ಪೊಲೀಸರ ಮುಂದೆ 'ಕರಿ ಚಿರತೆ' ದುನಿಯಾ ವಿಜಯ್‌ಗೆ ಡಿಚ್ಚಿ ಹೊಡೆದ ಪಾನಿಪುರಿ ಕಿಟ್ಟಿ!
ಜಿಮ್ ಟ್ರೈನರ್ ಪಾನಿಪುರಿ ಕಿಟ್ಟಿ ಅಣ್ಣನ ಮಗ ಮಾರುತಿಗೌಡ ಅವರನ್ನು ಅಪಹರಿಸಿ ಹಲ್ಲೆ ಮಾಡಿದ್ದ ನಟ ದುನಿಯಾ ವಿಜಯ್ ಗೆ ಪೊಲೀಸರ ಮುಂದೆಯೇ ಪಾನಿಪೂರಿ ಕಿಟ್ಟಿ ಡಿಚ್ಚಿ ಹೊಡೆದಿದ್ದಾನೆ...

Published On :
ಬೆಂಗಳೂರು: ಜಿಮ್ ಟ್ರೈನರ್ ಪಾನಿಪುರಿ ಕಿಟ್ಟಿ ಅಣ್ಣನ ಮಗ ಮಾರುತಿಗೌಡ ಅವರನ್ನು ಅಪಹರಿಸಿ ಹಲ್ಲೆ ಮಾಡಿದ್ದ ನಟ ದುನಿಯಾ ವಿಜಯ್ ಗೆ ಪೊಲೀಸರ ಮುಂದೆಯೇ ಪಾನಿಪುರಿ ಕಿಟ್ಟಿ ಡಿಚ್ಚಿ ಹೊಡೆದಿದ್ದಾನೆ.
ಮಾರುತಿ ಗೌಡ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ದುನಿಯಾ ವಿಜಯ್ ನನ್ನು ಬಂಧಿಸಿದ್ದು ಈ ವೇಳೆ ಪೊಲೀಸ್ ಠಾಣೆ ಹತ್ತಿರ ಬಂದ ಪಾನಿಪುರಿ ಕಿಟ್ಟಿ ದುನಿಯಾ ವಿಜಯ್ ಜೊತೆ ಮಾತಿಗೆ ಮಾತು ಬೆಳೆಸಿದ್ದಾರೆ. ನಂತರ ವಿಜಯ್ ಡಿಚ್ಚಿ ಹೊಡೆದಿದ್ದಾರೆ.
ನಂತರ ಮಧ್ಯ ಪ್ರವೇಶಿಸಿದ ಪೊಲೀಸರು ಪಾನಿಪುರಿ ಕಿಟ್ಟಿಯನ್ನು ದೂರಕ್ಕೆ ಸರಿಸಿ ವಿಜಯ್ ರನ್ನು ಠಾಣೆ ಒಳಗೆ ಕರೆದೊಯ್ದಿದ್ದಾರೆ.
ನಟನಾಗಿ ಸ್ಯಾಂಡಲ್ವುಡ್ ನಲ್ಲಿ ಗುರುತಿಸಿಕೊಂಡಿರುವ ದುನಿಯಾ ವಿಜಯ್ ವ್ಯಕ್ತಿಯೊಬ್ಬರನ್ನು ಅಪಹರಣ ಮಾಡಿ ಹಲ್ಲೆ ಮಾಡಿರುವುದು ಖಂಡನೀಯವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಬೆಂಗಳೂರುBengaluruCrimeದುನಿಯಾ ವಿಜಿduniya vijayಅಪರಾಧHigh Grounds Police StationPanipuri Kittyಹೈಗ್ರೌಂಡ್ಸ್ ಪೊಲೀಸ್ ಠಾಣೆಪಾನಿಪುರಿ ಕಿಟ್ಟಿ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


