ಟರ್ಕಿಯಿಂದ ಮಂಗಳೂರಿಗೆ ಬಂತು 50 ಟನ್ ಈರುಳ್ಳಿ
ಈರುಳ್ಳಿ ಈಗ ಗ್ರಾಹಕ ಮತ್ತು ಬೆಳೆಗಾರ ಇಬ್ಬರಲ್ಲೂ ಕಣ್ಣೀರು ಹರಿಸುತ್ತಿದೆ. ಬೆಲೆ ಕೇಳಿದರೆ ತಲೆ ಚಕ್ಕರ್ ಹೊಡೆದಂತಾಗುತ್ತಿದೆ. ಏನೂ ಮಾಡಿದರೂ ಬೆಲೆ ಮಾತ್ರ ಕಡಿಮೆಯಾಗುತ್ತಿಲ್ಲ, ಮಧ್ಯವರ್ತಿಗಳ ದುರಾಸೆಯೂ ಕೊನೆಯಾಗುತ್ತಿಲ್ಲ!

ಮಂಗಳೂರು: ಈರುಳ್ಳಿ ಈಗ ಗ್ರಾಹಕ ಮತ್ತು ಬೆಳೆಗಾರ ಇಬ್ಬರಲ್ಲೂ ಕಣ್ಣೀರು ಹರಿಸುತ್ತಿದೆ. ಬೆಲೆ ಕೇಳಿದರೆ ತಲೆ ಚಕ್ಕರ್ ಹೊಡೆದಂತಾಗುತ್ತಿದೆ. ಏನೂ ಮಾಡಿದರೂ ಬೆಲೆ ಮಾತ್ರ ಕಡಿಮೆಯಾಗುತ್ತಿಲ್ಲ, ಮಧ್ಯವರ್ತಿಗಳ ದುರಾಸೆಯೂ ಕೊನೆಯಾಗುತ್ತಿಲ್ಲ!
ಬೆಳೆ ಕಳೆದುಕೊಂಡ ರೈತರು ಮಾಡಿದ ಸಾಲ ತೀರಿಸುವುದು ಹೇಗಪ್ಪ ಎಂದು ತಲಮೇಲೆ ಕೈಹೊತ್ತು ಕುಳಿತರೆ ದುಬಾರಿ ಬೆಲೆಯಲ್ಲಿ ಈರುಳ್ಳಿ ಕೊಳ್ಳುವುದು ಹೇಗೆ ಎಂಬ ಚಿಂತೆ ಗ್ರಾಹಕರನ್ನೂ ಕಾಡುತ್ತಿದೆ.
ಈಜಿಪ್ಟ್ ನಂತರ ಟರ್ಕಿಯಿಂದ ಮಂಗಳೂರಿಗೆ 50 ಟನ್ ಈರುಳ್ಳಿ ಹಡಗಿನ ಮೂಲಕ ಪೂರೈಕೆಯಾಗಿ ಹಳೆಯ ಬಂದರಿಗೆ ಆಗಮಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಷ್ಟಾದಾರೂ ಸಹ, ದೇಶೀಯ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಕಡಿಮೆಯಾಗಿಲ್ಲ. ಗ್ರಾಹಕರ ಕಣ್ಣಲ್ಲಿ ನೀರು ತರಿಸುತ್ತಲೇ ಇದೆ ಎಂದು ಮಂಗಳೂರು ಸೆಂಟ್ರಲ್ ಮಾರುಕಟ್ಟೆಯಲ್ಲಿನ ವ್ಯಾಪಾರಿಗಳು ಅಭಿಪ್ರಾಯಪಟ್ಟಿದ್ದಾರೆ.
ಕೇಂದ್ರ ಮಾರುಕಟ್ಟೆಯಲ್ಲಿ ಈರುಳ್ಳಿಯನ್ನು ಕೆಜಿಗೆ 120 ರೂಪಾಯಿ ದರದಲ್ಲಿ ಮಾರಾಟವಾಗುತ್ತಿದೆ. ಇತರೆ ನಗರಗಳಲ್ಲಿ ಇದು 150 ಗಡಿದಾಟುವ ಅಪಾಯವೂ ಎದುರಾಗಿದೆ.
ವ್ಯಾಪಾರಿಗಳ ಪ್ರಕಾರ, ಮಧ್ಯವರ್ತಿಗಳು ಈರುಳ್ಳಿಯ ಬೆಲೆಯನ್ನು ನಿಗದಿಪಡಿಸಿದ್ದು, ಇವರ ಹುನ್ನಾರ, ತಂತ್ರ ಕೊನೆಗಾಣಿಸಲು ಮೊದಲು ಕ್ರಮಜರುಗಿಸಬೇಕು ಎಂಬ ಮಾತು ಕೇಳಿ ಬರುತ್ತಿದೆ.
ಹಿಂದೆ, ಪುಣೆ ಮತ್ತು ಹುಬ್ಬಳ್ಳಿಯಿಂದ ತಂದ ಈರುಳ್ಳಿಯ ಬೆಲೆಯನ್ನು ಸಾರಿಗೆ ವೆಚ್ಚದ ಆಧಾರದ ಮೇಲೆ ನಿಗದಿಪಡಿಸಲಾಗುತ್ತಿತ್ತು. ಆದರೆ ಈಗ ಬೆಲೆ ನಿರಂತರವಾಗಿ ಏರುತ್ತಿದೆ ಎಂದು ಪ್ರಧಾನ ಕಾರ್ಯದರ್ಶಿ, ಬಂದರ್ ಶ್ರಮಿಕರ ಸಂಘದ ಬಿ ಕೆ ಇಮ್ತಿಯಾಜ್ ಆತಂಕ ತೋಡಿಕೊಂಡರು.
ಈರುಳ್ಳಿಯ ಬೆಲೆಯನ್ನು ಪರಿಶೀಲಿಸುವಂತೆ ಒತ್ತಾಯಿಸಿ ಸಂಘದ ಸದಸ್ಯರು ಗುರುವಾರ ಪ್ರತಿಭಟನೆ ನಡೆಸುವುದಾಗಿಯೂ ಅವರು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


