ಬಿಎಂಆರ್ಸಿಎಲ್ - ನೌಕರರ ಸಂಧಾನ ಬಹುತೇಕ ಯಶಸ್ವಿ
ಪದೇಪದೆ ಮುಷ್ಕರದ ಬೆದರಿಕೆ ಹಾಕುತ್ತಿದ್ದ ಬೆಂಗಳೂರು ಮೆಟ್ರೋ ರೈಲು ನೌಕರರ ಸಂಘದ ಬೇಡಿಕೆಗಳನ್ನು ಈಡೇರಿಸಲು...

Published On :
ಬೆಂಗಳೂರು: ಪದೇಪದೆ ಮುಷ್ಕರದ ಬೆದರಿಕೆ ಹಾಕುತ್ತಿದ್ದ ಬೆಂಗಳೂರು ಮೆಟ್ರೋ ರೈಲು ನೌಕರರ ಸಂಘದ ಬೇಡಿಕೆಗಳನ್ನು ಈಡೇರಿಸಲು ಬೆಂಗಳೂರು ಮೆಟ್ರೋ ರೈಲು ನಿಗಮ(ಬಿಎಂಆರ್ ಸಿಎಲ್) ಒಪ್ಪಿಕೊಂಡಿದೆ.
ಬಿಎಂಆರ್ ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಮಹೇಂದ್ರ ಜೈನ್ ಅವರ ಪ್ರಕಾರ, ಈ ಕೇಳಗಿನ ಬೇಡಿಕೆಗಳನ್ನು ಈಡೇರಿಸಲು ಒಪ್ಪಿಕೊಂಡಿದ್ದು, ಸಂಧಾನ ಬಹುತೇಕ ಯಶಸ್ವಿಯಾಗಿದೆ ಎನ್ನಲಾಗಿದೆ.
ಆರ್ಥಿಕ ಬೇಡಿಕೆಗಳು:
1. ರಾತ್ರಿ ಪಾಳಿಯ ಭತ್ಯೆ
2. ಕಠಿಣ ಕೆಲಸದ ಭತ್ಯೆ(ರೈಲು ನಿರ್ವಹಕರಿಗೆ ಮಾತ್ರ)
3. ಸಮವಸ್ತ್ರ ತೊಳೆಯುವ ಭತ್ಯೆ
4. ಸಾರಿಗೆ ಭತ್ಯೆ
5. ಸಾಮಾನ್ಯ ರಜೆ ಭತ್ಯೆ
ಆರ್ಥಿಕೇತರ ಬೇಡಿಕೆ:
1. ಬಿಎಂಆರ್ ಸಿಎಲ್ ಡಿಪೋದಲ್ಲಿನ ಕ್ಯಾಂಟೀನ್ ನಲ್ಲಿ ಕಡಿಮೆ ಬೆಲೆ ಆಹಾರ
2. ನೌಕರರ ಕನ್ನಡ ಸಂಘಕ್ಕೆ ಮಾನ್ಯತೆ
3. 100 ಮಹಿಳೆಯರು ಕೆಲಸ ಮಾಡುವ ನಿಲ್ದಾಣದಲ್ಲಿ ಕ್ರೀಚ್ ಸೌಲಭ್ಯ
4. ನೌಕರರೊಂದಿಗೆ ವಾರ್ಷಿಕ ಅಪ್ರೈಸಲ್ ಪ್ರತಿ ಹಂಚಿಕೊಳ್ಳಬೇಕು
5. ಸಿಬ್ಬಂದಿಗೆ ಹೆಚ್ಚುವರಿ ಸಮವಸ್ತ್ರ ನೀಡಬೇಕು
ಈ ಬೇಡಿಕೆಗಳ ಈಡೇರಿಕೆಗೆ ಸಂಬಂಧಿಸಿದಂತೆ ಮೆಟ್ರೋ ಆಡಳಿತ ಮಂಡಳಿ ಹಾಗೂ ನೌಕರರ ಸಂಘದ ನಡುವೆ ಹಲವು ಬಾರಿ ದ್ವಿಪಕ್ಷೀಯ ಮಾತುಕತೆ ನಡೆದಿದ್ದರೂ ಫಲಪ್ರದವಾಗಿರಲಿಲ್ಲ. ಹೀಗಾಗಿ ಇತ್ತೀಚಿಗಷ್ಟೇ ಈ ವಿಚಾರದಲ್ಲಿ ರಾಜ್ಯ ಸರ್ಕಾರ ಮಧ್ಯಪ್ರವೇಶಿಸುವ ಅಗತ್ಯವಿದೆ. ಮುಂದಿನ ಹತ್ತು ದಿನಗಳಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಅಥವಾ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯು ಬಿಎಂಆರ್ಸಿಎಲ್ ಹಾಗೂ ನೌಕರರ ಸಂಘದೊಡನೆ ತ್ರಿಪಕ್ಷೀಯ ಮಾತುಕತೆ ನಡೆಸಿ, ನೌಕರರ ಆರ್ಥಿಕ ಮತ್ತು ಆರ್ಥಿಕೇತರ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಚರ್ಚೆ ನಡೆಸಬೇಕೆಂದು ಹೈಕೋರ್ಟ್ ಸೂಚಿಸಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
BMRCLಬಿಎಂಆರ್ ಸಿಎಲ್Bangalore Metro Rail Employees Unionagreed to demandsಮೆಟ್ರೋ ರೈಲು ನೌಕರರ ಸಂಘಬೇಡಿಕೆ ಈಡೇರಿಸಲು ಒಪ್ಪಿಗೆ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


