ರಾಜ್ಯ

ಗನ್ ಮ್ಯಾನ್ ಕರ್ಚೀಫ್ ನಿಂದ ಶೂ ಕ್ಲೀನ್ ಮಾಡಿಸಿಕೊಂಡ ಡಿಸಿಎಂ ಪರಮೇಶ್ವರ್

ನಗರ ಪ್ರದಕ್ಷಿಣೆ ವೇಳೆ ರಸ್ತೆಯ ಕೆಸರು ಬಟ್ಟೆಗೆ ಸಿಡಿದಿದ್ದಕ್ಕೆ, ಸ್ಥಳದಲ್ಲೇ ಗನ್‍ಮ್ಯಾನ್‍ನಿಂದ ಬಟ್ಟೆ ಹಾಗೂ ಶೂಗಳನ್ನು ಉಪಮುಖ್ಯಮಂತ್ರಿ ಪರಮೇಶ್ವರ್ ....

ಗನ್ ಮ್ಯಾನ್ ಕರ್ಚೀಫ್ ನಿಂದ ಶೂ ಕ್ಲೀನ್ ಮಾಡಿಸಿಕೊಂಡ ಡಿಸಿಎಂ ಪರಮೇಶ್ವರ್
ಪರಮೇಶ್ವರ್
Published On :
ಬೆಂಗಳೂರು: ನಗರ ಪ್ರದಕ್ಷಿಣೆ ವೇಳೆ ರಸ್ತೆಯ ಕೆಸರು ಬಟ್ಟೆಗೆ ಸಿಡಿದಿದ್ದಕ್ಕೆ, ಸ್ಥಳದಲ್ಲೇ ಗನ್‍ಮ್ಯಾನ್‍ನಿಂದ ಬಟ್ಟೆ ಹಾಗೂ ಶೂಗಳನ್ನು  ಉಪಮುಖ್ಯಮಂತ್ರಿ ಪರಮೇಶ್ವರ್ ಸ್ವಚ್ಛಮಾಡಿಸಿಕೊಂಡಿದ್ದಾರೆ.
ಹಲಸೂರು ಬಳಿಯಿರುವ ಗುರುದ್ವಾರದ ಮಳೆ ನೀರುಗಾಲುವೆಗೆ ಮೊದಲು ಭೇಟಿ ನೀಡಿದ್ದರು. ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ರಸ್ತೆ ಮೇಲಿದ್ದ ನೀರು ಸಚಿವರ ಬಟ್ಟೆ ಹಾಗೂ ಶೂಗೆ ಸಿಡಿದಿದೆ. ಕೂಡಲೇ ಅಲ್ಲೇ ಇದ್ದ ತಮ್ಮ ಗನ್‍ಮ್ಯಾನ್ ಹಾಗೂ ಸಹಾಯಕರಿಗೆ ಸ್ವಚ್ಛಮಾಡುವಂತೆ ತಿಳಿಸಿದ್ದಾರೆ.
ಈ ವೇಳೆ ಗನ್‍ಮ್ಯಾನ್ ತಮ್ಮ ಕರವಸ್ತ್ರದ ಮೂಲಕವೇ ಸಚಿವರ ಬಟ್ಟೆ ಹಾಗೂ ಶೂಗಳನ್ನು ಸ್ವಚ್ಛ ಮಾಡಿದ್ದಾರೆ. ಅಧಿಕಾರಿಗಳು, ಸಾರ್ವಜನಿಕರು ಹಾಗೂ ಮಾಧ್ಯಮಗಳ ಮುಂದೆಯೇ ಡಿಸಿಎಂ ಈ ರೀತಿ ವರ್ತಿಸಿರುವುದು ತೀವ್ರ ಚರ್ಚೆಗೆ ಕಾರಣವಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.