ನನಗೆ ಸೂರು ಕಲ್ಪಿಸುವ ಭರವಸೆ ಕೊಡುವವರಿಗೆ ನನ್ನ ಮತ; ಕೊಪ್ಪಳ ವೃದ್ಧ ಮಹಿಳೆ!
ಪ್ರತಿ ಬಾರಿ ಮತ ಚಲಾಯಿಸುವಾಗಲೂ ನನಗೆ ಸ್ವಂತ ಮನೆಯೊಂದನ್ನು ಕಟ್ಟಿಸಿಕೊಡುತ್ತಾರಾ ಅಂತಾ ಆಶಾ ಭಾವವನ್ನು ಕಟ್ಟಿಕೊಂಡೆ ಮತ ಚಲಾಯಿಸುತ್ತಿದ್ದೇನೆ.

Published On :
ಕೊಪ್ಪಳ: ಪ್ರತಿ ಬಾರಿ ಮತ ಚಲಾಯಿಸುವಾಗಲೂ ನನಗೆ ಸ್ವಂತ ಮನೆಯೊಂದನ್ನು ಕಟ್ಟಿಸಿಕೊಡುತ್ತಾರಾ ಅಂತಾ ಆಶಾ ಭಾವವನ್ನು ಕಟ್ಟಿಕೊಂಡೆ ಮತ ಚಲಾಯಿಸುತ್ತಿದ್ದೇನೆ. ಚುನಾವಣೆಗಳು ಬಂದವು, ಹೋದವು ನನಗಂತು ಸೂರು ಸಿಕ್ಕಿಲ್ಲ. ನನಗೆ ಮನೆ ನೀಡಲು ಭರವಸೆ ಕೊಡುವವರಿಗೆ ನಾನು ಮತ ಚಲಾಯಿಸುತ್ತೇನೆ ಎಂದು ಕೊಪ್ಪಳ ಜಿಲ್ಲೆಯ ವೃದ್ಧ ಮಹಿಳೆಯೊಬ್ಬರು ಹೇಳಿದ್ದಾರೆ.
ಕೊಪ್ಪಳದ ಪಾರ್ವತಮ್ಮ ಸುದಿ ಅವರು ತಮ್ಮ ವಿಕಲಾಂಗ ಪುತ್ರಿ ಗೀತಾ ಜೊತೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ. ಚಹಾ ಮಾರುತ್ತಿದ್ದ ಪಾರ್ವತಮ್ಮನವರ ಪತಿ ಕೆಲ ವರ್ಷಗಳ ಹಿಂದೆ ಮೃತಪಟ್ಟಿದ್ದಾರೆ.
ಪಾರ್ವತಮ್ಮನವರು ಕುಷ್ಟಗಿಯಲ್ಲಿನ ಮಾರ್ಕೆಟ್ ಜಾಗದಲ್ಲಿನ ಚಹಾ ಅಂಗಡಿಯಲ್ಲೇ ಮೊದಲಿಗೆ ವಾಸವಾಗಿದ್ದರು. ನಂತರ ಕುಷ್ಟಗಿ ಟೌನ್ ಮುನಿಸಿಪಲ್ ಕೌನ್ಸಿಲ್ ನಮ್ಮ ಅಂಗಡಿಯನ್ನು ಒಡೆದು ಹಾಕಿದರು ಪರಿಣಾಮ ನಾವು ಬೀದಿಗೆ ಬಿದ್ದೇವು. ಅಲ್ಲಿಂದ ನಾವು ಇಲ್ಲಿಯವರೆಗೂ ಸ್ವಂತ ಮನೆಗಾಗಿ ಹೋರಾಟ ಮಾಡುತ್ತಿದ್ದರು. ಯಾವ ಸರ್ಕಾರವೂ ಸಹ ನಮ್ಮ ನೆರವಿಗೆ ಬಂದಿಲ್ಲ ಎಂದು ಪಾರ್ವತಮ್ಮ ಅವರು ಹೇಳಿಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


