ನಾನು ಅಧಿಕಾರಕ್ಕಾಗಿ ಸಾಯಲ್ಲ, ಸಾಯುವುದಿದ್ದರೆ ಜನರಿಗಾಗಿ ಸಾಯುತ್ತೇನೆ: ಎಚ್ ಡಿಕೆಗೆ ಬಿಎಸ್ ವೈ ಟಾಂಗ್
"ಸಾಯುವುದಕ್ಕೂ ಮುನ್ನ ಒಮ್ಮೆ ಅಧಿಕಾರ ನೀಡಿ ಎಂದು ನಾನೆಂದೂ ಕೇಳುವುದಿಲ್ಲ, ನಾನು ಸಾಯುವುದಿದ್ದರೆ ಜನರಿಗಾಗಿ ಸಾಯುತ್ತೇನೆ, ಕೊನೆಯುಸಿರಿರುವವರೆಗೂ ಜನರಿಗಾಗಿ ಹೋರಾಡುತ್ತೇನೆ"

Published On :
ಬೆಂಗಳೂರು: "ಸಾಯುವುದಕ್ಕೂ ಮುನ್ನ ಒಮ್ಮೆ ಅಧಿಕಾರ ನೀಡಿ ಎಂದು ನಾನೆಂದೂ ಕೇಳುವುದಿಲ್ಲ, ನಾನು ಸಾಯುವುದಿದ್ದರೆ ಜನರಿಗಾಗಿ ಸಾಯುತ್ತೇನೆ, ಕೊನೆಯುಸಿರಿರುವವರೆಗೂ ಜನರಿಗಾಗಿ ಹೋರಾಡುತ್ತೇನೆ" ಇದು ಯಡಿಯೂರಪ್ಪ ಮೇ.19 ರಂದು ವಿಧಾನಸಭೆಯಲ್ಲಿ ತಮ್ಮ ವಿದಾಯ ಭಾಷಣದಲ್ಲಿ ಹೆಚ್ ಡಿ ಕುಮಾರಸ್ವಾಮಿಗೆ ಟಾಂಗ್ ನೀಡಿದ ರೀತಿ.
104 ಶಾಸಕರ ಸಂಖ್ಯಾಬಲವಿದ್ದ ಬಿಜೆಪಿ ಶಾಸಕಾಂಗ ಪಕ್ಷದ ನಾಯಕ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಮೇ.17 ರಂದು ಪ್ರಮಾಣವಚನ ಸ್ವೀಕರಿಸಿದ್ದರು. ಯಡಿಯೂರಪ್ಪ ಅವರ ಪ್ರಮಾಣವಚನವನ್ನು ಪ್ರಶ್ನಿಸಿ ಕಾಂಗ್ರೆಸ್-ಜೆಡಿಎಸ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದ ಹಿನ್ನೆಲೆಯಲ್ಲಿ ಮೇ.19 ರಂದು ಯಡಿಯೂರಪ್ಪ ಅವರಿಗೆ ಬಹುಮತ ಸಾಬೀತುಪಡಿಸುವಂತೆ ಸೂಚಿಸಿತ್ತು.
ಬಹುಮತ ಸಾಬೀತುಪಡಿಸುವುದಕ್ಕೂ ಮುನ್ನ ವಿಧಾನಸಭೆಯಲ್ಲಿ ಭಾಷಣ ಮಾಡಿದ ಯಡಿಯೂರಪ್ಪ, "ಕುಮಾರಸ್ವಾಮಿಯವರೇ ರಾಜ್ಯದ ಜನತೆಗಾಗಿ ನಿರಂತರ ಹೋರಾಟ ಮಾಡುತ್ತೇನೆ, ಸಾಯುವುದಕ್ಕೂ ಮುನ್ನ ಒಮ್ಮೆ ಅಧಿಕಾರ ನೀಡಿ, ಅಧಿಕಾರ ನೀಡದಿದ್ದರೇ ಸಾಯುತ್ತೇನೆ ಎಂದು ನಾನೆಂದೂ ಕೇಳುವುದಿಲ್ಲ, ನಾನು ಸಾಯುವುದಿದ್ದರೆ ಜನರಿಗಾಗಿ ಸಾಯುತ್ತೇನೆ ಕೊನೆಯುಸಿರಿರುವವರೆಗೂ ಜನರಿಗಾಗಿ ಹೋರಾಡುತ್ತೇನೆ" ಎಂದು ಕುಮಾರಸ್ವಾಮಿಗೆ ಟಾಂಗ್ ನೀಡಿದ್ದಾರೆ.
ವಿಧಾನಸಭಾ ಚುನಾವಣೆಯ ಪ್ರಚಾರದ ಸಂದರ್ಭದಲ್ಲಿ ಭಾವನಾತ್ಮಕವಾಗಿ ಮತಯಾಚಿಸಿದ್ದ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ, ನಾನು ಇನ್ನೂ ಹೆಚ್ಚು ದಿನ ಬದುಕುವುದಿಲ್ಲ. ಬದುಕಬೇಕಿದ್ದರೆ ನೀವು ಜೆಡಿಎಸ್ ಗೆ ಮತ ಹಾಕಬೇಕು ಎಂದು ರಾಜ್ಯದ ಜನತೆಯಲ್ಲಿ ಮನವಿ ಮಾಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Kumaraswamyಕುಮಾರಸ್ವಾಮಿಬಹುಮತYeddyurappaಯಡಿಯೂರಪ್ಪfloor testಕರ್ನಾಟಕ ವಿಧಾನಸಭಾ ಚುನಾವಣೆKarnataka Assembly Elections
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.
ಬ್ರೇಕಿಂಗ್ ನ್ಯೂಸ್
ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಹೆಚ್ಚಿದ ಒತ್ತಡ: ಮುಖ್ಯ ಚುನಾವಣಾ ಆಯುಕ್ತರನ್ನ ವಜಾ ಮಾಡೊದು ಅಷ್ಟು ಸುಲಭನಾ? ಯಾರಿಗಿದೆ ಆ ಪವರ್? ಸಂವಿಧಾನ ಹೇಳುವುದೇನು?ರಾಹುಕಾಲ ಎಂದರೇನು? ಮದುವೆಗೆ ಅನ್ವಯಿಸುತ್ತದೆಯೇ? ರಾಹು ಶಾಂತಿಗಾಗಿ ನಿಂಬೆ ಹಣ್ಣು ದೀಪ ಹಚ್ಚುವುದು ಸೂಕ್ತವೇ?ಗೌರಿಬಿದನೂರಿನ ಮಣ್ಣಲ್ಲಿ ಅರಳಿದ ಮರುಭೂಮಿ ಹಣ್ಣು: ಅಸಾಧ್ಯವನ್ನು ಸಾಧ್ಯವಾಗಿಸಿದ ಹಠವಾದಿ; ಸ್ವಾವಲಂಬಿ ಕೃಷಿಗೆ ಹೊಸ ಭಾಷ್ಯ ಬರೆದ ದಿವಾಕರ್ ಚನ್ನಪ್ಪ..!ಕರ್ನಾಟಕದ ನಂ.1 ಶ್ರೀಮಂತ ಯಾರು ಗೊತ್ತಾ? ಅಂಬಾನಿ, ಅದಾನಿ ಬಿಡಿ; ಇಲ್ಲಿದೆ ನಮ್ಮ ಕರುನಾಡ ಸಿರಿವಂತರ ಟಾಪ್ ಲಿಸ್ಟ್!ಫ್ಯಾಟ್ ನಿಂದ ಫಿಟ್ ವರೆಗೆ: ಸಾಹೇಬಲಾಲ್ ಛಪ್ಪರ್ಬಂದ್ ಸ್ಫೂರ್ತಿದಾಯಕ ಪಯಣವಿದೇಶಿ ಪ್ರವಾಸದ ಪ್ಲ್ಯಾನ್ ಇದೆಯೇ? ಒಂದು ಸಣ್ಣ ತಪ್ಪು ಭಾರೀ ದಂಡಕ್ಕೆ ಕಾರಣವಾಗಬಹುದು; ಪ್ರವಾಸಿಗರು ತಿಳಿದಿರಲೇಬೇಕಾದ ನಿಯಮಗಳಿವು...!ಮನಸ್ಸಿದ್ದರೆ ಮಾರ್ಗ ಎಂಬುದನ್ನು ರುಜುವಾತು ಮಾಡಿದ ಛಲವಾದಿ; 27 ವರ್ಷಗಳ ಹೋರಾಟದಲ್ಲಿ 26 ಬಾರಿ ಸೋತು 59ನೇ ವಯಸ್ಸಿನಲ್ಲಿ ಸರ್ಕಾರಿ ಶಿಕ್ಷಕರಾದ ವಿಜಯ್ಪಶ್ಚಿಮ ಘಟ್ಟಗಳ ESA - ಕಸ್ತೂರಿರಂಗನ್ ವರದಿ ಇನ್ನೂ ಏಕೆ ಜಾರಿಗೆ ಬಂದಿಲ್ಲ?


