ರಾಜ್ಯ

ಕರ್ನಾಟಕ: ಬೆಂಗಳೂರು, ಕನಕಪುರ ಸೇರಿ 5 ಕಡೆ ಸಿಬಿಐ ದಾಳಿ

ಅಪನಗದೀಕರಣದ ಬಳಿಕ ಕಾನೂನು ಬಾಹಿರವಾಗಿ ನೋಟುಗಳ ವಿನಿಮಯ ಮಾಡಿದ್ದಾರೆಂಬ ಆರೋಪದ ಮೇಲೆ ಸಿಬಿಐ ಅದಿಕಾರಿಗಳು ಬೆಂಗಳೂರು, ಕನಕಪುರ ಸೇರಿ ರಾಜ್ಯ ಒಟ್ಟು 5 ಕಡೆ ಗುರುವಾರ ಏಕಕಾಲಕ್ಕೆ ದಾಳಿ ನಡೆಸಿದ್ದಾರೆ...

ಕರ್ನಾಟಕ: ಬೆಂಗಳೂರು, ಕನಕಪುರ ಸೇರಿ 5 ಕಡೆ ಸಿಬಿಐ ದಾಳಿ
ಸಂಗ್ರಹ ಚಿತ್ರ
Published On :
ಬೆಂಗಳೂರು; ಅಪನಗದೀಕರಣದ ಬಳಿಕ ಕಾನೂನು ಬಾಹಿರವಾಗಿ ನೋಟುಗಳ ವಿನಿಮಯ ಮಾಡಿದ್ದಾರೆಂಬ ಆರೋಪದ ಮೇಲೆ ಸಿಬಿಐ ಅದಿಕಾರಿಗಳು ಬೆಂಗಳೂರು, ಕನಕಪುರ ಸೇರಿ ರಾಜ್ಯ ಒಟ್ಟು 5 ಕಡೆ ಗುರುವಾರ ಏಕಕಾಲಕ್ಕೆ ದಾಳಿ ನಡೆಸಿದ್ದಾರೆ. 
ಈ ಮೂಲಕ ಅಕ್ರಮ ಆಸ್ತಿ ಗಳಿಕೆ ಆರೋಪದ ಮೇಲೆ ಕಳೆದ ವರ್ಷ ಜುಲೈ-ಆಗಸ್ಟ್ ತಿಂಗಳಲ್ಲಿ ಆದಾಯ ತೆರಿಗೆ ಇಲಾಖೆ ಅದಿಕಾರಿಗಳ ದಾಳಿಗೊಳಗಾಗಿದ್ದ ಶಿವಕುಮಾರ್ ಮತ್ತವರ ಆಪ್ತರಿಗೆ ಮತ್ತೆ ಸಿಬಿಐ ಸಂಕಷ್ಟ ಆರಂಭವಾಗಿದೆ. 
ನೋಟು ನಿಷೇಧವಾದ ಬಳಿಕ ರಾಮನಗರ ಶಾಖೆಯ ಕಾರ್ಪೊರೇಷನ್ ಬ್ಯಾಂಕ್ ನಲ್ಲಿ ರೂ.10 ಲಕ್ಷ ವಿನಿಮಯವಾಗಿದೆ. ಮತದಾರರ ಗುರುತಿನ ಚೀಟಿ ಮತ್ತು ವಾಹನಗಳ ಪರವಾನಗಿ ಹೊಂದಿರುವ ಮೂಲ ವ್ಯಕ್ತಿಗಳಿಗೆ ಮಾಹಿತಿ ಇಲ್ಲದೆಯೇ ಹಣ ವಿನಿಮಯ ಮಾಡಿರುವ ಆರೋಪದ ಮೇಲೆ ಸಿಬಿಐ ಅಧಿಕಾರಿಗಳು ಕಾರ್ಯಾಚರಣೆ ಕೈಗೊಗಂಡಿದ್ದಾರೆ. ರೂ.500 ಹಾಗೂ ರೂ.2000 ನೋಟುಗಳನ್ನು ಸೂಕ್ತ ದಾಖಲೆಗಳಿಲ್ಲದೆ ವಿನಿಮಯ ಮಾಡಿದ ಬಗ್ಗೆ ಸಿಬಿಐನ ಎಸಿಬಿ ವಿಭಾಗದಲ್ಲಿ 2017ರ ಏ.7ಕ್ಕೆ ಎಫ್ಐಆಐರ್ ದಾಖಲಾಗಿತ್ತು. 
ಈ ಎಫ್ಐಆರ್ ಆಧಾರದ ಮೇಲೆ ತನಿಖೆ ಕೈಗೊಂಡ ಸಿಬಿಐ ಅಧಿಕಾರಿಗಳು ಹಲವು ಮಾಹಿತಿಗಳನ್ನು ಸಂಗ್ರಹಿಸಿದ್ದಾರೆ. ನ್ಯಾಯಾಲಯದಿಂದ ಶೋಧ ಕಾರ್ಯಾಚರಣೆಗೆ ಅನುಮತಿ ಪಡೆದು 5 ಸ್ಥಳಗಳಲ್ಲಿ ಗುರುವಾರ ಬೆಳಿಗ್ಗೆ ಏಕಕಾಲಕ್ಕೆ ಸಿಬಿಐ ಅಧಇಕಾರಿಗಳು ಕಾರ್ಯಾಚರಣೆ ನಡೆಸಿದ್ದಾರೆ. 
ರಾಮನಗರ ಶಾಖೆಯ ಕಾರ್ಪೊರೇಷನ್ ಬ್ಯಾಂಕ್'ನ ಪ್ರಧಾನ ವ್ಯವಸ್ಥಾಪಕ ಬಿ.ಪ್ರಕಾಶ್ ಮೊದಲ ಆರೋಪಿಯಾಗಿದ್ದು, ಸಂಸದ ಡಿ.ಕೆ.ಸುರೇಶ್ ಆಪ್ತ ಸಹಾಯಕ ಪದ್ಮನಾಭಯ್ಯ ಅವರನ್ನು 2ನೇ ಆರೋಪಿಯನ್ನಾಗಿ ಮಾಡಲಾಗಿದೆ. ಕನಕಪುರ ತಾಲೂಕು ಕಚೇರಿಯಲ್ಲಿನ ಉಪ ತಹಸೀಲ್ದಾರ್ ಶಿವಾನಂದ, ಎಫ್'ಡಿಎ ನಂಬಪ್ಪ ಅವರನ್ನು ಕ್ರಮವಾಗಿ 3 ಮತ್ತು 4ನೇ ಆರೋಪಿಯನ್ನಾಗಿ ಮಾಡಲಾಗಿದೆ. 
ಹೆಚ್ಚಿನ ಶೋಧನೆ ನಡೆಸಲು ನ್ಯಾಯಾಲಯದಿಂದ ಸರ್ಚ್ ವಾರೆಂಟ್ ಪಡೆದು 5 ಸ್ಥಳಗಳ ಮೇಲೆ ದಾಳಿ ನಡೆಸಲಾಗಿದೆ. ನೆಲಮಂಗಲದ ಪದ್ಮನಾಭಯ್ಯ ನಿವಾಸದಮೇಲೆ, ಶಿವಾನಂದರ ಬೆಂಗಳೂರಿನಲ್ಲಿನ ನಿವಾಸ, ನಂಜಪ್ಪ ಅವರ ಕನಕಪುರ ನಿವಾಸ, ತಹಶೀಲ್ದಾರ್ ಕಚೇರಿಯಲ್ಲಿನ ಚುನಾವಣಾ ಘಟಕ ಮತ್ತು ರಾಮನಗರ ಜಿಲ್ಲಾಧಿಕಾರಿ ಕಚೇರಿಗಳ ಮೇಲೆ ದಾಳಿ ನಡೆಸಿ ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದು ಸಿಬಿಐ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.