ರಾಜ್ಯ

ಅಡಿಕೆ ಕದಿಯಲು ಬಂದವನ ಮೇಲೆ ಗುಂಡಿನ ದಾಳಿ: ಕಳ್ಳ ಸ್ಥಳದಲ್ಲೇ ಸಾವು

ಅಡಿಕೆ ಕದಿಯಲು ಬಂದಿದ್ದ ಕಳ್ಳನೊಬ್ಬನ ಮೇಲೆ ಮನೆಯ ಮಾಲೀಕ ಗುಂಡು ಹಾರಿಸಿದ ಪರಿಣಾಮ ಆತ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಕೊಡಗು ಜಿಲ್ಲೆಯ ಕರಿಕೆ ಎಂಬಲ್ಲಿ ನಡೆದಿದೆ.

ಅಡಿಕೆ ಕದಿಯಲು ಬಂದವನ ಮೇಲೆ ಗುಂಡಿನ ದಾಳಿ: ಕಳ್ಳ ಸ್ಥಳದಲ್ಲೇ ಸಾವು
ಅಡಿಕೆ ಕದಿಯಲು ಬಂದವನ ಮೇಲೆ ಗುಂಡಿನ ದಾಳಿ: ಕಳ್ಳ ಸ್ಥಳದಲ್ಲೇ ಸಾವು
Published On :

ಮಡಿಕೇರಿ: ಅಡಿಕೆ ಕದಿಯಲು ಬಂದಿದ್ದ ಕಳ್ಳನೊಬ್ಬನ ಮೇಲೆ ಮನೆಯ ಮಾಲೀಕ ಗುಂಡು ಹಾರಿಸಿದ ಪರಿಣಾಮ ಆತ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಕೊಡಗು ಜಿಲ್ಲೆಯ ಕರಿಕೆ ಎಂಬಲ್ಲಿ ನಡೆದಿದೆ.

ದೇವಂಗೋಡಿ ನಿವಾಸಿ ಗಣೇಶ್​ ಮೃತಪಟ್ಟವರು. ಮಂಡೇಡಿ ಮೊಣ್ಣಪ್ಪ ಅವರ ಮನೆಯಲ್ಲಿದ್ದ ಅಡಿಕೆ ದಾಸ್ತಾನನ್ನು ಕದಿಯಲು ಗಣೇಶ್​ ಗುರುವಾರ ರಾತ್ರಿ ಬಂದಿದ್ದಾನೆ. ಸದ್ದು ಕೇಳಿ ಹೊರಬಂದ ಮಂಡೇಡಿ ಮೊಣ್ಣಪ್ಪ ಅವರು ಮನೆಯಲ್ಲಿದ್ದ ಬಂದೂಕಿನಿಂದ ಗುಂಡು ಹಾರಿಸಿದ್ದಾರೆ. ಗುಂಡ ತಲುಗಿ ಗಣೇಶ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. 

ವಿಷಯ ತಿಳಿದ ಭಾಗಮಂಡಲ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.