ಬೆಂಗಳೂರು: ಐದನೇ ಅಂತಸ್ತಿನಿಂದ ಜಿಗಿದು ತಾಯಿ, ಮಗ ಆತ್ಮಹತ್ಯೆ; ಕೋಲಾರ ಇನ್ಸ್ ಪೆಕ್ಟರ್ ಕೈವಾಡದ ಶಂಕೆ
ನಗರದ ಕಾಡುಗೋಡಿಯಲ್ಲಿ ಐದನೇ ಅಂತಸ್ತಿನಿಂದ ಜಿಗಿದು ತಾಯಿ, ಮಗ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ವರದಿಯಾಗಿದೆ...

Published On :
ಬೆಂಗಳೂರು: ನಗರದ ಕಾಡುಗೋಡಿಯಲ್ಲಿ ಐದನೇ ಅಂತಸ್ತಿನಿಂದ ಜಿಗಿದು ತಾಯಿ, ಮಗ ಆತ್ಮಹತ್ಯೆ ಮಾಡಿಕೊಂಡಿದ್ದು ಕೋಲಾರದ ಇನ್ಸ್ ಪೆಕ್ಟರ್ ಚಂದ್ರಪ್ಪ ಅವರ ಕೈವಾಡ ಇರುವುದಾಗಿ ಶಂಕಿಸಲಾಗಿದ್ದು ಇದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬ ಅನುಮಾನಗಳು ಮೂಡ ತೊಡಗಿವೆ.
ಕಾಡುಗೋಡಿಯ ಬೆಳ್ತೂರಿನಲ್ಲಿ ಬೆಳಗಿವ ಜಾವ ಈ ಘಟನೆ ನಡೆದಿದ್ದು ಯಾದಗಿರಿ ಮೂಲದ 55 ವರ್ಷದ ಸುಂದರಮ್ಮ ಹಾಗೂ 36 ವರ್ಷದ ಮೌನೇಶ್ ಮೃತ ದುರ್ದೈವಿಗಳು. ಈ ಇಬ್ಬರೂ ಕೂಡ ನಾಲ್ಕು ದಿನಗಳ ಹಿಂದಷ್ಟೇ ಈ ಅಪಾರ್ಟ್ ಮೆಂಟ್ ಗೆ ಬಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಮೌನೇಶ್ ಚಂದ್ರಪ್ಪ ಅವರ ಸಹೋದರಿಯನ್ನು ಪ್ರೀತಿಸುತ್ತಿದ್ದು ಆ ಯುವತಿ ಕೂಡಾ ಅದೇ ಅಪಾರ್ಟ್ ಮೆಂಟ್ ನಲ್ಲಿ ವಾಸವಾಗಿದ್ದಳು. ಇವರಿಬ್ಬರು ಎರಡು ಮೂರು ಬಾರಿ ಮನೆ ಬಿಟ್ಟು ಹೋಗಿದ್ದರು. ಕಳೆದ ಕೆಲ ದಿನಗಳಿಂದ ಯುವತಿ ಕಾಣೆಯಾಗಿದ್ದು ಈ ಬಗ್ಗೆ ಯುವತಿ ಸಹೋದರ ಚಂದ್ರಪ್ಪ ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ತಂಗಿ ಕಾಣೆಯಾಗಿದ್ದಾಳೆ ಎಂದು ದೂರು ನೀಡಿದ್ದರು.
ತನ್ನ ತಂಗಿ ಮನೆ ಬಿಟ್ಟು ಹೋಗಿದ್ದರಿಂದ ಕೋಪಗೊಂಡಿದ್ದ ಯುವತಿಯ ಸಹೋದರ ಚಂದ್ರಪ್ಪ ಮೌನೇಶ್ ಹಾಗೂ ಸುನಂದಮ್ಮ ಅವರನ್ನು ತಂದು ತಾನು ವಾಸವಿದ್ದ ಬೆಳತೂರಿನ ಅಪಾರ್ಟ್ ಮೆಂಟ್ ಪ್ಲಾಟ್ ನಲ್ಲಿ ಕೂಡಿಹಾಕಿದ್ದ ಎನ್ನಲಾಗಿದೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


