ರಾಜ್ಯ

ಪೋಟೋಗ್ರಾಫರ್ ಬಳಿ ಹಣ, ಚಿನ್ನಾಭರಣ ದೋಚಿ ಪರಾರಿಯಾಗಿದ್ದ ದರೋಡೆಕೋರರ ಸೆರೆ

ಕೋಣನಕುಂಟೆ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಪೋಟೋಗ್ರಾಪರ್ ಅಪಹರಿಸಿ 2.72 ಲಕ್ಷ ಹಣ ಹಾಗೂ ಚಿನ್ನಾಭರಣ ದೋಚಿ ಪರಾರಿಯಾಗಿದ್ದ ನಾಲ್ವರು ದರೋಡೆಕೋರರನ್ನು ಬಂಧಿಸಿದ್ದಾರೆ.

ಪೋಟೋಗ್ರಾಫರ್ ಬಳಿ ಹಣ, ಚಿನ್ನಾಭರಣ ದೋಚಿ ಪರಾರಿಯಾಗಿದ್ದ ದರೋಡೆಕೋರರ ಸೆರೆ
ಸಾಂದರ್ಭಿಕ ಚಿತ್ರ
Published On :

ಬೆಂಗಳೂರು :ಕೋಣನಕುಂಟೆ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಪೋಟೋಗ್ರಾಪರ್ ಅಪಹರಿಸಿ 2.72 ಲಕ್ಷ ರೂ. ಮೌಲ್ಯದ ಹಣ ಹಾಗೂ ಚಿನ್ನಾಭರಣ ದೋಚಿ ಪರಾರಿಯಾಗಿದ್ದ ನಾಲ್ವರು ದರೋಡೆಕೋರರನ್ನು ಬಂಧಿಸಿದ್ದಾರೆ.

ಮಧು ಕಿರಣ್, ಮಂಜುನಾಥ್, ಅನಂದ್ ಹಾಗೂ ಆರ್ ನಾಗೇಂದ್ರ ಬಂಧಿತ ಆರೋಪಿಗಳು. ಈ ಪೈಕಿ ಮಧುಕಿರಣ್  ಪೋಟೋಗ್ರಾಪರ್ ಸಂಬಂಧಿಯೂ ಆಗಿದ್ದಾನೆ.

ಕೋಡಿಚಿಕ್ಕನಹಳ್ಳಿ ನಿವಾಸಿಯಾಗಿರುವ ಪೋಟೋಗ್ರಾಫರ್ ಕೆ. ಪ್ರತಾಪ್   ಒಬ್ಬರನ್ನು ಮಾರ್ಚ್ 10 ರಂದು  ಈ ದರೋಡೆಕೋರರ ತಂಡ ಅಪಹರಿಸಿದೆ. ಕೊತ್ತನೂರು ದಿಣ್ಣೆಯ ರೆಸಾರ್ಟ್ ವೊಂದರಲ್ಲಿ ಒಂದು ದಿನ ಕೂಡಿಹಾಕಲಾಗಿದೆ. ನಂತರ 80 ಸಾವಿರ ರೂ. ನಗದು ಹಾಗೂ ಮೊಬೈಲ್ ದೋಚಿದ್ದಾರೆ.

ಎಟಿಎಂ ಪಿನ್ ನಂಬರ್ ಪಡೆದು ಅವರ ಖಾತೆಯಲ್ಲಿದ್ದ ಹಣವನೆಲ್ಲಾ ಡ್ರಾ ಮಾಡಿಕೊಂಡಿದ್ದಾರೆ. ಅದೇ ಕಾರ್ಡಿನಿಂದ ಚಿನ್ನಾಭರಣ ಕೊಂಡು ನಂತರ ಬಿಡುಗಡೆ ಮಾಡಲಾಗಿತ್ತು ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಕರ್ನಾಟಕ ಬ್ಯಾಂಕ್ ಎಟಿಎಂನಿಂದ 95 ಸಾವಿರ ರೂ ಡ್ರಾ ಮಾಡಿಕೊಂಡಿದ್ದು, ಒಂದೂವರೆ ಲಕ್ಷ ರೂ ಬೆಲೆಬಾಳುವ ಚಿನ್ನಾಭರಣವನ್ನು ಮೇಘಾ ಜ್ಯೂವೆಲರಿಯಿಂದ ಖರೀದಿಸಿದ್ದಾರೆ.  25 ಸಾವಿರ ರೂವನ್ನು ಇನ್ನಿತರ ಎಟಿಎಂಗಳ ಮೂಲಕ ಪಡೆದುಕೊಂಡಿದ್ದಾರೆ ಆದಾಗ್ಯೂ, ಪ್ರತಾಪ್ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಮತ್ತೆ ಮಾರ್ಚ್ 16 ರಂದು  ಪೋನ್ ಕರೆ ಮಾಡಿ 30 ಸಾವಿರ ರೂ ನೀಡುವಂತೆ ಒತ್ತಾಯಿಸಲಾಗಿದೆ. ನಂತರ ಈ ವಿಷಯವನ್ನುಅವರ ಕುಟುಂಬಕ್ಕೆ ತಿಳಿಸಲಾಗಿದ್ದು, ಕೋಣನಕುಂಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಂತರ ವಿಶೇಷ ತಂಡ ರಚನೆಮಾಡಿ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ. ಅಲ್ಲದೇ ದೋಚಿದ್ದ ಹಣ, ಚಿನ್ನಾಭರಣವನೆಲ್ಲಾ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.