ಹೊಸ ವರ್ಷದ ಆಫರ್ ನಂತರ ವಾಯು ವಜ್ರ ಬಸ್ ದರ ಏರಿಸಿದ ಬಿಎಂಟಿಸಿ
:ಬಿಎಂಟಿಸಿ ವಾಯು ವಜ್ರ ಬಸ್ಗಳ ಟಿಕೆಟ್ ದರ ಇಂದಿನಿಂದ ಶೇ.16.89 ರಷ್ಟು ಏರಿಕೆಯಾಗಿದೆ. ಹೊಸ ವರ್ಷದ ನಿಮಿತ್ತ ಪ್ರಯಾಣಿಕರನ್ನು ವಜ್ರ ಬಸ್ ಕಡೆ ಆಕರ್ಷಿಸಲು ಶೇ.37ರಷ್ಟು ಟಿಕೆಟ್ ದರ ಇಳಿಸಲಾಗಿತ್ತು.,

Published On :
ಬೆಂಗಳೂರು: ಬಿಎಂಟಿಸಿ ವಾಯು ವಜ್ರ ಬಸ್ಗಳ ಟಿಕೆಟ್ ದರ ಇಂದಿನಿಂದ ಶೇ.16.89 ರಷ್ಟು ಏರಿಕೆಯಾಗಿದೆ.
ಹೊಸ ವರ್ಷದ ನಿಮಿತ್ತ ಪ್ರಯಾಣಿಕರನ್ನು ವಜ್ರ ಬಸ್ ಕಡೆ ಆಕರ್ಷಿಸಲು ಶೇ.37ರಷ್ಟು ಟಿಕೆಟ್ ದರ ಇಳಿಸಲಾಗಿತ್ತು. ಪ್ರಾಯೋಗಿಕವಾಗಿ ಒಂದು ತಿಂಗಳ ಅವಧಿಗೆ ಪರಿಷ್ಕರಿಸಲಾಗಿದ್ದ ದರಗಳನ್ನು ಜೂನ್ 30ರ ವರೆಗೆ ವಿಸ್ತರಿಸಲಾಗಿತ್ತು.
ಆದರೆ, ಟಿಕೆಟ್ ದರವನ್ನು ಕಡಿಮೆ ಮಾಡಿದರೂ ಪ್ರಯಾಣಿಕರ ಸಂಖ್ಯೆಯಲ್ಲಿ ಮತ್ತು ಆದಾಯದಲ್ಲಿ ಸ್ವಲ್ಪ ಮಟ್ಟಿಗೆ ಹೆಚ್ಚಳವಾಗಿದ್ದು, ಕಿ.ಮೀ. ಆದಾಯದಲ್ಲಿ ಸುಧಾರಣೆಯಾಗದ ಕಾರಣ ಮತ್ತೆ ದರ ಹೆಚ್ಚಿಸುತ್ತಿರುವ ಬಗ್ಗೆ ಬಿಎಂಟಿಸಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಬಿಎಂಟಿಸಿಗೆ ಕೋಟ್ಯಂತರ ರೂ. ನಷ್ಟ ಹಿನ್ನೆಲೆಯಲ್ಲಿ ಜುಲೈ 1 ರಿಂದ ವಜ್ರ ಬಸ್ ದರ ಶೇ .16.89ರಷ್ಟು ಹೆಚ್ಚಳ ಮಾಡಲಾಗುತ್ತಿದೆ ಎಂದು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


