ರಾಜ್ಯ

ರಾಮನಗರ: ಗಂಟಲಿಗೆ ಆಹಾರ ಸಿಕ್ಕಿ ಮೂರು ತಿಂಗಳ ಮಗು ಸಾವು

ಮಗುವಿಗೆ ತಿನ್ನಿಸಿದ ಆಹಾರವೇ ಗಂಟಲಿನಲ್ಲಿ ಸಿಲುಕಿ ಮೂರು ತಿಂಗಳ ಮಗುವೊಂದು ಮೃತಪಟ್ಟ ಘಟನೆ ರಾಮನಗರದಲ್ಲಿ ನಡೆದಿದೆ.

ರಾಮನಗರ: ಗಂಟಲಿಗೆ ಆಹಾರ ಸಿಕ್ಕಿ ಮೂರು ತಿಂಗಳ ಮಗು ಸಾವು
ರಾಮನಗರ: ಗಂಟಲಿಗೆ ಆಹಾರ ಸಿಕ್ಕಿ ಮೂರು ತಿಂಗಳ ಮಗು ಸಾವು
Published On :
ರಾಮಗರ: ಮಗುವಿಗೆ ತಿನ್ನಿಸಿದ ಆಹಾರವೇ ಗಂಟಲಿನಲ್ಲಿ ಸಿಲುಕಿ ಮೂರು ತಿಂಗಳ ಮಗುವೊಂದು ಮೃತಪಟ್ಟ ಘಟನೆ ರಾಮನಗರದಲ್ಲಿ ನಡೆದಿದೆ.
ಮಾಗಡಿ ತಾಲೂಕಿನ ಹೊಸಪಾಳ್ಯದ ಮಂಜುನಾಥ್ ಹಾಗೂ ಧನಲಕ್ಷ್ಮೀ ದಂಪತಿಯ ಹೆಣ್ಣು ಮಗು ಸಾವನ್ನಪ್ಪಿದ್ದು ಇವರು ಕಳೆದ ಹದಿನೈದು ದಿನಗಳಿಂದ ಮಗುವಿಗೆ ಮಣ್ಣಿ ರೂಪದ ಆಹಾರ ತಿನ್ನಿಸುತ್ತಿದ್ದರು.
ಆದರೆ ಇಂದು ಬೆಳಗ್ಗೆ ಸಹ ಆಹಾರ ತಿನ್ನಿಸುವ ವೇಳೆ ಗಂಟಲಲ್ಲಿ ಸಿಲುಕ್ಜಿದ ಪರಿಣಾಮ ಮಗುವಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿದೆ. ತಕ್ಷಣವೇ ಮಗುವನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಆದರೂ ಆಸ್ಪತ್ರೆಗೆ ತಲುಪುವ ಮಾರ್ಗದ ನಡುವೆಯೇ ಮಗು ಪ್ರಾಣ ಬಿಟ್ಟಿದೆ. ಆಸ್ಪತ್ರೆಯಲ್ಲಿ ಮಗುವನ್ನು ಪರೀಕ್ಷಿಸಿದ ವೈದ್ಯರು ಮಗುವಿಗೆ ನೀಡಿದ್ದ ಆಹಾರ ಗಂಟಲಲ್ಲಿ ಸಿಲುಕಿದ ಪರಿಣಾಮವೇ ಸಾವಿಗೀಡಾಗಿರುವುದಾಗಿ ಹೇಳಿದ್ದಾರೆ.
ಮಗುವಿನ ಸಾವಿನ ಕಾರಣ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.