ರಾಜ್ಯ

ಸೂರ್ಯ ರಶ್ಮಿಗೆ ಸಿಕ್ಕಿ ಹೊಳೆದ ನಾಗರಹಾವಿನ ಹೆಡೆ, ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್!

ಅಪರೂಪದ ಘಟನೆ ಎಂಬಂತೆ ಸೂರ್ಯನ ಕಿರಣಗಳಿಗೆ ನಾಗರ ಹಾವಿನ ಹೆಡೆ ಹೊಳೆಯುತ್ತಿದ್ದ ದೃಶ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಸೂರ್ಯ ರಶ್ಮಿಗೆ ಸಿಕ್ಕಿ ಹೊಳೆದ ನಾಗರಹಾವಿನ ಹೆಡೆ, ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್!
ಸೂರ್ಯ ರಶ್ಮಿಗೆ ಹೊಳೆಯುತ್ತಿರುವ ಹಾವಿನ ಹೆಡೆ
Published On :
ಚಿಕ್ಕಮಗಳೂರು: ಅಪರೂಪದ ಘಟನೆ ಎಂಬಂತೆ ಸೂರ್ಯನ ಕಿರಣಗಳಿಗೆ ನಾಗರ ಹಾವಿನ ಹೆಡೆ ಹೊಳೆಯುತ್ತಿದ್ದ ದೃಶ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಮಾಧ್ಯಮವೊಂದರ ವರದಿಯಂತೆ, ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕು ಹೊಳೆಮಕ್ಕಿ ಗ್ರಾಮದ ಕಾಫಿ ತೋಟದಲ್ಲಿ ಈ ದೃಶ್ಯ ಕಂಡು ಬಂದಿದ್ದು, ತೋಟದಲ್ಲಿ ಹೆಡೆ ಎತ್ತಿದ್ದ ಹಾವಿನ ತಲೆ ಮೇಲೆ ನೇರವಾಗಿ ಸೂರ್ಯನ ಕಿರಣಗಳು ಬೀಳುತ್ತಿದ್ದವು. ಈ ವೇಳೆ ಹಾವಿನ ಹೆಡೆ ಕೆಂಪಾಗಿ ಹೊಳೆಯುತ್ತಿತ್ತು. ತೋಟದಲ್ಲಿ ವ್ಯಕ್ತಿಗಳು ಈ ದೃಶ್ಯಾವಳಿಯನ್ನು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣಕ್ಕೆ ಹರಿ ಬಿಟ್ಟಿದ್ದಾರೆ. ಈ ಫೋಟೋ ಇದೀಗ ವೈರಲ್ ಆಗುತ್ತಿದೆ.
ಇನ್ನು ಈ ತೋಟ ಅವಿನಾಶ್ ಎಂಬವರರದ್ದಾಗಿದ್ದು. ತೋಟದಲ್ಲಿ ನಾಯಿ ಮತ್ತು ನಾಗರಹಾವು ಮಧ್ಯೆ ಅರ್ಧ ಗಂಟೆಗಳ ಕಾಲ ಜಗಳ ನಡೆದಿದೆ. ಶ್ವಾನದ ಮೇಲೆ ನಾಗರಾಜ ಎರಗಲು ಮುಂದಾಗಿದ್ದು, ಈ ವೇಳೆ ನಾಯಿ ಬೊಗಳಲು ಆರಂಭಿಸಿದೆ. ನಾಯಿ ಬೊಗಳುತ್ತಿರುವ ಶಬ್ದ ಕೇಳಿದ ಅವಿನಾಶ್ ಅವರು ಕೂಡಲೇ ಎದ್ದು ಬಂದಿದ್ದು, ನಾಗರ ಹಾವು ನಾಯಿಯ ಜಗಳ ಕಂಡು ದಂಗಾಗಿದ್ದಾರೆ. ಹಾವಿನ ಹೆಡೆ ಹೊಳೆಯುತ್ತಿರುವ ದೃಶ್ಯವನ್ನು ಅವರು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದ್ದಾರೆ. 
ಬಳಿಕ ನಾಯಿ ಸಹವಾಸವೇ ಬೇಡ ಎಂದು ನಾಗರ ಹಾವು ವಾಪಸ್ ಹೋಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.