ರಾಜ್ಯ

'ಪತ್ನಿಯ ಎಟಿಎಂ ಕಾರ್ಡನ್ನು ಪತಿಯು ಬಳಸುವಂತಿಲ್ಲ'; ಎಸ್ ಬಿಐ ವಾದಕ್ಕೆ ಮನ್ನಣೆ ನೀಡಿದ ಕೋರ್ಟ್

ಬ್ಯಾಂಕ್ ಗ್ರಾಹಕರೇ ಇನ್ನು ಮುಂದೆ ನಿಮ್ಮ ಪತಿ ಅಥವಾ ಪತ್ನಿಯ ಎಟಿಎಂ ಕಾರ್ಡ್ ಗಳನ್ನು ನೀವು ಬಳಕೆ ಮಾಡುವಂತಿಲ್ಲ.. ಒಂದು ವೇಳೆ ಬಳಕೆ ಮಾಡಿದರೆ ಅದರಿಂದಾಗುವ ಹಣ ನಷ್ಟಕ್ಕೆ ನೀವೇ ಹೊಣೆ...

'ಪತ್ನಿಯ ಎಟಿಎಂ ಕಾರ್ಡನ್ನು ಪತಿಯು ಬಳಸುವಂತಿಲ್ಲ'; ಎಸ್ ಬಿಐ ವಾದಕ್ಕೆ ಮನ್ನಣೆ ನೀಡಿದ ಕೋರ್ಟ್
ಸಂಗ್ರಹ ಚಿತ್ರ
Published On :
ಬೆಂಗಳೂರು: ಬ್ಯಾಂಕ್ ಗ್ರಾಹಕರೇ ಇನ್ನು ಮುಂದೆ ನಿಮ್ಮ ಪತಿ ಅಥವಾ ಪತ್ನಿಯ ಎಟಿಎಂ ಕಾರ್ಡ್  ಗಳನ್ನು ನೀವು ಬಳಕೆ ಮಾಡುವಂತಿಲ್ಲ.. ಒಂದು ವೇಳೆ ಬಳಕೆ ಮಾಡಿದರೆ ಅದರಿಂದಾಗುವ ಹಣ ನಷ್ಟಕ್ಕೆ ನೀವೇ ಹೊಣೆ...
ಹೌದು. ಅಂತಹುದೊಂದು ವಾದವನ್ನು ದೇಶದ ಅತೀ ದೊಡ್ಡ ಬ್ಯಾಂಕಿಂಗ್ ಸಂಸ್ಥೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ ಬಿಐ) ಮಂಡಿಸಿದ್ದು, ಇದಕ್ಕೆ ಕೋರ್ಟ್ ಕೂಡ ಸಮ್ಮತಿ ಸೂಚಿಸಿದೆ. ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಕೋರ್ಟ್ ಇಂತಹ ಅಭಿಪ್ರಾಯಪಟ್ಟಿದ್ದು, ಬ್ಯಾಂಕ್ ನಿಯಮಗಳು ಮತ್ತು ಎಟಿಎಂ ಪಿನ್ ನಿಯಮಗಳ ಅನ್ವಯ ಪತಿ, ಪತ್ನಿ, ಸ್ನೇಹಿತ, ಸಂಬಂಧಿ ಇನ್ಯಾರೇ ಆಗಿರಲಿ ಒಬ್ಬರ ಎಟಿಎಂ ಕಾರ್ಡ್ ಅನ್ನು ಮತ್ತೊಬ್ಬರು ಬಳಕೆ ಮಾಡುವಂತಿಲ್ಲ. ಒಂದು ವೇಳೆ ಅನಧಿಕೃತವಾಗಿ ಅಥವಾ ಕಾರ್ಡ್ ಮಾಲೀಕನ ಒಪ್ಪಿಗೆ ಮೇರೆಗೆ ಕಾರ್ಡ್ ಬಳಕೆ ಮಾಡಿದಾಗ ಆಗುವ ಹಣ ನಷ್ಟಕ್ಕೆ ಖಾತೆದಾರ ಅಥವಾ ಕಾರ್ಡ್ ಬಳಕೆದಾರರೇ ಕಾರಣರಾಗುತ್ತಾರೆ ಎಂದು ಕೋರ್ಟ್ ಹೇಳಿದೆ.
ಏನಿದು ಪ್ರಕರಣ?
ಮಾರತ್ ಹಳ್ಳಿ ನಿವಾಸಿ ವಂದನಾ ಎಂಬ ಮಹಿಳೆ ತಾಯ್ತನದ ರಜೆ ವೇಳೆ ಕಳೆದ ನವೆಂಬರ್ 14, 2013ರಂದು ತಮ್ಮ ಪತಿಗೆ ಎಟಿಎಂ ಕಾರ್ಡ್ ನೀಡಿ 25 ಸಾವಿರ ಹಣ ವಿತ್ ಡ್ರಾ ಮಾಡಲು  ಹೇಳಿದ್ದರು. ಅದರಂತೆ ಪತಿ ರಾಜೇಶ್ ಕುಮಾರ್ ಸಮೀಪದ ಎಸ್ ಬಿಐ ಎಟಿಎಂ ಕೇಂದ್ರಕ್ಕೆ ಹೋಗಿ ಕಾರ್ಡ್ ಹಾಕಿ ಹಣ ವಿತ್ ಡ್ರಾ ಮಾಡಿದ್ದು, ಈ ವೇಳೆ ಎಟಿಎಂ ಮಷಿನ್ ನಿಂದ ಹಣ ಬಾರದೇ ಕೇವಲ ಸ್ಲಿಪ್ ಮಾತ್ರ ಬಂದಿದೆ. ಆದರೆ ಸ್ಲಿಪ್ ನಲ್ಲಿ 25 ಸಾವಿರ ಹಣ ವಿತ್ ಡ್ರಾ ಆಗಿರುವ ಕುರಿತು ಪ್ರಿಂಟ್ ಆಗಿದ್ದು, ಇದರಿಂದ ಗಾಬರಿಯಾದ ಪತಿ ರಾಜೇಶ್ ಎಸ್ ಬಿಐ ಬ್ಯಾಂಕ್ ಗೆ ದೂರು ನೀಡಿದ್ದಾರೆ.
ಮೂರು ದಿನಗಳ ಬಳಿಕ ಈ ದೂರಿನ ಬಗ್ಗೆ ವಿಚಾರಿಸಲಾಗಿ ಬ್ಯಾಂಕ್ ಅಧಿಕಾರಿಗಳು ದೂರಿನ ವಿಚಾರಣೆ ಸಂಪೂರ್ಣವಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಅಲ್ಲದೆ ಗ್ರಾಹಕರಿಗೆ ಹಣ ವರ್ಗಾವಣೆ ಮಾಡಲಾಗಿದೆ ಎಂದು ನಮೂದಾಗಿದೆ. ಆದರೆ ವಂದನಾ ಅವರ ಖಾತೆಗೆ ಹಣ ಮಾತ್ರ ಜಮೆಯಾಗಿಲ್ಲ, ಇದರಿಂದ ಕೋಪಗೊಂಡ ರಾಜೇಶ್ ಕುಮಾರ್ ಅಕ್ಟೋಬರ್ 21, 2014ರಂದು ಗ್ರಾಹಕ ರಕ್ಷಣಾ ಕೋರ್ಟ್ ಲ್ಲಿ ದೂರು ನೀಡಿದ್ದಾರೆ. ಈ ವೇಳೆ ಸಮಾರು 3.5 ವರ್ಷಗಳ ಸುಧೀರ್ಘ ವಿಚಾರಣೆ ನಡೆಸಿದ ಕೋರ್ಟ್ ಎಸ್ ಬಿಐ ನಿಂದ ಹೇಳಿಕೆ ಪಡೆದಿದ್ದು,. ವಂದನಾ ಅವರ ಪತಿ ಎಟಿಎಂ ಕಾರ್ಡ್ ನಿಂದ್ ವಿತ್ ಡ್ರಾ ಮಾಡುವ ವೇಳೆ ಮಷಿನ್ ನಲ್ಲಿ 25 ಸಾವಿರ ರೂಗಳಿಗಿಂತಲೂ ಹೆಚ್ಚು ಹಣವಿತ್ತು. ಇನ್ನು ವಂದನಾ ಅವರ ಕಾರ್ಡ್ ಅನ್ನು ಅವರ ಪತಿ ಬಳಕೆ ಮಾಡುವಂತಿಲ್ಲ. ಇದು ಎಟಿಎಂ ಪಿನ್ ನಿಯಮ ಮತ್ತು ಬ್ಯಾಂಕ್ ಗ್ರಾಹಕ ಭದ್ರತಾ ನಿಯಮದ ಉಲ್ಲಂಘನೆಯಾಗುತ್ತದೆ ಎಂದು  ಹೇಳಿದೆ.
ಎಸ್ ಬಿಐ ವಾದಕ್ಕೆ ಮನ್ನಣೆ ನೀಡಿರುವ ಕೋರ್ಟ್, ವಂದನಾ ಅವರು ತಮ್ಮ ಕಾರ್ಡ್ ನೀಡುವ ಬದಲು ಚೆಕ್ ನೀಡಿ ಅದರ ಮೂಲಕ ಹಣ ವಿತ್ ಡ್ರಾ ಮಾಡಲು ಹೇಳಬಹುದಿತ್ತು, ಅಥವಾ ಒಂದು ಪತ್ರ ಬರೆದುಕೊಡಬೇಕಿತ್ತು. ಇದಾವುದೂ ಮಾಡಿಲ್ಲ. ಹೀಗಾಗಿ ಎಸ್ ಬಿಐ ವಾದ ಸರಿಯಾಗಿದ್ದು, ವಂದನಾ ಅವರ ದೂರನ್ನು ಪರಿಷ್ಕರಿಸಲಾಗಿದೆ ಎಂದು ತೀರ್ಪು ನೀಡಿದೆ. ಅಲ್ಲದೆ ಪ್ರಕರಣವನ್ನೂ ವಜಾಗೊಳಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.