ಬೆಂಗಳೂರು: ಹಾಡಹಗಲೇ 3 ವರ್ಷದ ಬಾಲಕಿ ಅಪಹರಣ, ಕಾರಣ ಇನ್ನೂ ನಿಗೂಢ
ಮೂರು ವರ್ಷದ ಬಾಲಕಿಯೊಬ್ಬಳು ಚಾಕಲೇಟ್ ತರುವುದಕ್ಕೆಂದು ಮನೆಯ ಸಮೀಪದ ಅಂಗಡಿಗೆ ತೆರಳಿದ್ದಾಗ ದ್ವಿಚಕ್ರ ವಾಹನ ದಲ್ಲಿ ಆಗಮಿಸಿದ ದುಷ್ಕರ್ಮಿಗಳು ಅಪಹರಿಸಿದ ಘಟನೆ ಬೆಂಗಳೂರು ಸಂಪಿಗೆಹಳ್ಳಿ ಎಸ್.ಆರ್.ಕೆ ನಗರದಲ್ಲಿ ನಡೆದಿದೆ.

Published On :
ಬೆಂಗಳೂರು: ಮೂರು ವರ್ಷದ ಬಾಲಕಿಯೊಬ್ಬಳು ಚಾಕಲೇಟ್ ತರುವುದಕ್ಕೆಂದು ಮನೆಯ ಸಮೀಪದ ಅಂಗಡಿಗೆ ತೆರಳಿದ್ದಾಗ ದ್ವಿಚಕ್ರ ವಾಹನ ದಲ್ಲಿ ಆಗಮಿಸಿದ ದುಷ್ಕರ್ಮಿಗಳು ಅಪಹರಿಸಿದ ಘಟನೆ ಬೆಂಗಳೂರು ಸಂಪಿಗೆಹಳ್ಳಿ ಎಸ್.ಆರ್.ಕೆ ನಗರದಲ್ಲಿ ನಡೆದಿದೆ.
ಬುಧವಾರ ಹಾಡಹಗಲೇ ಈ ಅಪಹರಣ ಕೃತ್ಯ ನಡೆದಿದ್ದು ಅಪಹರಣ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆದರೆ ಪೋಲೀಸರು ಮಾತ್ರ ಇನ್ನೂ ಆರೋಪಿಯನ್ನು ಪತ್ತೆ ಮಾಡಿಲ್ಲ. ಬಾಲಕಿಗೆ ಅಪಹರಣಕಾರನ ಪರಿಚಯ ಮೊದಲೇ ಇತ್ತು ಎಂದು ಪೋಲೀಸರು ಶಂಕಿಸಿದ್ದಾರೆ. ಅಲ್ಲದೆ ಬಾಲಕಿಯ ಪೋಷಕರು ಸಹ ಪ್ರತಿ ಬಾರಿಯೂ ವಿಭಿನ್ನ ಹೇಳಿಕೆ ನೀಡುತ್ತಿದ್ದಾರೆ.
ಅಪಹೃತ ಬಾಲಕಿಯನ್ನು ಮಮತಾ ಎಂದು ಗುರುತಿಸಲಾಗಿದ್ದು ದಿನಗೂಲಿ ನೌಕರರಾಗಿದುವ ಶರಣಪ್ಪ ಎಂಬುವವರ ಪುತ್ರಿಯಾಗಿದ್ದಾಳೆ.ರಾಯಚೂರು ಮೂಲದ ಈ ಕುಟುಂಬ ಕಳೆದ ನಾಲ್ಕು ವರ್ಷಗಳಿಂದ ಕೆಲಸದ ನಿಮಿತ್ತ ಬೆಂಗಳೂರಿನಲ್ಲಿ ನೆಲೆಸಿದೆ. ಬಾಲಕಿಗೆ ಓರ್ವ ಅಕ್ಕನೂ ಇದ್ದಾಳೆ.
ಮಮತಾ ಬುಧವಾರ ಮಧ್ಯಾಹ್ನ 1:30ರ ವೇಳೆಗೆ ಚಾಕಲೇಟ್ ತರಲಿಕ್ಕಾಗಿ ಅಂಗಡಿಗೆ ತೆರಳಿದವಳು ಒಂದು ಗಂಟೆಯಾದರೂ ಹಿಂತಿರುಗಿಲ್ಲ. ಆ ವೇಳೆ ಶರಣಪ್ಪ ಅಂಗಡಿಗೆ ಹೋಗಿ ವಿಚಾರಿಸಿದಾಗ ಬಾಲಕಿ ಅಲ್ಲಿಗೆ ಆಗಮಿಸಿಯೇ ಇಲ್ಲ ಎಂದು ತಿಳಿದಿದೆ. ಶರಣಪ್ಪ ತಕ್ಷಣ ಸಂಪಿಗೆಹಳ್ಳಿ ಪೋಲೀಸರಿಗೆ ದೂರು ಸಲ್ಲಿಸಿದ್ದಾರೆ.
ಸಮೀಪದ ಅಪಾರ್ಟ್ ಮೆಂಟ್ ನಲ್ಲಿದ್ದ ಸಿಸಿಟಿವಿ ಕ್ಯಾಮರಾದಲ್ಲಿ ಬಾಲಕಿಯನ್ನು ಇಬ್ಬರು ಅಪಹರಣಕಾರರು ಬಟ್ತೆಯನ್ನು ಸುತ್ತಿ ಅಪಹರಿಸಿರುವುದು ಸೆರೆಯಾಗಿದೆ. ಆದರೆ ಅಪಹರಣಕಾರರ ಮುಖ ಸ್ಪಷ್ಟವಾಗಿ ಕಾಣಿಸುತ್ತಿಲ್ಲ, ಅಲ್ಲದೆ ಅಪಹರಣದ ಉದ್ದೇಶ ಇನ್ನೂ ಸ್ಪಷ್ತವಾಗಿಲ್ಲ ಎಂದು ಪೋಲೀಸರು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


