ಇಷ್ಟು ವರ್ಷ ರೈತರಿಗೆ ಬರಗಾಲದ ಚಿಂತೆಯಾಗಿದ್ದರೆ, ಈ ವರ್ಷ ಪ್ರವಾಹದ ಭೀತಿ
ಕಳೆದ ಮೂರು ವರ್ಷಗಳಿಂದ ಸತತ ಬರಗಾಲದಿಂದ ಬೆಳೆನಷ್ಟ ಅನುಭವಿಸಿದ್ದ ರಾಜ್ಯದ ರೈತರು ಈ ವರ್ಷ ...

ಬೆಂಗಳೂರು: ಕಳೆದ ಮೂರು ವರ್ಷಗಳಿಂದ ಸತತ ಬರಗಾಲದಿಂದ ಬೆಳೆನಷ್ಟ ಅನುಭವಿಸಿದ್ದ ರಾಜ್ಯದ ರೈತರು ಈ ವರ್ಷ ಪ್ರವಾಹದಿಂದ ಬೆಳೆ ನಷ್ಟ ಎದುರಿಸುವ ಭೀತಿಯಲ್ಲಿದ್ದಾರೆ. ಜಲಾಶಯಗಳಲ್ಲಿ ನೀರು ಭರ್ತಿಯಾಗುತ್ತಿದ್ದರೂ ಕೂಡ ತಗ್ಗು ಪ್ರದೇಶಗಳಿಗೆ ನೀರು ನುಗ್ಗುವುದರಿಂದ ಮಲೆನಾಡು ಮತ್ತು ಬಯಲುಸೀಮೆಗಳ ರೈತರು ಬೆಳೆನಷ್ಟವನ್ನು ಎದುರಿಸುವ ಆತಂಕ ಎದುರಿಸುತ್ತಿದ್ದಾರೆ.
ಈ ಕುರಿತು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ ಕೃಷಿ ತಜ್ಞ ಬಿ ಸಿ ನಂಜಪ್ಪ, ದಕ್ಷಿಣ ಒಳನಾಡಿನಲ್ಲಿ ಅನಿರೀಕ್ಷಿತ ಮಳೆ ಮೆಕ್ಕೆಜೋಳ ಮತ್ತು ಇತರ ಬೇಸಿಗೆಯ ಬೆಳೆಗಳ ಮೇಲೆ ಪರಿಣಾಮ ಬೀರಿದೆ. ಭತ್ತ ಹೊರತುಪಡಿಸಿ ಬೇರೆ ಎಲ್ಲಾ ಬೆಳೆಗಳ ಮೇಲೆ ಅಧಿಕ ಮಳೆ ಪರಿಣಾಮ ಬೀರಿದೆ.
ಕೊಡಗು, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ತೋಟದ ಬೆಳೆಗಳು ತೀವ್ರ ಹಾನಿಗೀಡಾಗಿವೆ. ಇದೇ ಪ್ರಮಾಣದಲ್ಲಿ ಇನ್ನು ಕೆಲ ದಿನಗಳವರೆಗೆ ಮಳೆ ಮುಂದುವರಿದರೆ ಕಾಫಿ ಬೀಜಗಳು ಕೊಳೆತು ಹೋಗುವ ಸಾಧ್ಯತೆಯಿದೆ. ಕಾಳುಮೆಣಸು ಮತ್ತು ಇತರ ವಾಣಿಜ್ಯ ಬೆಳೆಗಳಿಗೂ ಅಧಿಕ ಮಳೆಯಿಂದ ತೊಂದರೆಯಾಗಿದೆ. ಈ ಬಾರಿ ಶುಂಠಿಯ ಬೆಲೆ ಏರಿಕೆಯಾಗಬಹುದೆಂದು ಖುಷಿಯಲ್ಲಿದ್ದ ಶುಂಠಿ ಬೆಳೆಗಾರರು ಸತತ ಮಳೆಯಿಂದಾಗಿ ಆ ಬೆಳೆ ಕೂಡ ಕೊಚ್ಚಿ ಹೋಗುವ ನಾಶವಾಗುವ ಸಾಧ್ಯತೆಯಿದೆ.
ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಮಾತನಾಡಿ, ರಾಜ್ಯದ ದಕ್ಷಿಣ ಭಾಗದಲ್ಲಿ ಅಧಿಕ ಮಳೆ ಬಿದ್ದರೂ ಸಹ ಇಡೀ ರಾಜ್ಯದಲ್ಲಿ ಒಟ್ಟಾರೆ ಮಳೆಯ ಪ್ರಮಾಣ ನಿಗದಿತವಾಗಿಲ್ಲ, ಉತ್ತರ ಕರ್ನಾಟಕದಲ್ಲಿ ಮಳೆಯ ಪ್ರಮಾಣ ಕಡಿಮೆಯಿದೆ. ಗದಗ, ಹಾವೇರಿ, ಬಾಗಲಕೋಟೆ, ವಿಜಯಪುರ ಮೊದಲಾದ ಜಿಲ್ಲೆಗಳಲ್ಲಿ ನಿಗದಿತ ಸಮಯಕ್ಕೆ ನಿರ್ದಿಷ್ಟ ಪ್ರಮಾಣದಲ್ಲಿ ಮಳೆಯಾಗದಿದ್ದರೆ ರೈತರು ಬೆಳೆ ನಷ್ಟವನ್ನು ಎದುರಿಸಬೇಕಾಗಬಹುದು ಎನ್ನುತ್ತಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


