ವಿಲಕ್ಷಣ ಘಟನೆ: ಮಗಳ ಗೆಳೆಯನಿಂದಲೇ ಪತ್ನಿಯ ಅಪಹರಣ! ವ್ಯಕ್ತಿಯಿಂದ ಪೋಲೀಸರಿಗೆ ದೂರು
ಒಂದು ವಿಲಕ್ಷಣ ಘಟನೆಯಲ್ಲಿ ಗಂಡನೊಬ್ಬ ತನ್ನ ಹೆಂಡತಿ ಹಾಗೂ ಮಗಳನ್ನು ಮಗಳ ಸ್ನೇಹಿತನೇ ಅಪಹರಿಸಿದ್ದಾನೆ ಎಂದು ವ್ಯಕ್ತಿಯೊಬ್ಬ ಪೋಲೀಸ್ ಆಯುಕ್ತರಿಗೆ ದೂರಿತ್ತಿದ್ದಾನೆ

Published On :
ಬೆಂಗಳೂರು: ಒಂದು ವಿಲಕ್ಷಣ ಘಟನೆಯಲ್ಲಿ ಗಂಡನೊಬ್ಬ ತನ್ನ ಹೆಂಡತಿ ಹಾಗೂ ಮಗಳನ್ನು ಮಗಳ ಸ್ನೇಹಿತನೇ ಅಪಹರಿಸಿದ್ದಾನೆ ಎಂದು ವ್ಯಕ್ತಿಯೊಬ್ಬ ಪೋಲೀಸ್ ಆಯುಕ್ತರಿಗೆ ದೂರಿತ್ತಿದ್ದಾನೆ. ಇದಕ್ಕೆ ಮುನ್ನ ಅಶೋಕ ನಗರ ಪೋಲೀಸರು ದೂರು ಸ್ವೀಕರಿಸಲು ನಿರಾಕರಿಸಿದ ಕಾರಣ ದೂರುದಾರನಾದ ಗೌರಕ್ ಕಶ್ಯಪ್ ಕಮಿಷನರ್ ಕಛೇರಿಗೆ ಆಗಮಿಸಿ ದೂರಿತ್ತಿದ್ದಾರೆ. ಆಯುಕ್ತರ ಹಸ್ತಕ್ಷೇಪದ ಬಳಿಕ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೋಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ಶಾಂತಿನಗರ ನಿವಾಸಿ ಕಶ್ಯಪ್, ತಮ್ಮ 16 ವರ್ಷ ವಯಸ್ಸಿನ ಮಗಳು ಮತ್ತು ಅವರ ಪತ್ನಿ ಕುಶಾಲ್ ದೇವಿ (30) ತಮ್ಮ ತವರಾದ ಉತರ ಪ್ರದೇಶಕ್ಕೆ ತೆರಳುವಾಗ ರೈಲಿನಿಂದ ಕಾಣೆಯಾಗಿದ್ದಾರೆ ಎಂದುತಿಳಿಸಿದ್ದಾರೆ. ಅಪ್ರಾಪ್ತ ಮಗಳನ್ನು ಆಕೆಯ ಗೆಳೆಯ ರಾಹುಲ್ ಅಪಹರಣ ಮಾಡಿದ್ದಾನೆ ಎಂದು ಕಶ್ಯಪ್ ಆರೋಪಿಸಿದ್ದಾರೆ.
ಕಶ್ಯಪ್ ಹೇಳುವಂತೆ ಸೋಮವಾರ ಆತ್ನ ಪತ್ನಿಯಿಂದ ಕಡೆಯದಾಗಿ ಕರೆ ಬಂದ ವೇಳೆ ಆಕೆ ಹಾಗೂ ಮಗಳು ತೆಲಂಗಾಣದ ಮೂಲಕ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು.ಅವರಿಂದ ಹಣವನ್ನೆಲ್ಲಾ ದೋಚಲಾಗಿದೆ. ಬಳಿಕ ಅದೇ ದರೋಡೆಕೋರನು ಅವರುಗಳನ್ನು ಅಪಹರಣ ಮಾಡಿರುವ ಸಾಧ್ಯತೆಯೂ ಇದೆ ಎಂದು ಕಶ್ಯಪ್ ಹೇಳುತ್ತಾರೆ.
ಇಷ್ಟಾದ ಬಳಿಕ ಪತ್ನಿಯ ಮೊಬೈಲ್ ನಾಟ್ ರೀಚಬಲ್ ಆಗಿದೆ. ಕಶ್ಯಪ್ ತನ್ನ ಕೆಲ ಸಂಬಂಧಿಕರ ಮೂಲಕ ತೆಲಂಗಾಣದಲ್ಲಿ ಪತ್ನಿ ಹಾಗೂ ಪುತ್ರಿಯರಿಗೆ ಹುಡುಕಾಟ ನಡೆಸಿದರೂ ಯಾವ ಫಲ ದೊರೆಯಲಿಲ್ಲ ಅಂತಿಮವಾಗಿ ಅವರು ಪೋಲೀಸರ ಮೊರೆ ಹೋಗಿದ್ದಾರೆ.
ಇದಾಗಿ ತನ್ನ ಅಂಗಡಿ ಸಮೀಪದಲಿದ್ದ ರಾಹುಲ್ ತನ್ನ ಮಗಳ ಸ್ನೇಹಿತನಾಗಿದ್ದ. ಅವನೇ ಈ ಕೃತ್ಯ ನಡೆಸಿರುವ ಸಾಧ್ಯತೆ ಇದೆ ಎಂದು ಕಶ್ಯಪ್ ತನ್ನ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಏಕೆಂದರೆ ಘಟನೆ ನಂತರ ಕಶ್ಯಪ್ ರಾಹುಲ್ ಗಾಗಿ ಹುಡುಕಿದಾಗ ಆತನೂ ನಗರದಿಂದ ದೂರ ಹೋಗಿರುವುದು ತಿಳಿದಿದೆ. ಇದಾಗಿ ಅವರು ಅಶೋಕ ನಗರ ಪೋಲೀಸರ ಬಳಿ ಧಾವಿಸ್ದಾಗ ಪೋಲೀಸರು ತಾವು ದೂರು ತೆಗೆದುಕೊಳ್ಳಲು ನಿರಾಕರಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


