ರಾಜ್ಯ

ಬೆಂಗಳೂರು: ಗಂಡನ ಕಿರುಕುಳಕ್ಕೆ ಬೇಸತ್ತು 21ನೇ ಮಹಡಿಯಿಂದ ಜಿಗಿದು ಮಹಿಳೆ ಆತ್ಮಹತ್ಯೆ

ಗಂಡನ ಕಿರುಕುಳದಿಂದ ಬೇಸತ್ತ ಗೃಹಿಣಿಯೊಬ್ಬರು ಅಪಾರ್ಟ್‍ಮೆಂಟ್‍ನ 21ನೇ ಮಹಡಿಯಿಂದ ಜಿಗಿದು ಗೃಹಿಣಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊತ್ತನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರಾತ್ರಿ ನಡೆದಿದೆ.

ಬೆಂಗಳೂರು: ಗಂಡನ ಕಿರುಕುಳಕ್ಕೆ ಬೇಸತ್ತು 21ನೇ ಮಹಡಿಯಿಂದ ಜಿಗಿದು ಮಹಿಳೆ ಆತ್ಮಹತ್ಯೆ
ಸಾಂದರ್ಭಿಕ ಚಿತ್ರ
Published On :

ಬೆಂಗಳೂರು: ಗಂಡನ ಕಿರುಕುಳದಿಂದ ಬೇಸತ್ತ ಗೃಹಿಣಿಯೊಬ್ಬರು  ಅಪಾರ್ಟ್‍ಮೆಂಟ್‍ನ 21ನೇ ಮಹಡಿಯಿಂದ ಜಿಗಿದು ಗೃಹಿಣಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊತ್ತನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರಾತ್ರಿ ನಡೆದಿದೆ. 

ಭಾರತಿ ಸಿಟಿ ಸಮೀಪದ ನೈಕೊ ಹೋಮ್ಸ್ ಟವರ್ ಎಂಬ ಅಪಾರ್ಟ್‍ಮೆಂಟ್‍ನಲ್ಲಿ ವಾಸವಾಗಿದ್ದ ಚಾಂದಿನಿ ಸಿಂಗ್(26) ಆತ್ಮಹತ್ಯೆ ಮಾಡಿಕೊಂಡಿರುವ ಗೃಹಿಣಿ.

ಸಾಫ್ಟ್ ವೇರೇ ಇಂಜಿನಿಯರ್ ಆಗಿರುವ ರಿತೇಶ್ ಸಿಂಗ್ ಅವರನ್ನು ನಾಗಪುರ ಮೂಲದ ಚಾಂದಿನಿ ಸಿಂಗ್ ವಿವಾಹವಾಗಿದ್ದರು. ದಂಪತಿ ಈ ಅಪಾರ್ಟ್‍ಮೆಂಟ್‍ನ 21ನೇ ಮಹಡಿಯಲ್ಲಿ ವಾಸವಾಗಿದ್ದರು.
 
ಈ ನಡುವೆ ಚಾಂದಿನಿ ರಾತ್ರಿ 21ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು ಕಾರಣ ತಿಳಿದು ಬಂದಿಲ್ಲ. 

ಸುದ್ದಿ ತಿಳಿದ ಕೊತ್ತನೂರು ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.  ಚಾಂದಿನ ಪತಿ ರಿತೇಶ್ ಸಿಂಗ್  ಆಕೆಗೆ ಕಿರುಕುಳ ನೀಡುತ್ತಿದ್ದ ಎಂದು ಮೃತ ಮಹಿಳೆ ತಂದೆ ಆರೋಪಿಸಿದ್ದಾರೆ, ಕೆಲ ದಿನಗಳ ಹಿಂದೆ ರಿತೇಶ್ ಸಿಂಗ್ ಪೋಷಕರ ಜೊತೆ ಜಗಳವಾಡಿಕೊಂಡಿದ್ದಳು, ನಂತರ ಬೇರೆ ಮನೆ ಮಾಡುವಂತೆ ಹಠ ಹಿಡಿದಿದ್ದಳು, ಆದರೆ ಇದಕ್ಕೆ ಒಪ್ಪದ ಆತ ಹೊಂದಿಕೊಂಡು ಹೋಗುವಂತೆ ಹೇಳಿದ್ದ. 

ಜೊತೆಗೆ ಆಕೆ ಕೆಲಸಕ್ಕೆ ಹೋಗಲು ಬಯಸಿದ್ದಳು, ಈ ವಿಷಯಕ್ಕೆ ಸಂಬಂಧಿಸಿದಂತೆ ರಾತ್ರಿ ಊಟದ ಸಮಯದಲ್ಲಿ ಜಗಳ ನಡೆದಿತ್ತು,  ಇದರಿಂದ ಬೇಸತ್ತ ಆಕೆ 21ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆಕೆಯ ತಂದೆಯ ಹೇಳಿಕೆ ನಂತರ ಪತಿ ರಿತೇಶ್ ನನ್ನು ಪೊಲೀಸರು ಬಂಧಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.