ಕರಾವಳಿ ಮೀನುಗಾರರಿಗೆ ತಟ್ಟಿದ ಡೀಸೆಲ್ ಬೆಲೆ ಏರಿಕೆ ಬಿಸಿ
ಬಂದರು ನಗರಿ ಮಂಗಳೂರಿನ ಮೀನುಗಾರಿಕೆ ನಡೆಸುತ್ತಿರುವ ದೋಣಿ ಮಾಲೀಕ ವಿನೋದ್ ಬದುಕು ...

ಮಂಗಳೂರು: ಬಂದರು ನಗರಿ ಮಂಗಳೂರಿನ ಮೀನುಗಾರಿಕೆ ನಡೆಸುತ್ತಿರುವ ದೋಣಿ ಮಾಲೀಕ ವಿನೋದ್ ಬದುಕು ದುಸ್ತರವಾಗಿದೆ.ಪ್ರತಿವರ್ಷದಂತೆ ಇಲ್ಲಿ ಆಗಸ್ಟ್ 1ರಂದು ಮೀನುಗಾರಿಕೆ ಆರಂಭವಾಗಿತ್ತು. ಇದಕ್ಕೆ ಮುನ್ನ ಎರಡು ತಿಂಗಳು ಮುಂಗಾರು ಮಳೆ ತೀವ್ರವಾಗಿ ಬಿರುಗಾಳಿ ಇತ್ಯಾದಿಗಳ ಹಿನ್ನಲೆಯಲ್ಲಿ ಇಲ್ಲಿ ಮೀನುಗಾರಿಕೆಯನ್ನು ನಿಷೇಧಿಸಲಾಗುತ್ತದೆ. ಈ ಸಮಯದಲ್ಲಿ ದೋಣಿ ನಿರ್ವಹಣೆಯ ಮೇಲೆ ಲಕ್ಷ ರೂಪಾಯಿಗಳಷ್ಟು ಖರ್ಚು ಮಾಡಿದ್ದಾರೆ.
ಆದರೆ ಮೀನುಗಾರಿಕೆ ಆರಂಭವಾದ ನಂತರ ಇವರ ಪರಿಸ್ಥಿತಿ ಇನ್ನೂ ಹದಗೆಟ್ಟಿದೆ. ಸುಮಾರು 20 ಲಕ್ಷ ರೂಪಾಯಿ ನಷ್ಟವಾಗಿದ್ದು ಮತ್ತು ಡೀಸೆಲ್ ಬೆಲೆ ಏರಿಕೆ ಮೀನುಗಾರರ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಿದೆ.
ಕರಾವಳಿ ಕರ್ನಾಟಕದುದ್ದಕ್ಕೂ ಮೀನುಗಾರಿಕೆ ಮಾಡುವ ಸಮುದಾಯದವರ ಪರಿಸ್ಥಿತಿ ಇನ್ನೂ ಸಮಸ್ಯೆಯಲ್ಲಿದೆ. ಡೀಸೆಲ್ ಗೆ ಲೀಟರ್ ಗೆ 75 ರೂಪಾಯಿ ಆದರೂ 6 ಲಕ್ಷ ರೂಪಾಯಿ ಮೀನುಗಾರಿಕೆ ಕೂಡ ಬರುವುದಿಲ್ಲ. ಕರಾವಳಿಯಲ್ಲಿ ಮೀನುಗಾರಿಕೆ ದುಸ್ತರವಾಗಿದೆ ಎನ್ನುತ್ತಾರೆ ಮಂಗಳೂರಿನ ಪರ್ಸ್ ಸೈನ್ ದೋಣಿಯ ಮಾಲೀಕರ ಸಂಘದ ಅಧ್ಯಕ್ಷ ಮೋಹನ್ ಬೆಂಗ್ರೆ.
ಮೀನು ಹಿಡಿಯುವ ಬಲೆ ಎಳೆಯುವ ಸಾಧನ ಪ್ರತಿ ಬಾರಿ ಮೀನುಗಾರಿಕೆ ಮಾಡುವಾಗ 5ರಿಂದ 7 ಸಾವಿರ ಲೀಟರ್ ಡೀಸೆಲ್ ನ್ನು ಹೀರುತ್ತದೆ. ಕರಾವಳಿ ಭಾಗದಲ್ಲಿ ಮೀನುಗಾರಿಕೆ ಮಾಡುವವರಿಗೆ ಹೆಚ್ಚು ಡೀಸೆಲ್ ನ ಅವಶ್ಯಕತೆಯಿರುತ್ತದೆ. ಇತ್ತೀಚಿನ ದಿನಗಳಲ್ಲಿ ಮೀನು ಹಿಡಿಯುವ ದೋಣಿಗೆ ಪ್ರತಿ ಟ್ರಿಪ್ ಗೆ 4ರಿಂದ 5 ಸಾವಿರ ಲೀಟರ್ ಡೀಸೆಲ್ ಬೇಕಾಗುತ್ತದೆ.
ತುಂಬ ದೂರದವರೆಗೆ ಮೀನುಗಾರಿಕೆ ಮಾಡಲು ಹೋಗಲು ಸಾಧ್ಯವಾಗುವುದಿಲ್ಲ. ಅನೇಕರು ಪಿಂಕ್ ಪರ್ಚಸ್ ಮತ್ತು ಕ್ಯಾಟ್ಲ್ ಫಿಶ್ ಗಳನ್ನು ಹಿಡಿದು ತಂದು ಅವುಗಳನ್ನು ರಫ್ತು ಮಾಡುತ್ತಾರೆ. ಡೀಸೆಲ್ ಬೆಲೆ ಹೆಚ್ಚುತ್ತಾ ಹೋದರೆ ನಾವು ಇನ್ನಷ್ಟು ಆರ್ಥಿಕ ಸಂಕಷ್ಟಕ್ಕೀಡಾಗುತ್ತೇವೆ ಎನ್ನುತ್ತಾರೆ ವಿನೋದ್. ನವೆಂಬರ್, ಡಿಸೆಂಬರ್ ತಿಂಗಳಲ್ಲಿ ಮೀನುಗಾರಿಕೆ ಮಾಡಲು 7ರಿಂದ 8 ಸಾವಿರ ಲೀಟರ್ ಡೀಸೆಲ್ ಬೇಕಾಗುತ್ತದೆ.
ಡೀಸೆಲ್ ಬೆಲೆ ನಿಯಂತ್ರಣದಲ್ಲಿದ್ದರೆ ಮೀನುಗಾರಿಕೆ ಅಷ್ಟೊಂದು ದುಬಾರಿಯಾಗುವುದಿಲ್ಲ ಎನ್ನುತ್ತಾರೆ ಮಲ್ಪೆಯ ಮೀನುಗಾರಿಕೆ ವಲಯದ ಮುಖಂಡ ದಯಾನಂದ ಸುವರ್ಣ. ಮೀನುಗಾರಿಕೆ ನಡೆಸುವ ವಲಯಗಳನ್ನು ಹಣ ಕೊಟ್ಟು ಖರೀದಿಸುತ್ತಾರೆ. ಡೀಸೆಲ್ ಬೆಲೆ ಹೆಚ್ಚಾದರೆ ಮೀನುಗಾರಿಕೆಗೆ ಹೆಚ್ಚಿನ ಬೆಲೆ ಸಿಗುವುದಿಲ್ಲ. ಖರೀದಿದಾರರು ಎಲ್ಲಿಂದ ಕಡಿಮೆ ಬೆಲೆಗೆ ಸಿಗುತ್ತದೆಯೋ ಅಲ್ಲಿಂದ ಪಡೆಯುತ್ತಾರೆ, ಅಂತಿಮವಾಗಿ ಇದರಿಂದ ಮೀನುಗಾರಿಕೆ ಮಾಡುವ ಕುಟುಂಬದ ಮೇಲೆಯೇ ಪರಿಣಾಮ ಬೀರುವುದು ಎನ್ನುತ್ತಾರೆ.
ಡೀಸೆಲ್ ಮೇಲೆ ಹೆಚ್ಚು ಅವಲಂಬಿತವಾಗುವುದನ್ನು ತಪ್ಪಿಸಲು ಇತ್ತೀಚೆಗೆ ರಾಜ್ಯ ಸರ್ಕಾರ ಮಾರಾಟ ತೆರಿಗೆ ಮೇಲೆ ವಿನಾಯ್ತಿ ನೀಡಿತ್ತು, ಇದರಿಂದ ಲೀಟರ್ ಗೆ 9 ರೂಪಾಯಿ ಕಡಿಮೆಯಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


