ಕೇರಳ, ಕರ್ನಾಟಕ ಪ್ರವಾಹ: ಸಂತ್ರಸ್ಥರ ನೋವಿಗೆ ಸ್ಪಂದಿಸಿ ತಮಿಳು ನಟ ಸೂರ್ಯ ಸಹೋದರರಿಂದ ದೇಣಿಗೆ
ಕರ್ನಾಟಕ ಮತ್ತು ಕೇರಳದಲ್ಲಿ ಭಾರಿ ಅವಾಂತರ ಸೃಷ್ಟಿಸಿರುವ ಪ್ರವಾಹಕ್ಕೆ ತಮಿಳು ನಟ ಸೂರ್ಯ ಹಾಗೂ ಅವರ ಸಹೋದರ ಕಾರ್ತಿ ಸ್ಪಂದಿಸಿದ್ದು. ಪ್ರವಾಹ ಸಂತ್ರಸ್ಥರ ದೇಣಿಗೆ ನೀಡಿದ್ದಾರೆ.

ಚೆನ್ನೈ: ಕರ್ನಾಟಕ ಮತ್ತು ಕೇರಳದಲ್ಲಿ ಭಾರಿ ಅವಾಂತರ ಸೃಷ್ಟಿಸಿರುವ ಪ್ರವಾಹಕ್ಕೆ ತಮಿಳು ನಟ ಸೂರ್ಯ ಹಾಗೂ ಅವರ ಸಹೋದರ ಕಾರ್ತಿ ಸ್ಪಂದಿಸಿದ್ದು. ಪ್ರವಾಹ ಸಂತ್ರಸ್ಥರ ದೇಣಿಗೆ ನೀಡಿದ್ದಾರೆ.
ಕಾಲಿವುಡ್ ಸೂಪರ್ ಸ್ಚಾರ್ ನಟ ಸೂರ್ಯ ಹಾಗೂ ಅವರ ಸಹೋದರ ಕಾರ್ತಿ ಕೇರಳ ಮತ್ತು ಕರ್ನಾಟಕ ಸಂತ್ರಸ್ತರಿಗೆ ತಲಾ 10 ಲಕ್ಷ ರೂ. ಪರಿಹಾರ ಹಣ ನೀಡಿದ್ದಾರೆ. ತಮಿಳು ಚಲನಚಿತ್ರಗಳ ವಿಮರ್ಶಕ ರಮೇಶ್ ಬಾಲಾ ಈ ಕುರಿತಂತೆ ತಮ್ಮ ಟ್ವಿಟರ್ ಖಾತೆಯಲ್ಲಿ ಇದನ್ನು ಖಚಿತಪಡಿಸಿದ್ದಾರೆ. ನಟರಾದ ಸೂರ್ಯ ಹಾಗೂ ಕಾರ್ತಿಕ್ ಅವರ ಕಾರ್ಯಕ್ಕೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ.
ಪರ ರಾಜ್ಯದ ಜನತೆಯ ಸಂಕಷ್ಟಕ್ಕೆ ಮಿಡಿದ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಪ್ರಶಂಸೆಯ ಮಹಾಪೂರವೇ ಹರಿದು ಬರುತ್ತಿದೆ. ಕನ್ನಡಿಗರು ಕೂಡ ನಟರಿಗೆ ಧನ್ಯವಾದಗಳನ್ನುಅರ್ಪಿಸಿದ್ದಾರೆ. ಇನ್ನು ರಾಜ್ಯದಲ್ಲಿ ಪ್ರವಾಹದಿಂದಾಗಿ ಸಾಕಷ್ಟು ನಷ್ಟ ಸಂಭವಿಸಿದ್ದು, ಪ್ರವಾಹ ಸಂತ್ರಸ್ಥರಿಗೆ ನೆರವಾಗಲು ಸಾಕಷ್ಟು ದಾನಿಗಳು ಮುಂದೆ ಬಂದಿದ್ದಾರೆ. ತಮ್ಮ ಕೈಲಾದಷ್ಟು ನೆರವನ್ನು ಸಿಎಂ ಪರಿಹಾರ ನಿಧಿಗೆ ನೀಡಿದ್ದಾರೆ. ಇನ್ನು ಕೆಲವರು ನೇರವಾಗಿ ಸಂತ್ರಸ್ತರಿಗೆ ಅಗತ್ಯವಸ್ತುಗಳನ್ನು ರವಾನಿಸಿದ್ದಾರೆ. ಸ್ಯಾಂಡಲ್ ವುಡ್ನಲ್ಲಿಯೂ ಸ್ಟಾರ್ ನಟರಾದ ಪುನೀತ್ ರಾಜ್ಕುಮಾರ್, ಸುದೀಪ್, ದರ್ಶನ್, ಯಶ್ ಮುಂತಾದವರು ಪ್ರವಾಹ ಸಂತ್ರಸ್ತರಿಗೆ ಮಿಡಿದು, ತಮ್ಮ ಕೈಲಾದ ಮಟ್ಟಿಗೆ ನೆರವಾಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


