ಕೆಆರ್ಎಸ್, ಕಬಿನಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ದಂಪತಿಗಳಿಂದ ಬಾಗಿನ
ಉತ್ತಮ ಮಳೆಯಿಂದಾಗಿ ಸಂಪೂರ್ಣ ಭರ್ತಿಯಾದ ಮಂಡ್ಯ ಜಿಲ್ಲೆ ಕೃಷ್ಣ ರಾಜಸಾಗರ ಜಲಾಶಯ, ಕಬಿನಿ ಜಲಾಶಯಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ ದಂಪತಿಗಳು ಬಾಗಿನ ಸಮರ್ಪಿಸಿದರು.

Published On :
ಮೈಸೂರು: ಉತ್ತಮ ಮಳೆಯಿಂದಾಗಿ ಸಂಪೂರ್ಣ ಭರ್ತಿಯಾದ ಮಂಡ್ಯ ಜಿಲ್ಲೆ ಕೃಷ್ಣ ರಾಜಸಾಗರ ಜಲಾಶಯ, ಕಬಿನಿ ಜಲಾಶಯಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ ದಂಪತಿಗಳು ಬಾಗಿನ ಸಮರ್ಪಿಸಿದರು.
ಶುಕ್ರವಾರ ಸಂಜೆ 4.20ಕ್ಕೆ ಕೆಆರ್ಎಸ್ ಜಲಾಶಯಕ್ಕೆ ಬಾಗಿನ ಸಮರ್ಪಿಸಿದ ಸಿಎಂ ಕಾನಡಿಗೆಯಲ್ಲಿಯೇ ಸಂಚರಿಸಿ ಡ್ಯಾಂ ವೀಕ್ಷಿಸಿದ್ದಾರೆ. ಬಾಗಿನ ಸಮರ್ಪಣೆ ವೇಳೆ ಪತ್ನಿ ಅನಿತಾ ಕುಮಾರಸ್ವಾಮಿ, ಸಚಿವರಾದ ಡಿಕೆ ಶಿವಕುಮಾರ್, ಸಿಎನ್ ಪುತ್ಟರಾಜುಜಿ ಟಿ ದೇವೇಗೌಡ, ಸಾ ರಾ ಮಹೇಶ್, ಡಿ ಸಿ ತಮ್ಮಣ್ಣ ಹಾಜರಿದ್ದರು.
ಇದಕ್ಕೂ ಮುನ್ನ ಮೈಸೂರು ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿದ್ದ ಮುಖ್ಯಮಂತ್ರಿಗಳು ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಪೂಜೆ ಬಳಿಕ ಮಾತನಾಡಿದ ಕುಮಾರಸ್ವಾಮಿ "ನಾಡಿನ ಜಲಾಶಯಗಳು ತುಂಬಿದೆ.ನಾಡು ಸಮೃದ್ದಿಯಾಗಿದೆ. ವಿದ್ಯುತ್, ನೀರಿನ ಸಮಸ್ಯೆ ಇಲ್ಲ. 12 ವರ್ಷಗಳ ನಂತರ ಜಲಾಶಯಕ್ಕೆ ಬಾಗಿನ ಸಮರ್ಪಣೆಯಾಗಿದೆ. ಇದು ತಾಯಿ ಚಾಮುಂಡೇಶ್ವರಿಯ ಆಶೀರ್ವಾದ.
"ನಾಡು ಸುಖ ಸಮೃದ್ದಿಯಾಗಿರುವ ಕಾರಣ ಈ ಬಾರಿ ದಸರಾ ಆಚರಣೆಯನ್ನು ಅದ್ದೂರಿಯಾಗಿ ನಡೆಸಲಿದ್ದೇವೆ. ನಮ್ಮ ಈ ದಸರಾ ಆಚರಣೆ ನಾಡಿಗೆ ಮಾದರಿಯಾಗಲಿದೆ" ಎಂದಿದ್ದಾರೆ.
ಚಾಂಮುಂಡೇಶ್ವರಿಗೆ ಪೂಜೆ ಸಲ್ಲಿಸಿ ನಾಡಿನ ಅಭಿವೃದ್ಧಿಗೆ ಹಾಗೂ ರೈತರ ನೆಮ್ಮದಿಯ ಜೀವನಕ್ಕೆ ತಾಯಿಯಲ್ಲಿ ಪ್ರಾರ್ಥಿಸಿದ್ದೇನೆ ಎಂದು ಅವರು ಹೇ:ಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


