ಬೆಂಗಳೂರು: ಮಗಳಿಗೆ ಗಂಡು ಸಿಕ್ಕಿಲ್ಲ ಎಂದು ಮನನೊಂದ ತಾಯಿ-ಮಗಳು ಆತ್ಮಹತ್ಯೆ
ಮಗಳಿಗೆ ತಕ್ಕ ವರ ಸಿಕ್ಕಿ ವಿವಾಹವಾಗಿಲ್ಲ ಎಂದು ಮನನೊಂದ ತಾಯಿ ತನ್ನ ಮಗಳೊಡನೆ ಸೇರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನ ರಾಜಾಜಿನಗರದ ಪ್ರಕಾಶ್ ನಗರದಲ್ಲಿ ನಡೆದಿದೆ.

Published On :
ಬೆಂಗಳೂರು: ಮಗಳಿಗೆ ತಕ್ಕ ವರ ಸಿಕ್ಕಿ ವಿವಾಹವಾಗಿಲ್ಲ ಎಂದು ಮನನೊಂದ ತಾಯಿ ತನ್ನ ಮಗಳೊಡನೆ ಸೇರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನ ರಾಜಾಜಿನಗರದ ಪ್ರಕಾಶ್ ನಗರದಲ್ಲಿ ನಡೆದಿದೆ. ನಡೆದಿದೆ.
ಸಾವಿತ್ರಮ್ಮ (61) ಜುಳಾ (37) ಆತ್ಮಹತ್ಯೆಗೆ ಶರಣಾದ ದುರ್ದೈವಿಗಳು. ಮೂರು ದಿನಗಳ ಹಿಂದೆಯೇ ಇವರು ಆತ್ಮಹತ್ಯೆ ಮಾಡಿಕೊಂಡಿದ್ದು ಅಮ್ಮ, ಮಗಳು ಮನೆಯ ಹೊರಗೆ ಕಾಣಿಸಿಕೊಂಡಿರದ ಹಿನ್ನೆಲೆಯಲ್ಲಿ ಪಕ್ಕದ ಮನೆಯವರು ಪೋಲೀಸರಿಗೆ ಮಾಹಿತಿ ನೀಡಿದ್ದ ನಂತರ ಘಟನೆ ಬೆಳಕಿಗೆ ಬಂದಿದೆ.
ಮೃತರು ತಮಗೆ ಸೇರಿದ್ದ ನಾಲ್ಕು ಅಂಗಡಿಗಳ ಬಾಡಿಗೆ ಆದಾಯದಲ್ಲಿ ಜೀವಿಸುತ್ತಿದ್ದರು. ಖಾಸಗಿ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಸಾವಿತ್ರಮ್ಮನ ಮಗ ತನ್ನ ಸಂಸಾರದೊಡನೆ ಕೆಂಗೇರಿಯಲ್ಲಿ ಪ್ರತ್ಯೇಕವಾಗಿ ವಾಸಿಸುತ್ತಿದ್ದ.
"ಸಾವಿತ್ರಮ್ಮ ತನ್ನ ಮಗಳಿಗೆ ವಿವಾಹವಾಗಿಲ್ಲ ಎಂದು ಬೇಸರದಿಂದಿದ್ದರು. ಈ ಸಂಬಂಧ ಅವರು ಪಕ್ಕದ ಮನೆಯವರೊಡನೆಯೂ ವಿಷಾದ ವ್ಯಕ್ತಪಡಿಸಿದ್ದರು. ಇದೇ ಕಾರಣದಿಂಡ ಬೇಸತ್ತು ತಾಯಿ, ಮಗಳು ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಇದೆ. ಮೃತರು ಯಾವುದೇ ಡೆತ್ ನೋಟ್ ಬರೆದಿಟ್ಟಿಲ್ಲ ಎಂದು ಪೋಲೀಸರು ಮಾಹಿತಿ ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


