ರಾಜ್ಯ

ಅಂತ್ಯಕ್ರಿಯೆಗೆ ಸಿಎಂ, ಡಿಕೆಶಿ ಬರಲೇಬೇಕು: ಡೆತ್ ನೋಟ್ ಬರೆದಿಟ್ಟು ಮಂಡ್ಯ ರೈತನ ಆತ್ಮಹತ್ಯೆ

ಸಾಲ ಬಾಧೆ ತಾಳಲಾರದೇ ಮಂಡ್ಯದಲ್ಲಿ ರೈತನೊಬ್ಬ ಆತ್ಮಹತ್ಯೆಗೆ ಶರಣಾಗಿದ್ದಾನೆ. ಸೋಮವಾರ ತಡರಾತ್ರಿ ಮದ್ದೂರಿನ ಮಾಲಗಾರನಹಳ್ಳಿ ಎಂಬಲ್ಲಿ ರಾಜೇಶ್‌ (45) ಎನ್ನುವ ರೈತ ಸಾವನ್ನಪ್ಪಿದ್ದಾನೆ.

ಅಂತ್ಯಕ್ರಿಯೆಗೆ ಸಿಎಂ, ಡಿಕೆಶಿ ಬರಲೇಬೇಕು: ಡೆತ್ ನೋಟ್ ಬರೆದಿಟ್ಟು ಮಂಡ್ಯ ರೈತನ ಆತ್ಮಹತ್ಯೆ
ಸಾಂದರ್ಭಿಕ ಚಿತ್ರ
Published On :
ಮಂಡ್ಯ:  ಸಾಲ ಬಾಧೆ ತಾಳಲಾರದೇ ಮಂಡ್ಯದಲ್ಲಿ ರೈತನೊಬ್ಬ ಆತ್ಮಹತ್ಯೆಗೆ ಶರಣಾಗಿದ್ದಾನೆ. ಸೋಮವಾರ ತಡರಾತ್ರಿ ಮದ್ದೂರಿನ ಮಾಲಗಾರನಹಳ್ಳಿ ಎಂಬಲ್ಲಿ ರಾಜೇಶ್‌ (45) ಎನ್ನುವ ರೈತ ಸಾವನ್ನಪ್ಪಿದ್ದಾನೆ.
ರಾಜೇಶ್‌ ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದು ಡೆತ್‌ ನೋಟ್‌ ಬರೆದಿಟ್ಟಿದ್ದಾರೆ. ನನ್ನ ಅಂತ್ಯಕ್ರಿಯೆಗೆ ಸಿಎಂ ಕುಮಾರಸ್ವಾಮಿ, ಸಚಿವ ಡಿ.ಕೆ.ಶಿವಕುಮಾರ್‌, ಮಾಜಿ ಸಚಿವ ನಟ ಅಂಬರೀಶ್‌  ಬರಲೇಬೇಕು, ಅವರ ಸಮ್ಮುಖದಲ್ಲಿ ನನ್ನ ಅಂತ್ಯಕ್ರಿಯೆ ನಡೆಸಬೇಕು ಎಂದು ಬರೆದಿದ್ದಾರೆ ಎಂದು ಹೇಳಲಾಗಿದೆ.
ರಾಜೇಶ್‌ 5 ಎಕರೆ ಜಮೀನು ಹೊಂದಿದ್ದು, ಬ್ಯಾಂಕ್‌ ಮತ್ತು ಕೈಸಾಲವಾಗಿ ಸುಮಾರು 5 ಲಕ್ಷ ರೂಪಾಯಿ ಸಾಲ ಹೊಂದಿದ್ದರು ಎಂದು ತಿಳಿದು ಬಂದಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.