ರಾಜ್ಯ

ಭಯಾನಕ ವಿಡಿಯೋ: ಯುವಕನ ದೇಹದಿಂದ ಹೊರಬಂದ ದೆವ್ವದ ವಿಡಿಯೋ ಕರ್ನಾಟಕದಲ್ಲಿ ಸಖತ್ ವೈರಲ್!

ದೆವ್ವ ಭೂತದ ಕಥೆಗಳನ್ನು ಚಿಕ್ಕ ವಯಸ್ಸಿನಿಂದ ಕೇಳಿಕೊಂಡು ಬಂದಿದ್ದೇವೆ. ಇನ್ನು ಪ್ರೇತವೇ ದೇಹದಿಂದ ಹೊರಗೆ ಹೋಗುವ ಲೈವ್ ವಿಡಿಯೋ ನೋಡಿದರೆ ಹೇಗಾಗಬಹುದು...

ಭಯಾನಕ ವಿಡಿಯೋ: ಯುವಕನ ದೇಹದಿಂದ ಹೊರಬಂದ ದೆವ್ವದ ವಿಡಿಯೋ ಕರ್ನಾಟಕದಲ್ಲಿ ಸಖತ್ ವೈರಲ್!
ಸಂಗ್ರಹ ಚಿತ್ರ
Published On :
ಹುಬ್ಬಳ್ಳಿ: ದೆವ್ವ ಭೂತದ ಕಥೆಗಳನ್ನು ಚಿಕ್ಕ ವಯಸ್ಸಿನಿಂದ ಕೇಳಿಕೊಂಡು ಬಂದಿದ್ದೇವೆ. ಇನ್ನು ಪ್ರೇತವೇ ದೇಹದಿಂದ ಹೊರಗೆ ಹೋಗುವ ಲೈವ್ ವಿಡಿಯೋ ನೋಡಿದರೆ ಹೇಗಾಗಬಹುದು. ಹೌದು ಹುಬ್ಬಳ್ಳಿಯಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. 
ಹುಬ್ಬಳ್ಳಿಯ ಮಂಟೂರು ರಸ್ತೆಯಲ್ಲಿ ಹುಟ್ಟು ಹಬ್ಬದ ಸಂಭ್ರಮದಲ್ಲಿ ಡ್ಯಾನ್ಸ್ ಮಾಡುತ್ತಿದ್ದಾಗ ಪ್ರೇತ ಹೊರಬಂದಿದೆ. ಪ್ರತಾಪ್ ಎಂಬ ಯುವಕನ ದೇಹದಿಂದ ಪ್ರೇತ ಹೊರ ಹೋಗುತ್ತಿರುವುದು ಮೊಬೈಲ್ ನಲ್ಲಿ ಸೆರೆಯಾಗಿದ್ದು ಸದ್ಯ ವಿಡಿಯೋ ಸಖತ್ ವೈರಲ್ ಆಗಿದೆ. 
ಪ್ರತಾಪ್ ದೇಹದಿಂದ ಪ್ರೇತ ಹೊರಗೆ ಬಂದ ಬಳಿಕ ವಿಚಿತ್ರವೆಂಬಂತೆ ಈ ಘಟನೆ ನಡೆದ ಕೆಲವೇ ದಿನಗಳಲ್ಲಿ ಪ್ರತಾಪ್ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾನೆ. ಇನ್ನು ಅಗಲಿದ ಗೆಳೆಯ ನೆನಪಿನಲ್ಲಿ ಹುಟ್ಟುಹಬ್ಬದ ಪಾರ್ಟಿ ವಿಡಿಯೋ ನೋಡುತ್ತಿದ್ದಾಗ ಪ್ರೇತ ದೇಹದಿಂದ ಹೊರ ಹೋಗುತ್ತಿರುವ ದೃಶ್ಯ ಸ್ನೇಹಿತರ ಗಮನಕ್ಕೆ ಬಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.