ಪ್ರದೇಶ: ವರುಣನ ಆರ್ಭಟದ ನಡುವೆ ಆನ್‌ಲೈನ್‌ನಲ್ಲಿ ವಿವಾಹವಾದ ದಂಪತಿ!
ಹಿಮಾಚಲ ಪ್ರದೇಶದಲ್ಲಿ ಕಳೆದ ಮೂರು ದಿನಗಳಿಂದ ಎಡೆಬಿಡದೆ ಮಳೆಯಾಗುತ್ತಿದ್ದು, ವರುಣನ ಆರ್ಭಟದ ನಡುವೆಯೂ ಜೋಡಿಯೊಂದು ಆನ್ ಲೈನ್ ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ.

ಬೆಂಗಳೂರು: ಆನ್‌ಲೈನ್ ಸೆಕ್ಸ್ ಚಾಟ್ ದಂಧೆ; 10 ಸಾವಿರ ರೂಪಾಯಿ ಕಳೆದುಕೊಂಡ ವ್ಯಕ್ತಿ
38 ವರ್ಷದ ಖಾಸಗಿ ಸಂಸ್ಥೆಯ ಉದ್ಯೋಗಿಯೊಬ್ಬರು ಆನ್‌ಲೈನ್ ಲೈವ್ ಸೆಕ್ಸ್ ಚಾಟ್ ರೂಮ್‌ನಲ್ಲಿ ಮಹಿಳೆಯೊಂದಿಗೆ 10 ನಿಮಿಷಗಳ ಚಾಟ್‌ನಲ್ಲಿ 10,000 ರೂಪಾಯಿಗಳನ್ನು ಕಳೆದುಕೊಂಡಿದ್ದಾರೆ.

ಕಂದಾಯ ಇಲಾಖೆಯಲ್ಲಿ ಬದಲಾವಣೆ ಪರ್ವ: ಆನ್ ಲೈನ್ ನಲ್ಲಿ ಆಸ್ತಿ ನೋಂದಣಿ ಶೀಘ್ರವೇ ಜಾರಿ; ಕಾವೇರಿ–2 ತಂತ್ರಾಂಶಕ್ಕೆ ಸಚಿವ ಆರ್.ಅಶೋಕ್ ಚಾಲನೆ
ಆಸ್ತಿಗಳ ನೋಂದಣಿ ಪ್ರಕ್ರಿಯೆ ಸರಳಗೊಳಿಸುವ, ಕೇವಲ 10 ನಿಮಿಷದಲ್ಲಿ ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸುವ ನಾಗರಿಕ ಸ್ನೇಹಿ ಕಾವೇರಿ–2 ತಂತ್ರಾಂಶಕ್ಕೆ ಕಂದಾಯ ಸಚಿವ ಆರ್.ಅಶೋಕ್ ಗುರುವಾರ ಚಾಲನೆ ನೀಡಿದರು.

ಸಂಸದ ಬಿ.ವೈ ರಾಘವೇಂದ್ರ ಖಾತೆಯಿಂದ 15 ಲಕ್ಷ ರೂ. ಎಗರಿಸಿದ್ದ ಕ್ರಿಮಿನಲ್: ಹಣ ಕಳೆದುಕೊಂಡಿದ್ದೇಗೆ ಮಾಜಿ ಸಿಎಂ ಪುತ್ರ?
ಕೆಲವು ತಿಂಗಳ ಹಿಂದೆ ರಾಷ್ಟ್ರೀಕೃತ ಬ್ಯಾಂಕ್‌ನ ನಕಲಿ ಚೆಕ್‌ನಲ್ಲಿ ತಮ್ಮ ಸಹಿಯನ್ನು ನಕಲಿ ಮಾಡಿ 14-15 ಲಕ್ಷ ರೂಪಾಯಿಗಳನ್ನು ನನ್ನ ಬ್ಯಾಂಕ್ ಖಾತೆಯಿಂದ ಲಪಟಾಯಿಸಿದ್ದರು ಎಂದು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಪುತ್ರ, ಶಿವಮೊಗ್ಗ ಸಂಸದ ಬಿವೈ ರಾಘವೇಂದ್ರ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.

