ರಾಜ್ಯ

ಪತ್ರಕರ್ತೆ ಗೌರಿ ಲಂಕೇಶ್ ಗೆ ಫ್ರಾನ್ಸ್ ಗೌರವ

ಕಳೆದ ವರ್ಷ ದುಷ್ಕರ್ಮಿಗಳ ಗುಂಡಿಗೆ ಬಲಿಯಾದ ಸಾಮಾಜಿಕ ಹೋರಾಟಗಾರ್ತಿ ಹಾಗೂ ಹಿರಿಯ ಪತ್ರಕರ್ತೆ

ಪತ್ರಕರ್ತೆ ಗೌರಿ ಲಂಕೇಶ್ ಗೆ ಫ್ರಾನ್ಸ್ ಗೌರವ
ಸ್ಮಾರಕ
Published On :
ಬೆಂಗಳೂರು: ಕಳೆದ ವರ್ಷ ದುಷ್ಕರ್ಮಿಗಳ ಗುಂಡಿಗೆ ಬಲಿಯಾದ ಸಾಮಾಜಿಕ ಹೋರಾಟಗಾರ್ತಿ ಹಾಗೂ ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಅವರಿಗೆ ಫ್ರಾನ್ಸ್ ವಿಶೇಷ ಗೌರವ ಸಲ್ಲಿಸಿದೆ.
ಕರ್ತವ್ಯ ನಿರತರಾಗಿದ್ದಾಗ ಹತ್ಯೆಗೊಳಗಾದ ವರದಿಗಾರರಿಗೆ ನೀಡಲಾಗುವ ಫ್ರಾನ್ಸ್‌ನ ಬೇಯಾಕ್ಸ್‌ –ಕಲ್ವಾಡೋಸ್‌ ಪ್ರಶಸ್ತಿಯನ್ನು ಗೌರಿ ಲಂಕೇಶ್‌ ಅವರಿಗೆ ನೀಡಿದ್ದ ಫ್ರಾನ್ಸ್ ಈಗ ಹುತಾತ್ಮ ಪತ್ರಕರ್ತರ ಸ್ಮಾರಕದಲ್ಲಿ ಗೌರಿ ಅವರ ಹೆಸರನ್ನೂ ಅನಾವರಣ ಮಾಡಿದೆ.
ಈ ಪ್ರಶಸ್ತಿಯನ್ನು ಯುದ್ಧ ವರದಿಗಳನ್ನು ಮಾಡುವ ವರದಿಗಾರರಿಗೆ ಫ್ರಾನ್ಸ್‌ನಲ್ಲಿ ನೀಡಲಾಗುತ್ತದೆ. 
ಅಪಾಯಕಾರಿ ಸನ್ನಿವೇಶಗಳಲ್ಲಿ ಜನರಿಗೆ ಯುದ್ಧ ಮಾಹಿತಿಯನ್ನು ನೀಡುವ ಪತ್ರಕರ್ತರಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ಈ ಪ್ರಶಸ್ತಿಯನ್ನು 1994ರಲ್ಲಿ ಸ್ಥಾಪಿಸಲಾಗಿದೆ.
ಕಳೆದ ಅಕ್ಟೋಬರ್ 8ರಂದು ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿದ್ದ ಗೌರಿ ಲಂಕೇಶ್ ಸಹೋದರಿ ಕವಿತಾ ಲಂಕೇಶ್ ಅವರು ಬೇಯಾಕ್ಸ್‌ –ಕಲ್ವಾಡೋಸ್‌ ಪ್ರಶಸ್ತಿ ಸ್ವೀಕರಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.