ವಿಜಯಪುರ: ಗಂಗಾಧರ ಚಡಚಣ ಹತ್ಯೆ ಆರೋಪಿ ಸಿಪಿಐ ಅಸೋಡೆ ಬಂಧನ
ಭೀಮಾ ತೀರದ ಹಂತಕ ಗಂಗಾಧರ ಚಡಚಣ ಹತ್ಯೆ ಆರೋಪಿಯಾಗಿದ್ದ ಪೋಲೀಸ್ ಇನ್ಸ್ ಪೆಕ್ಟರ್ ಅಸೋಡೆ ಅವರ ಬಂಧನವಾಗಿದೆ.

Published On :
ವಿಜಯಪುರ: ಭೀಮಾ ತೀರದ ಹಂತಕ ಗಂಗಾಧರ ಚಡಚಣ ಹತ್ಯೆ ಆರೋಪಿಯಾಗಿದ್ದ ಪೋಲೀಸ್ ಇನ್ಸ್ ಪೆಕ್ಟರ್ ಅಸೋಡೆ ಅವರ ಬಂಧನವಾಗಿದೆ.
ಪ್ರಕರಣದ ಹದಿಮೂರನೇ ಆರೋಪಿಯಾಗಿದ್ದ ಸಿಪಿಐ ಅಸೋಡೆ ತಲೆಮರೆಸಿಕೊಂಡಿದ್ದರು. ಇವರಿಗಾಗಿ ತೀವ್ರ ಶೋಧ ನಡೆಸಿದ್ದ ಸಿಐಡಿ ಪೋಲೀಸರು ಅಸೋಡೆಯವರನ್ನು ಕಳೆದ ರಾತ್ರಿ ಕೋಲ್ಕತ್ತಾದಲ್ಲಿ ಬಂಧಿಸಿದೆ.
ಚಡಚಣ ಸೋದರರಾದ ಧರ್ಮರಾಜ ಚಡಚಣ ಹಾಗೂ ಗಂಗಾಧರ ಚಡಚಣ ಸೋದರರ ಹತ್ಯೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಎಂ.ಬಿ. ಅಸೊದೆ ಅವರನ್ನು ಕೋಲ್ಕತ್ತಾದಲ್ಲಿ ಬಂಧಿಸಿದ್ದು ಅವರನ್ನು ವಿಜಯಪುರಕ್ಕೆ ಕರೆದುಕೊಂಡು ಬರಲಾಗುತ್ತಿದೆ.
ಕಳೆದ ವರ್ಷ ಅಕ್ಟೋಬರ್ 30ರಂದು ಗಂಗಾಧರ ಚಡಚಣ ಪೋಲೀಸ್ ಎನ್ ಕೌಂಟರ್ ಗೆ ಬಲಿಯಾಗಿದ್ದರು. ಆದರೆ ಇದು "ನಕಲಿ ಎನ್ ಕೌಂಟರ್" ಎಂದು ಅವರ ತಾಯಿ ಆರೋಪಿಸಿದ್ದು ಪ್ರಕರಣವನ್ನು ಸಿಐಡಿಗೆ ವಹಿಸಲಾಗಿತ್ತು. ತನಿಖೆ ನಡೆದ ವೇಳೆ ಪೋಲೀಸ್ ಅಧಿಕಾರಿಗಳ ಶಾಮೀಲಿನಿಂದ ಈ ನಕಲಿ ಎನ್ ಕೌಂಟರ್ ನಡೆದಿದೆ. ಅವರುಗಳೇ ಧರ್ಮರಾಜ ಹಾಗೂ ಗಂಗಾಧರ ಚಡಚಣ ಸೋದರರನ್ನು ಹತ್ಯೆ ಮಾಡಿದ್ದರೆನ್ನುವುದು ತಿಳಿದಿತ್ತು.
ಘಟನೆಗೆ ಸಂಬಂಧಿಸಿ ಇದುವರೆಗೆ ಪಿಎಸ್ ಐ ಗೋಪಾಲ ಅಳ್ಳೂರ ಸೇರಿದಂತೆ ಒಟ್ಟು ಹದಿನೈದು ಮಂದಿಯನ್ನು ಬಂಧಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


