ಬೇಸಿಗೆ ಸಂದರ್ಭದಲ್ಲಿ ಬೆಂಗಳೂರಿನ ನೀರಿನ ಮೂಲ ಬತ್ತುವುದಿಲ್ಲ: ಬಿಬಿಎಂಪಿ ಸಮೀಕ್ಷೆ
ಮುಂದಿನ ಕೆಲ ವರ್ಷಗಳವರೆವಿಗೂ ಅಂದರೆ ಕನಿಷ್ಠ ಪಕ್ಷ 2035ರ ಬೇಸಿಗೆಯವರೆಗೂ ಬೆಂಗಳೂರಿಗೆ ಕುಡಿಯುವ ನೀರಿನ ಕೊರತೆ ಎದುರಾಗದು ಎಂದು ಬಿಬಿಎಂಪಿ ಸಮೀಕ್ಷೆಯೊಂದರಿಂದ ಕಂಡುಬಂದಿದೆ.

ಬೆಂಗಳೂರು : ಮುಂದಿನ ಕೆಲ ವರ್ಷಗಳವರೆವಿಗೂ ಅಂದರೆ ಕನಿಷ್ಠ ಪಕ್ಷ 2035ರ ಬೇಸಿಗೆಯವರೆಗೂ ಬೆಂಗಳೂರಿಗೆ ಕುಡಿಯುವ ನೀರಿನ ಕೊರತೆ ಎದುರಾಗದು ಎಂದು ಬಿಬಿಎಂಪಿ ಸಮೀಕ್ಷೆಯೊಂದರಿಂದ ಕಂಡುಬಂದಿದೆ.
ಕಾವೇರಿ ನೀರು ಪೂರೈಕೆ ಯೋಜನೆಯಲ್ಲಿನ ಎಲ್ಲಾ ಹಂತಗಳು ಕಾರ್ಯನಿರ್ವಹಿಸುತ್ತಿದ್ದು, 2023ರ ವೇಳೆಗೆ ಐದುನೇ ಹಂತ ಅನುಷ್ಠಾನಗೊಳ್ಳಲಿದೆ. 2035ರವರೆಗೂ ಕುಡಿಯುವ ನೀರಿನ ಸಮಸ್ಯೆಗೆ ತೊಂದರೆಯಾಗುವುದಿಲ್ಲ ಎಂದು ಬೆಂಗಳೂರು ಒಳಚರಂಡಿ ಮತ್ತು ನೀರು ಪೂರೈಕೆ ಮುಖ್ಯಸ್ಥ ತುಷಾರ್ ಗಿರಿನಾಥ್ ಹೇಳಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಶರಾವತಿ ನದಿಯಿಂದಲೂ ನೀರು ಪೂರೈಕೆ ಮಾಡಬಹುದು ಎಂದು ಅವರು ವಿಶ್ವಾಸ ವ್ಯಕ್ತಪಡಿಸುತ್ತಾರೆ. 2035ರವರೆಗೂ ಜನಸಂಖ್ಯೆ ಪ್ರಮಾಣ 2 ಕೋಟಿ ದಾಟುವುದಿಲ್ಲ. ಕಾವೇರಿ ನದಿಯಿಂದ 29 ಟಿಎಂಸಿ ನೀರು ದೊರೆಯುತ್ತಿದೆ.
ಎತ್ತಿನಹೊಳೆ ಯೋಜನೆಯಿಂದ 2.5 ಟಿಎಂಸಿ ನೀರು ಹೆಚ್ಚುವರಿಯಾಗಿ ದೊರೆಯಲಿದ್ದು, ಬೆಂಗಳೂರು ನಗರಕ್ಕೆ ಸಾಕಾಗಲಿದೆ .ಆನಂತರ ನೀರಿನ ಕೊರತೆ ಎದುರಾದರೆ ಶರಾವತಿಯೊಂದೆ ಉಳಿದಿರುವ ಮಾರ್ಗ ಎಂದು ತಜ್ಞರು ಹೇಳುತ್ತಾರೆ.
ಬೆಂಗಳೂರಿಗೆ ನಿತ್ಯ 1,400 ಮಿಲಿಯನ್ ಲೀಟರ್ ನೀರು ಬೇಕಾಗುತ್ತದೆ. 2023ರ ವೇಳೆಗೆ ಕಾವೇರಿ ನೀರು ಪೂರೈಕೆಯ ಯೋಜನೆಯ ಐದನೇ ಹಂತ ಅನುಷ್ಠಾನಗೊಂಡರೆ 775 ಮಿಲಿಯನ್ ಲೀಟರ್ ಹೆಚ್ಚುವರಿ ನೀರು ದೊರೆಯುವ ಸಾಧ್ಯತೆಯಿದೆ. ಇದರಿಂದಾಗಿ ಬೆಂಗಳೂರು ಸುತ್ತಮುತ್ತಲ್ಲಿನ 110 ಹಳ್ಳಿಗಳಿಗೂ ನೀರು ಪೂರೈಸಬಹುದಾಗಿದೆ.
ಪರಿಸರ ಅಧ್ಯಯನ ಸಂಸ್ಥೆ ಅಶೋಕ ಟ್ರಸ್ಟ್ ಇತ್ತೀಚಿಗೆ ನಡೆಸಿದ ಅಧ್ಯಯನ ಪ್ರಕಾರ ಬೆಂಗಳೂರಿನಲ್ಲಿ ಪ್ರಸ್ತುತ 1,391 ಮಿಲಿಯನ್ ಲೀಟರ್ ನೀರು ಬಳಸಲಾಗುತ್ತಿದೆ. ಇದರಲ್ಲಿ 995 ಮಿಲಿಯನ್ ಲೀಟರ್ ನೀರನ್ನು ಖಾಸಗಿಯಾಗಿ ಬಳಸಿಕೊಂಡರೂ ಉಳಿದ ನೀರನ್ನು ವಾಣಿಜ್ಯ, ಉದ್ಯಮಗಳಿಗೆ ಬಳಸಿಕೊಳ್ಳಬಹುದಾಗಿದೆ.
ವಿಶ್ವ ಜಲ ದಿನದಂದು ಮಾತನಾಡಿದ್ದ ಭಾರತೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕ ಪ್ರೋಫೆಸರ್ ಅನುರಾಗ್ ಕುಮಾರ್, ತ್ಯಾಜ್ಯ ಹಾಗೂ ರಾಸಾಯನಿಕ ನೀರಿನ ಬಗ್ಗೆ ಬೆಂಗಳೂರಿನ ಜನತೆ ಎಚ್ಚರಿಕೆ ವಹಿಸುವಂತೆ ಹೇಳಿದ್ದರು. ಇದರ ಹೊರತಾಗಿ, ಬೆಂಗಳೂರಿನ ನೀರಿನ ಮೂಲದ ಬಗ್ಗೆಯೂ ಆತಂಕ ವ್ಯಕ್ತಪಡಿಸಿದ್ದರು.
ನೀರಿನ ಸಂರಕ್ಷಣೆ ನಿಟ್ಟಿನಲ್ಲಿ ಮಳೆಕೊಯ್ಲು ವಿಧಾನ ಅಳವಡಿಸುವಂತೆ ಪ್ರೇರೆಪಿಸಲಾಗಿದೆ.
2009ರ ನಂತರ ನಿರ್ಮಾಣ ಮಾಡುವ ಎಲ್ಲಾ ಕಟ್ಟಡಗಳಲ್ಲಿಯೂ ಮಳೆಕೊಹ್ಲಿ ವಿಧಾನ ಅಳವಡಿಕೆ ಕಡ್ಡಾಯ ಮಾಡಲಾಗಿದೆ. 20 ಲಕ್ಷ ಪ್ರಾಪರ್ಟಿಸ್ ನಲ್ಲಿ 80 ಸಾವಿರ ನಿವಾಸಿಗಳು ಮಾತ್ರ ಮಳೆ ನೀರು ಕೊಯ್ಲು ವಿಧಾನವನ್ನು ಅಳವಡಿಸಿಕೊಂಡಿದ್ದಾರೆ ಎಂಬುದು ಬಿಬಿಎಂಪಿ ಮಾಹಿತಿಯಿಂದ ತಿಳಿದುಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


