ರಾಜ್ಯ

ಬೆಂಗಳೂರು: ಚಿಕನ್ ಬಿರಿಯಾನಿ ತಿಂದರೆಂದು ಪತಿ, ಮಗನನ್ನೇ ತೊರೆದು ಹೋದ ಗರ್ಭಿಣಿ ಮಹಿಳೆ

ಪತಿ ಮತ್ತು ಎಂಟು ವರ್ಷದ ಮಗ ಬಿರಿಯಾನಿ ತಿಂದರೆನ್ನುವ ಕಾರಣಕ್ಕೆ 31 ವರ್ಷದ ಗರ್ಭಿಣಿ ಮಹಿಳೆ ಮನೆ ತೊರೆದು ಹೋಗಿರುವ ವಿಚಿತ್ರ ಘಟನೆ ಬೆಂಗಳೂರಿನ ಕಮ್ಮಗೊಂಡನಹಳ್ಳಿಯಲ್ಲಿ ನಡೆದಿದೆ.

ಬೆಂಗಳೂರು: ಚಿಕನ್ ಬಿರಿಯಾನಿ ತಿಂದರೆಂದು ಪತಿ, ಮಗನನ್ನೇ ತೊರೆದು ಹೋದ ಗರ್ಭಿಣಿ ಮಹಿಳೆ
ಬಿತರಿಯಾನಿ -ಸಂಗ್ರಹ ಚಿತ್ರ
Published On :
ಬೆಂಗಳೂರು: ಪತಿ ಮತ್ತು ಎಂಟು ವರ್ಷದ ಮಗ ಬಿರಿಯಾನಿ ತಿಂದರೆನ್ನುವ ಕಾರಣಕ್ಕೆ 31 ವರ್ಷದ ಗರ್ಭಿಣಿ ಮಹಿಳೆ ಮನೆ ತೊರೆದು ಹೋಗಿರುವ ವಿಚಿತ್ರ ಘಟನೆ ಬೆಂಗಳೂರಿನ ಕಮ್ಮಗೊಂಡನಹಳ್ಳಿಯಲ್ಲಿ ನಡೆದಿದೆ.
ತಾನಿನ್ನು ಎಂದೂ ಹಿಂತಿರುಗುವುದಿಲ್ಲ ಎಂದು ಹೇಳಿ ಆಕೆ ತವರಿಗೆ ಹೊರಟು ಹೋಗಿದ್ದಾಳೆ. ಈ ಸಂಬಂಧ ಮಧ್ಯಪ್ರದೇಶದ ಸತ್ನಾ ಮೂಲದ ಅನಿತಾ ಸರ್ಕಾರ್ ವಿರುದ್ದ ಆಕೆಯ ಪತಿ ರಾಜು ಗಂಗಮ್ಮನಗುಡಿ ಪೋಲೀಸರಿಗೆ ದೂರಿತ್ತಿದ್ದಾರೆ.
ಘಟನೆ ವಿವರ
ಆಗಸ್ಟ್ 28 ರಂದು ರಾಜು ಹತ್ತಿರದ ಹೋಟೆಲ್ ಒಂದರಿಂದ ಚಿಕನ್ ಬಿರಿಯಾನಿಯನ್ನು ಪಾರ್ಸಲ್ ತಂದಿದ್ದರು. ಅವರು ತಮ್ಮ ಚಿಕ್ಕ ಮಗ ಆದರ್ಶ್ ನೊಡನೆ ಅದನ್ನು ತಿನ್ನುವಾಗ ಅನಿತಾ ತಾನು ಬಿರಿಯಾನಿ ವಾಸನೆ ಸಹಿಸಲ್ಲ ಎಂದು ಜಗಳವಾಡಿದ್ದಾಳೆ. ಅಲ್ಲದೆ ತಾನು ಇನ್ನು ಮುಂದೆ ಎಂದಿಗೂ ಮನೆಯಲ್ಲಿ ಅಡಿಗೆ ಮಾಡಲಾರೆ ಎಂದು ಪಟ್ಟು ಹಿಡಿದಿದ್ದಾಳೆ. ಇದಾಗಿ ಪತಿ ರಾಜು ಕೆಲಸಕ್ಕೆ ತೆರಳಿದ್ದಾಗ ಆಕೆ ತಾನು ಮನೆ ತೊರೆದು ಹೋಗಿದ್ದಾಳೆ ಎಂದು ಪೋಲೀಸರು ಹೇಳಿದರು.
ಪತ್ನಿಯನ್ನು ಸುತ್ತಮುತ್ತಲ ಪ್ರದೇಶದಲ್ಲಿ ಹುಡುಕಿದ ಬಳಿಕ ರಾಜು ಪೋಲೀಸರಿಗೆ ದೂರಿತ್ತಿದ್ದಾರೆ. ಗುರುವಾರ ಮಧ್ಯಪ್ರದೇಶದ ಸತ್ನಾದಲ್ಲಿನ ಆಕೆಯ ತವರು ಮನೆಗೆ ಕರ್ರೆ ಮಾಡಲಾಗಿ ಅನಿತಾ ತನ್ನ ಪೋಷಕರೊಡನೆ ಇದ್ದಾಳೆನ್ನುವುದು ತಿಳಿದಿದೆ. ಆದರೆ ಆಕೆ ಹಿಂತಿರುಗುವ ಬಗೆಗಾಗಲಿ, ಇನ್ನಾವ ವಿಚಾರವಾಗಲಿ ಮಾತನಾಡದೆ ಕರೆ ನಿಷ್ಕ್ರಿಯಗೊಳಿಸಿದ್ದಾಳೆ.
ಎಂಟು ವರ್ಷಗಳಿಂದ ರಾಜು ದಂಪತಿಗಳು ಬೆಂಗಳೂರಿನಲ್ಲಿ ನೆಲೆಸಿದ್ದು  ಪಶ್ಚಿಮ ಬಂಗಾಳ ಮೂಲದ ರಾಜು ಅಬ್ಬಿಗರೆನಲ್ಲಿ ಬಾಡಿಗೆ ಮನೆಗಳಲ್ಲಿದ್ದಾರೆ. ಬಿರಿಯಾನಿ ಆಸನೆ ಇಷ್ಟಪಡದ ಕಾರಣ ರಾಜು ಸಹ ತಾನು ಸಸ್ಯಾಹಾರವನ್ನಷ್ಟೇ ಸೇವಿಸುವುದಾಗಿ ಹೇಳಿದ್ದರು. ಆದರೆ ಗುರುವಾರದ ಘಟನೆ ಅವರಲ್ಲಿ ಜಗಳ ತಂದಿದ್ದು ಆಕೆ ಮನೆ ತೊರೆದು ಹೋಗಲು ಕಾರಣವಾಗಿದೆ ಎಂದು ಪೋಲೀಸರು ಮಾಹಿತಿ ನೀಡಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.