ಅತ್ಯಾಚಾರ ಎಸಗಿ ಚಿತ್ರಹಿಂಸೆ ನೀಡಿದ ಮೌಲ್ವಿ ಬಂಧನ
ಮೌಲ್ವಿಯೊಬ್ಬ ಯುವತಿಯನ್ನು ಮನೆಗೆಲಸಕ್ಕೆಂದು ಕರೆತಂದು ಅತ್ಯಾಚಾರ, ದೌರ್ಜನ್ಯ ಎಸಗಿರುವ ಘಟನೆ ನಗರದ ಕೋರಮಂಗಲದ ಮನೆಯೊಂದರಲ್ಲಿ ನಡೆದಿದೆ.

ಬೆಂಗಳೂರು: ಮೌಲ್ವಿಯೊಬ್ಬ ಯುವತಿಯನ್ನು ಮನೆಗೆಲಸಕ್ಕೆಂದು ಕರೆತಂದು ಅತ್ಯಾಚಾರ, ದೌರ್ಜನ್ಯ ಎಸಗಿರುವ ಘಟನೆ ನಗರದ ಕೋರಮಂಗಲದ ಮನೆಯೊಂದರಲ್ಲಿ ನಡೆದಿದೆ.
ರೆಹಬಾರಿಯಾ ಇಸ್ಲಾಮ್ ಫರ್ವೇಜ್ ಎಂಬಾತ ನಾಲ್ಕು ವರ್ಷಗಳ ಹಿಂದೆ ಬಿಹಾರ ಮೂಲದ ಯುವತಿಯೋರ್ವಳನ್ನು ಮನೆಗೆಲಸಕ್ಕೆಂದು ತಂದು ಅತ್ಯಾಚಾರ ಎಸಗಿ ನಂತರ ಐರನ್ ಬಾಕ್ಸ್ನಿಂದ ಆಕೆಯ ದೇಹವನ್ನು ಸುಟ್ಟು ವಿಕೃತಿ ಮೆರೆದಿದ್ದಾನೆ ಎಂದು ತಿಳಿದು ಬಂದಿದೆ. ಕೆಲಸಕ್ಕೆಂದು ಯುವತಿಯನ್ನು ಕರೆತಂದು, ಆಕೆಯನ್ನು ಗೃಹ ಬಂಧನದಲ್ಲಿಟ್ಟು ಅತ್ಯಾಚಾರ ನಡೆಸಿದ್ದಲ್ಲದೇ, ಯುವತಿಯ ಗುಪ್ತಾಂಗಕ್ಕೆ ಇಸ್ತ್ರಿ ಪೆಟ್ಟಿಗೆಯಿಂದ ಸುಟ್ಟು ಚಿತ್ರಹಿಂಸೆ ನೀಡಿದ್ದಾನೆ ಎನ್ನಲಾಗಿದೆ.
'ಬಿಹಾರದಿಂದ ಕೆಲಸಕ್ಕೆಂದು 4 ವರ್ಷಗಳ ಹಿಂದೆ ಯುವತಿಯನ್ನು ಕರೆತಂದಿದ್ದ ಫರ್ವೇಜ್ ಪತ್ನಿ ಖಾಸಗಿ ಕಂಪನಿಯಲ್ಲಿ ಸಾಫ್ಟ್ವೇರ್ ಉದ್ಯೋಗಿಯಾಗಿದ್ದಾರೆ. ಯುವತಿಯನ್ನು ಕೆಲಸಕ್ಕೆಂದು ಮನೆಗೆ ಕರೆತಂದು ಇಟ್ಟುಕೊಂಡಿದ್ದ ಫರ್ವೇಜ್ ಆಕೆಯನ್ನು ಮನೆಯಿಂದ ಆಚೆ ಹೋಗಲು ಬಿಡುತ್ತಿರಲಿಲ್ಲ. ಪತ್ನಿ ಆಫೀಸಿಗೆ ಹೋದ ನಂತರ ಸಂತ್ರಸ್ತೆಗೆ ಚಿತ್ರಹಿಂಸೆ ನೀಡಿ ಅತ್ಯಾಚಾರ ನಡೆಸುತ್ತಿದ್ದ. ಫರ್ವೇಜ್ ವಿರುದ್ಧ ಐಪಿಸಿ ಸೆಕ್ಷನ್ 344 ಅಡಿ ಅಕ್ರಮ ಬಂಧನ, 376 ಅಡಿ ಅತ್ಯಾಚಾರ, 307 ಅಡಿ ಕೊಲೆ ಯತ್ನ, 506,507 ಅಡಿ ಬೈಗುಳ, ಜೀವ ಬೆದರಿಕೆ ಆರೋಪದಡಿ ಕೋರಮಂಗಲ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


