Gang War

ರಾಜಸ್ಥಾನ: ಥಾರ್, ಬೈಕ್, ಗನ್ ಗಳ ಜೊತೆಗೆ ಭಯಾನಕ ಗ್ಯಾಂಗ್ ವಾರ್! CCTV ಯಲ್ಲಿ ಸೆರೆ
ರಾಜಸ್ಥಾನದ ಬನ್ಸೂರ್‌ನಲ್ಲಿ ಥಾರ್, ಮಾರುತಿ ಸ್ವಿಫ್ಟ್‌ನಲ್ಲಿದ್ದ ಕೆಲವರು ಮೂವರು ಬೈಕ್ ಸವಾರರಿಗೆ ಡಿಕ್ಕಿ ಹೊಡೆಸಿದ್ದಾರೆ. ನಂತರ ಹ್ಯಾಂಡ್‌ಗನ್‌ಗಳನ್ನು ಹೊರತೆಗೆದು ಗುಂಡಿನ ಚಕಮಕಿ ನಡೆಸಿದ್ದಾರೆ. ಇಡೀ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಉಡುಪಿಯಲ್ಲಿ ಗ್ಯಾಂಗ್ ವಾರ್ ಪ್ರಕರಣ: ಮತ್ತೆ ಮೂವರು ಆರೋಪಿಗಳನ್ನು ಬಂಧಿಸಿದ ಪೊಲೀಸರು
ಉಡುಪಿ ನಗರ ಪೊಲೀಸ್ ವ್ಯಾಪ್ತಿಯ ಕುಂಜಿಬೆಟ್ಟುವಿನಲ್ಲಿ ಮೇ 19ರಂದು ಮುಂಜಾನೆ ನಡೆದಿದ್ದ ಗ್ಯಾಂಗ್ ವಾರ್‌ಗೆ ಸಂಬಂಧಿಸಿದಂತೆ ಪೊಲೀಸರು ಭಾನುವಾರ ಮತ್ತೆ ಮೂವರನ್ನು ಬಂಧಿಸಿದ್ದಾರೆ. ಬಂಧಿತರ ಒಟ್ಟು ಸಂಖ್ಯೆ ಈಗ ಆರಕ್ಕೇರಿದೆ. ಬಂಧಿತ ಆರೋಪಿಗಳನ್ನು ಮಜೀದ್, ಅಲ್ಫಾಜ್ ಮತ್ತು ಶರೀಫ್ ಎಂದು ಗುರುತಿಸಲಾಗಿದೆ.

ನಡು ರಸ್ತೆಯಲ್ಲಿ ಗ್ಯಾಂಗ್ ವಾರ್: ಇದು ದೇಶಕ್ಕೆ ಕಾಂಗ್ರೆಸ್ ತೋರಿಸುತ್ತಿರುವ ಕರ್ನಾಟಕ ಮಾಡೆಲ್! ಬಿಜೆಪಿ ಕಿಡಿ
ಎರಡು ಗುಂಪಿನ ನಡುವೆ ಭಯಾನಕ ಗ್ಯಾಂಗ್ ವಾರ್ ನಡೆದಿರುವ ಘಟನೆ ಉಡುಪಿಯ ಕುಂಜಿಬೆಟ್ಟುವಿನಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

ಮಂಗಳೂರಲ್ಲಿ ಗ್ಯಾಂಗ್ ವಾರ್, ಮೂವರು ಯುವಕರಿಗೆ ಗಂಭೀರ ಗಾಯ
ಜುಲೈ 13 ರ ಸೋಮವಾರ ತಡರಾತ್ರಿ ನಗರದ ಬಜಿಲಕೇರಿಯಲ್ಲಿ ನಡೆದ ಘಟನೆಯಲ್ಲಿ, ಮಾರಕ ಆಯುಧ ಹೊಂದಿದ್ದ ಗ್ಯಾಂಗ್ ಮೂವರು ಯುವಕರ ಮೇಲೆ ಹಲ್ಲೆ ನಡೆಸಿದೆ. ಕ್ಷುಲ್ಲಕ ಕಾರಣಗಳಿಂದ ಈ ದಾಳಿ ನಡೆದಿದೆ ಎಂದು ವರದಿಯಾಗಿದೆ.

ಮಂಗಳೂರಲ್ಲಿ ಗ್ಯಾಂಗ್ ವಾರ್: ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯ ಬರ್ಬರ ಹತ್ಯೆ!
ಎರಡು ಗುಂಪುಗಳ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳ ನಡೆದ ಪರಿಣಾಮ ಒಬ್ಬ ವ್ಯಕ್ತಿಯ ಕೊಲೆಯಾಗಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರಿನಲ್ಲಿ ನಡೆದಿದೆ.

ಮಂಗಳೂರಿನಲ್ಲಿ ಮರುಕಳಿಸಿದ ಗ್ಯಾಂಗ್ ವಾರ್, ದುಷ್ಕರ್ಮಿಗಳ ತಂಡದಿಂದ ವ್ಯಕ್ತಿ ಕೊಲೆ
ವ್ಯಕ್ತಿಯೋರ್ವನನ್ನು ದುಷ್ಕರ್ಮಿಗಳು ಕೊಲೆ ಮಾಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ಸುರತ್ಕಲ್ ನಲ್ಲಿ ನಡೆದಿದೆ

ಸಿಲಿಕಾನ್ ಸಿಟಿಯಲ್ಲಿ ರೌಡಿಗಳ ಅಟ್ಟಹಾಸ, ನಡುರಾತ್ರಿಯಲ್ಲಿ ಭೀಕರ ಡಬಲ್ ಮರ್ಡರ್!
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ರೌಡಿಗಳ ಅಟ್ಟಹಾಸ ಮುಂದುವರಿದಿದೆ. ಭಾನುವಾರ ರಾತ್ರಿ ನಗರದ ಜೆಪಿ ನಗರ ಪುಟ್ಟೇನಹಳ್ಳಿಯಲ್ಲಿ ಇಬ್ಬರು ರೌಡಿಗಳನ್ನು ಅಟ್ಟಾಡಿಸಿ ಹೊಡೆದು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಇದರಿಂದ ಸ್ಥಳೀಯ ನಿವಾಸಿಗಳು ಸೇರಿದಂತೆ ನಗರದ ಜನರು ಬೆಚ್ಚಿ ಬೀಳುವಂತಾಗಿದೆ.

ಬೆಂಗಳೂರು: ಗ್ಯಾಂಗ್ ವಾರ್ ನಲ್ಲಿ ಇಬ್ಬರು ರೌಡಿಗಳ ಬರ್ಬರ ಹತ್ಯೆ
ಹಳೇ ದ್ವೇಷದ ಹಿನ್ನೆಲೆಯಲ್ಲಿ ನಡೆದ ಗ್ಯಾಂಗ್ ವಾರ್ ನಲ್ಲಿ ಇಬ್ಬರು ರೌಡಿಗಳು ಬರ್ಬರವಾಗಿ ಹತ್ಯೆಯಾಗಿರುವ ಘಟನೆ ಬನ್ನೇರುಘಟ್ಟ ರಸ್ತೆಯ ವೀವರ್ಸ್ ಕಾಲೋನಿಯಲ್ಲಿ ಬುಧವಾರ ನಡೆದಿದೆ.

ದೆಹಲಿಯ ಬುರಾರಿಯಲ್ಲಿ ಗ್ಯಾಂಗ್ ವಾರ್ : ಮೂವರು ಸಾವು, ಐವರಿಗೆ ಗಾಯ
ಉತ್ತರ ದೆಹಲಿಯ ಬುರಾರಿಯಲ್ಲಿ ಎರಡು ರೌಡಿ ಗುಂಪುಗಳ ನಡುವೆ ಗ್ಯಾಂಗ್ ವಾರ್ ನಡೆದಿದ್ದು, ಪರಸ್ಪರ ಗುಂಡು ಹಾರಿಸಿಕೊಂಡಿದ್ದಾರೆ. ಇದರಿಂದಾಗಿ ರಸ್ತೆಯಲ್ಲಿ ಹೋಗುತ್ತಿದ್ದ ಮಹಿಳೆಯೊಬ್ಬರು ಸೇರಿದಂತೆ ಮೂವರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

