ಗರ್ಭಿಣಿ ಮಹಿಳೆಯನ್ನು ತುಂಬಿ ಹರಿಯುತ್ತಿದ್ದ ನದಿಗೆ ನೂಕಿದ ದುರುಳ ಪತಿ!
ಪ್ರೀತಿಸಿ ವಿವಾಹವಾಗಿದ್ದ ವ್ಯಕ್ತಿಯೊಬ್ಬ 6 ತಿಂಗಳ ಗರ್ಭಿಣಿ ಪತ್ನಿಯನ್ನು ತುಂಬಿ ಹರಿಯುತ್ತಿದ್ದ ತುಂಗಭದ್ರಾ ನದಿಗೆ ತಳ್ಳಿ ಹತ್ಯೆ ಮಾಡಲು ಯತ್ನ ನಡೆಸಿರುವ ಘಟನೆಯೊಂದು ಹಾವೇರಿ ಜಿಲ್ಲೆಯ ನೂತನ ತಾಲೂಕು ರಟ್ಟೀಹಳ್ಳಿಯಲ್ಲಿ ನಡೆದಿದ್ದು, ಅದೃಷ್ಟವಶಾತ್ ಮಹಿಳೆ ಬದುಕುಳಿದಿದ್ದಾಳೆ...

Published On :
ಬೆಂಗಳೂರು: ಪ್ರೀತಿಸಿ ವಿವಾಹವಾಗಿದ್ದ ವ್ಯಕ್ತಿಯೊಬ್ಬ 6 ತಿಂಗಳ ಗರ್ಭಿಣಿ ಪತ್ನಿಯನ್ನು ತುಂಬಿ ಹರಿಯುತ್ತಿದ್ದ ತುಂಗಭದ್ರಾ ನದಿಗೆ ತಳ್ಳಿ ಹತ್ಯೆ ಮಾಡಲು ಯತ್ನ ನಡೆಸಿರುವ ಘಟನೆಯೊಂದು ಹಾವೇರಿ ಜಿಲ್ಲೆಯ ನೂತನ ತಾಲೂಕು ರಟ್ಟೀಹಳ್ಳಿಯಲ್ಲಿ ನಡೆದಿದ್ದು, ಅದೃಷ್ಟವಶಾತ್ ಮಹಿಳೆ ಬದುಕುಳಿದಿದ್ದಾಳೆ.
ಗಂಡ ತಳ್ಳಿದ ಬಳಿಕ 1 ಕಿ.ಮೀ ದೂರ ಕೊಚ್ಚಿಹೋದ ಮಹಿಳೆ, ನದಿಯಲ್ಲಿ ಅಚಾನಕ್ ಆಗಿ ಸಿಕ್ಕ ಬಂಡೆಯೊಂದನ್ನು ಹಿಡಿದು, ರಾತ್ರಿಯಿಡೀ ಸಾವು-ಬದುಕಿನ ನಡುವೆ ಹೋರಾಟ ನಡೆಸಿದ ಆಕೆಯನ್ನು ಕಂಡ ಸಾರ್ವಜನಿಕರು ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ದುರುಳ ಪತಿರಾಯನನ್ನು ಪೊಲೀಸರು ಇದೀಗ ಬಂಧನಕ್ಕೊಳಪಡಿಸಿದ್ದಾರೆ. ರಟ್ಟೀಹಳ್ಳಿ ತಾಲೂಕಿನ ಚಿಕ್ಕಕಬ್ಬಾರ ಗ್ರಾಮದ ರೂಪೇಶ್ ಗೌಡ ಬಂಧಿತ ಆರೋಪಿಯಾಗಿದ್ದಾನೆ.
ಈತ ತನ್ನ ಗರ್ಭಿಣಿ ಪತ್ನಿ ಅರುಣಾಕುಮಾರಿಯನ್ನು ಗುರುವಾರ ಉಕ್ಕಡಗಾತ್ರಿ ದೇವಸ್ಥಾನಕ್ಕೆ ಕರೆದೊಯ್ದಿದ್ದ. ವಾಪಸ್ ಬರುವಾಗ ಹರಿಹರ ತಾಲೂಕಿನ ನಂದಿಗುಂದಿ ಸೇತುವೆ ಮೇಲಿಂದ ರಾತ್ರಿ 11.30ಕ್ಕೆ ಆಕೆಯನ್ನು ನದಿಗೆ ತಳ್ಳಿದ್ದಾನೆ.
ಗುತ್ತಿಗೆ ಕೆಲಸ ಮಾಡುತ್ತಿದ್ದ ರೂಪೇಶ್ ಗೌಡ, ಅರುಣಾ ಕುಮಾರಿಯನ್ನು 1 ವರ್ಷದ ಹಿಂದಷ್ಟೇ ವಿವಾಹವಾಗಿದ್ದ. ರೂಪೇಶ್ ಕುಮಾರ್'ಗೆ ಮಗು ಇಷ್ಟವಿರಲಿಲ್ಲ. ಇದರಂತೆ ಇಬ್ಬರ ನಡುವೆ ಮಾತುಕತೆ ಚಕಮಕಿ ನಡೆದಿದೆ. ಈ ವೇಳೆ ಪತ್ನಿ ಮೇಲೆ ತೀವ್ರವಾಗಿ ಕೆಂಡಾಮಂಡಲಗೊಂಡ ರೂಪೇಶ್ ಪತ್ನಿಯನ್ನು ನದಿಗೆ ತಳ್ಳಿದ್ದಾನೆಂದು ಹೇಳಲಾಗುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


