ರಾಜ್ಯ

ಮತದಾನವಷ್ಟೇ ಅಲ್ಲ, ಹಣ, ಮದ್ಯ ಹಂಚಿಕೆಯಲ್ಲೂ ದಾಖಲೆ ಬರೆದ ಚುನಾವಣೆ

ಗರಿಷ್ಠ ಪ್ರಮಾಣದ ಮತದಾನದ ಮೂಲಕ ದಾಖಲೆ ಬರೆದಿರುವ ಹಾಲಿ ಕರ್ನಾಟಕ ಚುನಾವಣೆ, ಹಣ, ಮದ್ಯ ಹಂಚಿಕೆಯಲ್ಲೂ ದಾಖಲೆ ನಿರ್ಮಾಣ ಮಾಡಿದೆ.

ಮತದಾನವಷ್ಟೇ ಅಲ್ಲ, ಹಣ, ಮದ್ಯ ಹಂಚಿಕೆಯಲ್ಲೂ ದಾಖಲೆ ಬರೆದ ಚುನಾವಣೆ
ಸಂಗ್ರಹ ಚಿತ್ರ
Published On :
ಬೆಂಗಳೂರು: ಗರಿಷ್ಠ ಪ್ರಮಾಣದ ಮತದಾನದ ಮೂಲಕ ದಾಖಲೆ ಬರೆದಿರುವ ಹಾಲಿ ಕರ್ನಾಟಕ ಚುನಾವಣೆ, ಹಣ, ಮದ್ಯ ಹಂಚಿಕೆಯಲ್ಲೂ ದಾಖಲೆ ನಿರ್ಮಾಣ ಮಾಡಿದೆ.
ಚುನಾವಣೆ ಕುರಿತು ರಾಜ್ಯ ಚುನಾವಣಾ ಆಯೋಗ ನೀಡಿರುವ ಮಾಹಿತಿ ಅನ್ವಯ, ಮತದಾನದ ಮುಕ್ತಾಯದ ವೇಳೆ ರಾಜ್ಯದಲ್ಲಿ ಬರೊಬ್ಬರಿ ರೂ. 186 ಕೋಟಿ ಮೌಲ್ಯದ ಹಣ, ಮದ್ಯ ಮತ್ತು ಇನ್ನಿತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈವರೆಗೆ ದೇಶದ ಯಾವುದೇ ಚುನಾವಣೆಯಲ್ಲೂ ಇಷ್ಟು ದೊಡ್ಡ ಮೌಲ್ಯದ ನಗದು, ಮದ್ಯ ಹಾಗೂ ಇನ್ನಿತರ ಅಮಿಷವೊಡ್ಡುವ ವಸ್ತುಗಳನ್ನು ವಶಪಡಿಸಿಕೊಂಡ ನಿದರ್ಶನ ಇಲ್ಲ ಎಂದೂ ಆಯೋಗ ಸ್ಪಷ್ಟಪಡಿಸಿದೆ.
ಕಳೆದ ಲೋಕಸಭೆ ಚುನಾವಣೆಗೆ ಹೋಲಿಸಿದರೆ ಕರ್ನಾಟಕದಲ್ಲಿ ವಶಪಡಿಸಿಕೊಂಡ ವಸ್ತುಗಳ ಮೌಲ್ಯ ಪ್ರಮಾಣ ಶೇ. 6% ಹೆಚ್ಚಳವಾಗಿದೆ ಎಂದು ಆದಾಯ ತೆರಿಗೆ ಅಧಿಕಾರಿಗಳು ಮಾಹಿತಿ ನೀಡಿದ್ದರು. 2013ರ ವಿಧಾನ ಸಭೆ ಚುನಾವಣೆಗೆ ಹೋಲಿಸಿದರೆ ಶೇ.8ರಷ್ಟು ಹೆಚ್ಚಳವಾಗಿದೆ. ಕಳೆದ ಉತ್ತರ ಪ್ರದೇಶ ಚುನಾವಣೆಯಲ್ಲಿ 150 ಕೋಟಿ ರೂ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದರು. ಚುನಾವಣೆ ನೀತಿ ಸಂಹಿತೆ ಜಾರಿಯಾದ ದಿನದಿಂದ ಈವರೆಗೂ 31 ಕೋಟಿ 50 ಲಕ್ಷ ರೂ ನಗದು ಹಾಗೂ  5. ಕೋಟಿ 83 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿತ್ತು ಎಂದು ಈ ಹಿಂದೆ ಆದಾಯ ತೆರಿಗೆ ಇಲಾಖೆ ಹೇಳಿಕೆಯಲ್ಲಿ ತಿಳಿಸಿತ್ತು. 
ಇನ್ನು ಕಳೆದ ಬಾರಿಯ ಚುನಾವಣೆಯ ಪ್ರಚಾರದ  ಸಂದರ್ಭದಲ್ಲಿ 4 ಕೋಟಿ 97 ಲಕ್ಷ ನಗದು ಹಾಗೂ 3. ಕೋಟಿ 41 ಲಕ್ಷ ಚಿನ್ನಾಭರಣವನ್ನು ವಶಕೊಡಿಸಿಕೊಳ್ಳಲಾಗಿತ್ತು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.