ಸಿಲಿಕಾನ್ ಸಿಟಿಯಲ್ಲಿ ರೌಡಿಗಳ ಅಟ್ಟಹಾಸ, ನಡುರಾತ್ರಿಯಲ್ಲಿ ಭೀಕರ ಡಬಲ್ ಮರ್ಡರ್!
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ರೌಡಿಗಳ ಅಟ್ಟಹಾಸ ಮುಂದುವರಿದಿದೆ. ಭಾನುವಾರ ರಾತ್ರಿ ನಗರದ ಜೆಪಿ ನಗರ ಪುಟ್ಟೇನಹಳ್ಳಿಯಲ್ಲಿ ಇಬ್ಬರು ರೌಡಿಗಳನ್ನು ಅಟ್ಟಾಡಿಸಿ ಹೊಡೆದು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಇದರಿಂದ ಸ್ಥಳೀಯ ನಿವಾಸಿಗಳು ಸೇರಿದಂತೆ ನಗರದ ಜನರು ಬೆಚ್ಚಿ ಬೀಳುವಂತಾಗಿದೆ.

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ರೌಡಿಗಳ ಅಟ್ಟಹಾಸ ಮುಂದುವರಿದಿದೆ. ಭಾನುವಾರ ರಾತ್ರಿ ನಗರದ ಜೆಪಿ ನಗರ ಪುಟ್ಟೇನಹಳ್ಳಿಯಲ್ಲಿ ಇಬ್ಬರು ರೌಡಿಗಳನ್ನು ಅಟ್ಟಾಡಿಸಿ ಹೊಡೆದು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಇದರಿಂದ ಸ್ಥಳೀಯ ನಿವಾಸಿಗಳು ಸೇರಿದಂತೆ ನಗರದ ಜನರು ಬೆಚ್ಚಿ ಬೀಳುವಂತಾಗಿದೆ.
ರೌಡಿ ಶೀಟರ್ ತಮ್ಮ ಮಂಜ ಮತ್ತು ನವೀನ್ ಅವರುಗಳನ್ನು ಜೆಪಿ ನಗರದ 24 ನೇ ಮುಖ್ಯ ರಸ್ತೆಯಲ್ಲಿ ಕೊಚ್ಚಿ ಕೊಲೆ ಮಾಡಲಾಗಿದೆ. ಪುಟ್ಟೇನಹಳ್ಳಿ ಜಂಕ್ಷನ್ 24ನೇ ಕ್ರಾಸ್ ನಲ್ಲಿರುವ ಆಕ್ಸಿಸ್ ಬ್ಯಾಂಕ್ ಎಟಿಎಂ ಬಳಿ ನವೀನ್ ಕುಮಾರ್ ಕೊಲೆಯಾದರೆ ಪುಟ್ಟೇನಹಳ್ಳಿ ಜಂಕ್ಷನ್ ಸಮೀಪದ ನಂದನಿ ಹೋಟೆಲ್ ಬಳಿ ತಮ್ಮ ಮಂಜ ಹತ್ಯೆಯಾಗಿದ್ದಾನೆ.
ಎರಡೂ ರೌಡಿಗಳನ್ನು ಕೊಂದದ್ದು ಒಂದೇ ಹಂತಕ ತಂಡ ಎನ್ನಲಾಗಿದ್ದು ಇದರಲ್ಲಿ ನವೀನ್ ರಿಯಲ್ ಎಸ್ಟೇಟ್ ಬೊಲ್ಡರ್ ಒಬ್ಬರ ಮಗನಾದರೆ ತಮ್ಮ ಮಂಜ ರೌಡಿ ಶೀಟರ್ ಆಗಿದ್ದನು.
ಭಾನುವಾರ ರಾತ್ರಿ ನವೀನ್ ಮಂಜನ ಜತೆ ಊಟಕ್ಕೆ ಹೋಗಿದ್ದಾಗ ಈ ಘಟನೆ ನಡೆದಿದೆ. ಏಳರಿಂದ ಹತ್ತು ಜನರಿದ್ದ ಗುಂಪು ಸ್ಯಾಂಟ್ರೊ ಸ್ಪೋರ್ಟ್ಸ್ ಕಾರಲ್ಲಿ ಬಂದು ಬೈಕ್ ಗೆ ಡಿಕ್ಕಿ ಹೊಡೆದಿದ್ದು ಕಾರಿನಲ್ಲೇ ಟ್ಟಾಡಿಸಿಕೊಂಡು ಹಿಗ್ಗಾಮುಗ್ಗಾ ಹೊಡೆಯಲಾಗಿದೆ. ಈ ಹೊಡೆದಾಟದಲ್ಲಿ ಬೀದಿದೀಪದ ಕಂಬವೊಂದು ಮುರಿದು ಬಿದ್ದಿದೆ. ಬಳಿಕ ಮನಬಂದಂತೆ ಲಾಂಗು, ಮಚ್ಚುಗಳಿಂದ ಕೊಚ್ಚಿ ಇಬ್ಬರನ್ನೂ ಹತ್ಯೆ ಮಾಡಲಾಗಿದೆ.
ತಮ್ಮ ಮಂಜನ ವಿರುದ್ಧ ತಲಘಟ್ಟಪುರ ಮತ್ತು ಕುಮಾರಸ್ವಾಮಿ ಲೇಔಟ್ ಠಾಣೆಗಳಲ್ಲಿ ರೌಡಿ ಶೀಟ್ ಇದೆ. ಅಲ್ಲದೆ ಈತ ಟ್ಯಾಬ್ಲೆಟ್ ರಘು ಎಂಬ ರೌಡಿ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿದ್ದ ಎನ್ನಲಾಗಿದ್ದು ಇದೇ ದ್ವೇಷದಿಂದ ಮಂಜನ ಹತ್ಯೆಯು ನಡೆದಿದೆ ಎಂದು ಪೋಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಘಟನೆ ಮಾಹಿತಿ ಪಡೆದ ಪೋಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಹತ್ಯೆ ಮಾಡುವಾಗ ಆಕ್ಸಿಡೆಂಟ್ ಆದ ಕಾರನ್ನು ವಶಕ್ಕೆ ಪಡೆದಿದ್ದಾರೆ. ಕಾರು ವೀರಭಧ್ರಸ್ವಾಮಿ ಎಂಬವರ ಹೆಸರಿನಲ್ಲಿದೆ. ಘಟನೆ ನಡೆದ ಜಾಗದಲ್ಲಿ ಒಂದು ಪೀಠೋಪಕರಣ ಮಳಿಗೆ ಇದ್ದು, ಸಿಸಿ ಕ್ಯಾಮೆರಾ ಇದೆ. ಆದರೆ .ಅದು ಕಳೆದ ಕೆಲ ದಿನಗಳಿಂದ ಕೆಲಸ ಮಾಡುತ್ತಿಲ್ಲ ಎನ್ನಲಾಗಿದೆ. ಘಟನೆ ಕುರಿತು ಜೆಪಿ ನಗರ, ಪುಟ್ಟೇನಹಳ್ಳಿ ಠಾಣೆಗಳಲ್ಲಿ ದೂರು ದಾಖಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


