ಬೆಂಗಳೂರು: ವೃದ್ಧೆಯನ್ನು ಕಟ್ಟಿಹಾಕಿ ನಗ, ನಾಣ್ಯದೊಂದಿಗೆ ಪರಾರಿ
ಮೂವರು ದರೋಡೆಕೋರರ ಗುಂಪು ನಗರದ ಬಂಗಲೆಯೊಳಗೆ ನುಗ್ಗಿ ವಯೋವೃದ್ಧೆಯ ಕೈಕಾಲು ...

ಬೆಂಗಳೂರು: ಮೂವರು ದರೋಡೆಕೋರರ ಗುಂಪು ನಗರದ ಬಂಗಲೆಯೊಳಗೆ ನುಗ್ಗಿ ವಯೋವೃದ್ಧೆಯ ಕೈಕಾಲು ಕಟ್ಟಿಹಾಕಿ ಮನೆಯಲ್ಲಿದ್ದ ಸುಮಾರು 10 ಲಕ್ಷ ರೂಪಾಯಿ ಬೆಲೆಬಾಳುವ ಚಿನ್ನವನ್ನು ಕಸಿದು ಪರಾರಿಯಾಗಿದ್ದಾರೆ.
ದೊಡ್ಡಬೊಮ್ಮಸಂದ್ರದಲ್ಲಿ ಕಳೆದ ಶನಿವಾರ ರಾತ್ರಿ ಈ ಘಟನೆ ನಡೆದಿದೆ. ದರೋಡೆ ಪ್ರಕರಣದಲ್ಲಿ ಮನೆ ಮತ್ತು ಮನೆಯಲ್ಲಿರುವವರ ಬಗ್ಗೆ ಗೊತ್ತಿದ್ದವರೇ ಈ ಕೃತ್ಯವೆಸಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಶನಿವಾರ ಮಧ್ಯರಾತ್ರಿ 1.30ರ ಸುಮಾರಿಗೆ ಈ ಘಟನೆ ನಡೆದಿದೆ. ಬಂಗಲೆಯಿರುವ ಮೂಕಾಂಬಿಕಾ ಫಾರ್ಮ್ ಹೌಸ್ ಗೆ ದರೋಡೆಕೋರರ ತಂಡ ಒಳನುಗ್ಗಿದೆ. ಮನೆಯ ಕೆಳ ಮಹಡಿಯಲ್ಲಿ 85 ವರ್ಷದ ವೃದ್ಧೆ ಇಳಾ ಚಂದ್ರಶೇಖರ್ ಮಲಗಿದ್ದರು. ಅವರ 52 ವರ್ಷದ ವಿಶೇಷ ಚೇತನ ಮಗ ಅಜಿತ್ ಮೊದಲ ಮಹಡಿಯಲ್ಲಿ ವಾಸಿಸುತ್ತಿದ್ದರು.
ಮನೆಯ ಹಿಂದಿನ ಬಾಗಿಲನ್ನು ಮುರಿದು ಒಳನುಗ್ಗಿದ ದರೋಡೆಕೋರರು ಕೆಳಮಹಡಿಯಲ್ಲಿ ಮಲಗಿದ್ದ ಇಳಾ ಅವರ ಕೈ ಕಾಲು ಕಟ್ಟಿಹಾಕಿದರು. ನಂತರ ಮನೆಯಿಡೀ ಹುಡುಕಾಡಿ ಚಿನ್ನವನ್ನು ದರೋಡೆ ಮಾಡಿದ್ದಲ್ಲದೆ 30 ಸಾವಿರ ರೂಪಾಯಿ ನಗದು ಕದ್ದು ಪರಾರಿಯಾಗಿದ್ದಾರೆ.
ನಂತರ ಬೆಳಗಿನ ಜಾವ ಸುಮಾರು 3 ಗಂಟೆಗೆ ಇಳಾ ತಾವೇ ಕಟ್ಟಿಹಾಕಿದ್ದರಿಂದ ಬಿಡಿಸಿಕೊಂಡು ಮೊದಲ ಮಹಡಿಗೆ ಹೋಗಿ ಮಗ ಅಜಿತ್ ನನ್ನು ಎಬ್ಬಿಸಿದರು. ದರೋಡೆಕೋರರು ಮೊದಲ ಮಹಡಿಗೆ ಹೋಗದಿದ್ದರಿಂದ ಘಟನೆ ನಡೆದಿದ್ದು ಅವರ ಗಮನಕ್ಕೆ ಬಂದಿರಲಿಲ್ಲ.
ನಂತರ ಇಳಾ ಮೇಕ್ರಿ ವೃತ್ತದ ಬಳಿಯಿರುವ ತಮ್ಮ ಸಂಬಂಧಿಕರಿಗೆ ಕರೆ ಮಾಡಿದರು. ತಕ್ಷಣವೇ ಅವರು ಸ್ಥಳಕ್ಕೆ ಧಾವಿಸಿ ವಿದ್ಯಾರಣ್ಯಪುರ ಪೊಲೀಸರಿಗೆ ದೂರು ನೀಡಿದರು. ಮೂವರು ದರೋಡೆಕೋರರು ಕನ್ನಡ ಭಾಷೆ ಮಾತನಾಡುತ್ತಿದ್ದು ಇಳಾ ಅವರ ಕುಟುಂಬ ಸದಸ್ಯರ ಹೆಸರನ್ನು ಕೂಡ ಹೇಳಿದ್ದಾರೆ. ಅಲ್ಲದೆ ಇಳಾ ಹತ್ತಿರ ಒಂದು ಉಂಗುರವನ್ನು ಕೂಡ ಕೊಡುವಂತೆ ಒತ್ತಾಯಿಸಿದ್ದಾರೆ ಎಂದು ಪೊಲೀಸರಿಗೆ ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


