ಅಧಿಕಾರಿಗಳ ನಿರ್ಲಕ್ಷ್ಯ ಹೇಳಿಕೆ: ಕೆಎಸ್ಆರ್'ಟಿಸಿ ಕಚೇರಿ ಬಳಿ ಮುಷ್ಕರಕ್ಕೆ ಕಾರ್ಮಿಕ ಒಕ್ಕೂಟ ನಿರ್ಧಾರ
ನೌಕರರ ಸಮಸ್ಯೆಗಳ ಕುರಿತು ನಿರ್ಲಕ್ಷ್ಯ ಪ್ರದರ್ಶಿಸುತ್ತಿರುವ ಅಧಿಕಾರಿಗಳು, ಬೇಜಾಬ್ದಾರಿಯುತ ಹೇಳಿಕೆಗಳನ್ನು ನೀಡುತ್ತಿರುವ ಹಿನ್ನಲೆಯಲ್ಲಿ ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಕೇಂದ್ರ ಕಾರ್ಮಿಕ ಒಕ್ಕೂಟ ಮಾ.20 ರಂದು ಕೆಎಸ್ಆರ್'ಟಿಸಿ ಕೇಂದ್ರ ಕಚೇರಿ...

Published On :
ಬೆಂಗಳೂರು: ನೌಕರರ ಸಮಸ್ಯೆಗಳ ಕುರಿತು ನಿರ್ಲಕ್ಷ್ಯ ಪ್ರದರ್ಶಿಸುತ್ತಿರುವ ಅಧಿಕಾರಿಗಳು, ಬೇಜಾಬ್ದಾರಿಯುತ ಹೇಳಿಕೆಗಳನ್ನು ನೀಡುತ್ತಿರುವ ಹಿನ್ನಲೆಯಲ್ಲಿ ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಕೇಂದ್ರ ಕಾರ್ಮಿಕ ಒಕ್ಕೂಟ ಮಾ.20 ರಂದು ಕೆಎಸ್ಆರ್'ಟಿಸಿ ಕೇಂದ್ರ ಕಚೇರಿ ಬಳಿ ಅನಿರ್ದಿಷ್ಟಾವಧಿ ಉಪವಾಸ ಮುಷ್ಕರ ನಡೆಸಲು ನಿರ್ಧರಿಸಿದ್ದಾರೆ.
ಕೆಎಸ್ಆರ್'ಟಿಸಿ, ಬಿಎಂಟಿಸಿ ಹಾಗೂ ಎನ್ಇಕೆಎಸ್ಆರ್'ಟಿಸಿ ನಿರ್ವಹಣಾ ನಿಗಮಗಳೊಂದಿಗೆ ಕೇಂದ್ರದ ನಾಯಕರು ಚರ್ಚೆ ನಡೆಸಿದ್ದು, ಚರ್ಚೆ ಬಳಿಕ ಮಾರ್ಚ್ 20 ರಂದು ಕೆಎಸ್ಆರ್'ಟಿಸಿ ಕೇಂದ್ರ ಕಚೇರಿ ಬಳಿ ಪ್ರತಿಭಟನೆ ನಡೆಸುವ ತೀರ್ಮಾನಕ್ಕೆ ಬಂದಿದ್ದಾರೆಂದು ತಿಳಿದುಬಂದಿದೆ.
ಈ ಕುರಿತಂತೆ ಕೆಎಸ್ಆರ್'ಟಿಸಿ ಸಿಬ್ಬಂದಿ ಹಾಗೂ ಕಾರ್ಮಿಕರ ಒಕ್ಕೂಟ ಹೇಳಿಕೆ ನೀಡಿದ್ದು, ಫೆ.16ರಂದು ರಂದು ಸಬೆಯೊಂದು ನಡೆದಿದ್ದು, ಸಭೆಯಲ್ಲಿ ಕೆಎಸ್ಆರ್'ಟಿಸಿ ವ್ಯವಸ್ಥಾಪಕ ನಿರ್ದೇಶಕ ಉಮಾಶಂಕರ್ ಹಾಜರಿದ್ದರು. ಈ ವೇಳೆ ಕಾರ್ಮಿಕರ ಸಮಸ್ಯೆಗಳನ್ನು ಆಲಿಸಿದ ಅವರು, ಕೇಂದ್ರ ಸದಸ್ಯರು ಮುಖ್ಯಮಂತ್ರಿಗಳೊಂದಿಗೆ ಮಾತುಕತೆ ನಡೆಸುವಂತೆ ತಿಳಿಸಿದ್ದರು.
ಈ ರೀತಿಯ ವರ್ತನೆಯನ್ನು ಸಹಸಲು ಅಸಾಧ್ಯವಾದದ್ದು. ಅಧಿಕಾರಿಯ ಈ ಹೇಳಿಕೆ ಬೇಜಾಬ್ದಾರಿಯುತವಾಗಿದೆ. ನಮ್ಮಿಂದ ಯಾವುದೇ ರೀತಿಯ ಪ್ರಚೋದನತಾತ್ಮಕ ವರ್ತನೆಗಳು ಕಂಡು ಬರದೇ ಇದ್ದರೂ ಅಧಿಕಾರಿ ಈ ರೀತಿಯ ಹೇಳಿಕೆ ನೀಡಿರುವುದು ಬೇವಾಬ್ದಾರಿಯುತವಾಗಿದೆ ಕಾರ್ಮಿಕ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಹೆಚ್.ವಿ. ಅನಂತ್ ಸುಬ್ಬರಾವ್ ಅವರು ಹೇಳಿದ್ದಾರೆ.
ಕೈಗಾರಿಕಾ ನ್ಯಾಯಮಂಡಳಿ 2017ರ ಆ.29 ರಂದು ನೀಡಲಾಗಿದ್ದ ಪ್ರಶಸ್ತಿಯ ಪಟ್ಟಿ ಹಾಗೂ ಕಾರ್ಮಿಕರಿಗಾಗಿ ತೆಗೆದುಕೊಂಡಿರುವ ಉಪಕ್ರಮಗಳ ಬಗ್ಗೆ ಸರ್ಕಾರ ಮಾಹಿತಿ ನೀಡಬೇಕೆಂದು ಇದೇ ವೇಳೆ ಆಗ್ರಹಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


