ರಾಜ್ಯ

ಕೊಪ್ಪಳ: ಕುಕನೂರಿನ ಹೊರವಲಯದಲ್ಲಿ ಅರೆಬೆಂದ ಶವ ಪತ್ತೆ, ಕೊಲೆ ಶಂಕೆ

ಕೊಪ್ಪಳ ಜಿಲ್ಲೆಯ ಕುಕುನೂರಿನ ಹೊರವಲಯದಲ್ಲಿ ಅರೆಬೆಂದ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆಯಾಗಿದ್ದು, ದುಷ್ಕರ್ಮಿಗಳು ಕೊಲೆ ಮಾಡಿ ಸುಟ್ಟು ಹಾಕಿರುವ ಶಂಕೆ ವ್ಯಕ್ತವಾಗಿದೆ.

ಕೊಪ್ಪಳ: ಕುಕನೂರಿನ ಹೊರವಲಯದಲ್ಲಿ ಅರೆಬೆಂದ ಶವ ಪತ್ತೆ, ಕೊಲೆ ಶಂಕೆ
ಮಹಮದ್‌ರಫಿ ಕಲ್ಲೂರು
Published On :

ಕೊಪ್ಪಳ: ಕೊಪ್ಪಳ ಜಿಲ್ಲೆಯ ಕುಕುನೂರಿನ ಹೊರವಲಯದಲ್ಲಿ ಅರೆಬೆಂದ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆಯಾಗಿದ್ದು, ದುಷ್ಕರ್ಮಿಗಳು ಕೊಲೆ ಮಾಡಿ ಸುಟ್ಟು ಹಾಕಿರುವ ಶಂಕೆ ವ್ಯಕ್ತವಾಗಿದೆ.

ಮೃತ ವ್ಯಕ್ತಿ ಬಳಗೇರಿ ಗ್ರಾಮದ ಮಹಮದ್‌ರಫಿ ಕಲ್ಲೂರು(22) ಎಂದು ಗುರುತಿಸಲಾಗಿದೆ. ನಿನ್ನೆ ರಾತ್ರಿ ಮನೆಯಲ್ಲಿ ಊಟ ಮಾಡಿ ಬೈಕ್ ತೆಗೆದುಕೊಂಡು ಹೊರಗಡೆ ಹೋಗಿದ್ದ ಮಹಮದ್ ಇಂದು ಬೆಳಗ್ಗೆ ಶವವಾಗಿ ಪತ್ತೆಯಾಗಿದ್ದಾನೆ.

ಕುಕನೂರಿನ ಕೊಪ್ಪಳ ರಸ್ತೆಯ ಹೊರವಲಯದ ಹೊಲವೊಂದರಲ್ಲಿ ಇಂದು ಬೆಳಗ್ಗೆ ಶವ ಪತ್ತೆಯಾಗಿದ್ದು, ದೂರದಲ್ಲಿ ಬೈಕ್, ಪರ್ಸ್, ಮೊಬೈಲ್, ಚಪ್ಪಲಿ ಬಿದ್ದಿದ್ದು, ಇದು ಆತ್ಮಹತ್ಯೆಯೊ? ಕೊಲೆಯೊ? ಎಂಬುದು ತನಿಖೆಯಿಂದ ತಿಳಿದು ಬರಬೇಕಿದೆ.

ಈ ಕುರಿತು ಕುಕನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.