'ಸ್ವಯಂಪ್ರೇರಿತ ಬಂದ್' ಉಲ್ಟಾ ಹೊಡೆದ ಬಿಜೆಪಿ, ರಾಜ್ಯ ಬಂದ್ ವಿಫಲ?
ರೈತರ ಸಾಲಮನ್ನಾ ಸಂಬಂಧ ವಿಚಾರವಾಗಿ ಪ್ರತಿಪಕ್ಷ ಮಾಯಕ ಯಡಿಯೂರಪ್ಪ ಸೋಮವಾರ ರಾಜ್ಯ ಬಂದ್‌ಗೆ ನೀಡಿರುವ ಕರೆಗೆ ರೈತರು ಸೇರಿದಂತೆ ಯಾವುದೇ ಸಂಘಟನೆಗಳು ಬೆಂಬಲ ನೀಡಿಲ್ಲ, ಹೀಗಾಗಿ ನಾಳಿನ ಕರ್ನಾಟಕ ಬಂದ್ ವಿಫಲವಾಗುವ ಸಾಧ್ಯತೆ ಎನ್ನಲಾಗಿದೆ.

Published On :
ಬೆಂಗಳೂರು: ರೈತರ ಸಾಲಮನ್ನಾ ಸಂಬಂಧ ವಿಚಾರವಾಗಿ ಪ್ರತಿಪಕ್ಷ ಮಾಯಕ ಯಡಿಯೂರಪ್ಪ ಸೋಮವಾರ ರಾಜ್ಯ ಬಂದ್‌ಗೆ ನೀಡಿರುವ ಕರೆಗೆ ರೈತರು ಸೇರಿದಂತೆ ಯಾವುದೇ ಸಂಘಟನೆಗಳು ಬೆಂಬಲ ನೀಡಿಲ್ಲ, ಹೀಗಾಗಿ ನಾಳಿನ ಕರ್ನಾಟಕ ಬಂದ್ ವಿಫಲವಾಗುವ ಸಾಧ್ಯತೆ ಎನ್ನಲಾಗಿದೆ.
ಸೋಮವಾರದ ರಾಜ್ಯ ಬಂದ್ ಕರೆಗೆ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ, ಕಬ್ಬು ಬೆಳೆಗಾರರ ಸಂಘ ಬೆಂಬಲ ನೀಡುವುದಿಲ್ಲ ಎಂದು ಘೋಷಿಸಿದ್ದವು. ಇದರ ಬೆನ್ನಲ್ಲೇ ಇದೀಗ ರೈತ ಸಂಘಜ ಮುಖಂಡರೂ ಕೂಡ ಬಂದ್ ಗೆ ನಮ್ಮ ಬೆಂಬಲ ಇಲ್ಲ ಎಂದು ಘೋಷಣೆ ಮಾಡಿವೆ.
ಈ ಬಗ್ಗೆ ಮಾತನಾಡಿರುವ ರೈತ ಸಂಘ– ಹಸಿರು ಸೇನೆಯ ರಾಜ್ಯ ಘಟಕದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಅವರು, ಬಂದ್‌ಗೆ ನಮ್ಮ ಬೆಂಬಲವಿಲ್ಲ. ರೈತರಿಗೆ ಸಾಲ ಹೊರೆ ಆಗಿದೆ. ಮೇ 31ರಂದು ಸಂಘದ ಸಭೆ ಕರೆದಿದ್ದೇವೆ. ಅಲ್ಲಿಯೇ ರೈತರ ಸಮಸ್ಯೆಗಳ ಬಗ್ಗೆ ಚರ್ಚಿಸಿ ಹೋರಾಟದ ಬಗ್ಗೆ ತೀರ್ಮಾನ ಕೈಗೊಳ್ಳಲಿದ್ದೇವೆ ಎಂದು ತಿಳಿಸಿದರು. ಅಂತೆಯೇ ಕನ್ನಡ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ಅವರು ಮಾತನಾಡಿ, ಬಿಎಸ್ ವೈ ಅವರಿಗಿಂತಲೂ ರೈತರ ಬಗ್ಗೆ ನಮಗೆ ಹೆಚ್ಚಿನ ಕಾಳಜಿ ಇದೆ. ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಗಳಿಗೆ ತಲಾ ರು.25 ಲಕ್ಷ ಪರಿಹಾರ ನೀಡಬೇಕು ಎಂಬುದು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗಾಗಿ ಪ್ರತಿಭಟನೆ ನಡೆಸುತ್ತಲೇ ಇದ್ದೇವೆ. ಸೋಮವಾರದ ಬಂದ್ ಬಗ್ಗೆ ನಮಗೆ ಗೊತ್ತಿಲ್ಲ. ಅದಕ್ಕೆ ನಮ್ಮ ಬೆಂಬಲವೂ ಇಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.
ಅಂತೆಯೇ ಬಂದ್‌ಗೆ ಬೆಂಬಲ ಇಲ್ಲ ಎಂದು ‘ಓಲಾ ಟ್ಯಾಕ್ಸಿ ಫಾರ್ ಶೋರ್ ಉಬರ್ (ಓಟಿಯು) ಚಾಲಕರು ಹಾಗೂ ಮಾಲೀಕರ ಸಂಘ’, ಅಖಿಲ ಭಾರತೀಯ ಲಾರಿ ಮಾಲೀಕರ ಒಕ್ಕೂಟ ಹಾಗೂ ಬೆಂಗಳೂರು ನಗರ ಹೋಟೆಲ್ ಮಾಲೀಕರ ಸಂಘ ತಿಳಿಸಿವೆ.
'ಸ್ವಯಂಪ್ರೇರಿತ ಬಂದ್' ಎಂದು ಉಲ್ಟಾ ಹೊಡೆದ ಬಿಜೆಪಿ
ವಿಧಾನಸಭೆಯಲ್ಲಿ ರೈತರ ಸಾಲ ಮನ್ನಾ ಮಾಡದಿದ್ದರೆ ಬಂದ್ ಗೆ ಕರೆ ನೀಡುವುದಾಗಿ ಹೇಳಿದ್ದ ಬಿಎಸ್ ವೈ ಮಾರನೆಯ ದಿನವೇ ನಾವು ಬಂದ್ ಗೆ ಕರೆ ನೀಡಿಲ್ಲ. ಆದರೆ ರೈತರು ಬಂದ್ ನಡೆಸುತ್ತಾರೆ ಎಂದು ಹೇಳಿದ್ದರು. ಇನ್ನು ಇದೇ ವಿಚಾರ ಸಂಬಂಧ ಇಂದು ಉಲ್ಟಾ ಹೊಡೆದಿರುವ ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್ ಅವರು ತಮ್ಮ ಪ್ರಕಟಣೆಯಲ್ಲಿ ಸಾಲ ಮನ್ನಾ ಆಗುವವರೆಗೆ ಯಡಿಯೂರಪ್ಪ ಸುಮ್ಮನೆ ಕೂರುವವರಲ್ಲ. ರೈತರಿಗೆ ಮೋಸ ಮಾಡಿರುವ ಕುಮಾರಸ್ವಾಮಿ ಮತ್ತೊಮ್ಮೆ ವಚನಭ್ರಷ್ಟರಾಗಿದ್ದಾರೆ. ಹೀಗಾಗಿ ಸ್ವಯಂಪ್ರೇರಿತ ಬಂದ್ ನಡೆಸಬೇಕು ಎಂದು ಹೇಳಿದ್ದಾರೆ.
ಒಟ್ಟಾರೆ ಬಿಜೆಪಿ ನಾಯಕರ ಬಂದ್ ಪ್ಲಾನ್ ಇದೀಗ ವಿಫಲವಾದಂತ ಕಂಡು ಬರುತ್ತಿದ್ದು, ನಾಳಿನ ಬಂದ್ ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗುವ ಸಾಧ್ಯತೆ ಇದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


