ರಸ್ತೆಯಲ್ಲಿ ನಿಂತಿದ್ದ ಕಾರುಗಳಿಗೆ ಬೆಂಕಿ ಹಚ್ಚಿ ವಿಕೃತವಾಗಿ ವರ್ತಿಸುತ್ತಿದ್ದ ವೈದ್ಯನ ಬಂಧನ
ಮನೆ ಮುಂದೆ, ರಸ್ತೆಗಳಲ್ಲಿ ನಿಲ್ಲಿಸುವ ಕಾರುಗಳಿಗೆ ಹೆಲ್ಮೆಟ್ ಧರಿಸಿ ಬೆಂಕಿ ಹಚ್ಚಿ ವಿಕೃತವಾಗಿ ವರ್ತಿಸುತ್ತಿದ್ದ ವೈದ್ಯನನ್ನು ಬೆಳಗಾವಿ ಠಾಣೆ ಪೊಲೀಸರು ಬುಧವಾರ ರಾತ್ರಿ ಬಂಧನಕ್ಕೊಳಪಡಿಸಿದ್ದಾರೆ...

Published On :
ಬೆಳಗಾವಿ: ಮನೆ ಮುಂದೆ, ರಸ್ತೆಗಳಲ್ಲಿ ನಿಲ್ಲಿಸುವ ಕಾರುಗಳಿಗೆ ಹೆಲ್ಮೆಟ್ ಧರಿಸಿ ಬೆಂಕಿ ಹಚ್ಚಿ ವಿಕೃತವಾಗಿ ವರ್ತಿಸುತ್ತಿದ್ದ ವೈದ್ಯನನ್ನು ಬೆಳಗಾವಿ ಠಾಣೆ ಪೊಲೀಸರು ಬುಧವಾರ ರಾತ್ರಿ ಬಂಧನಕ್ಕೊಳಪಡಿಸಿದ್ದಾರೆ.
ಬೆಳಗಾವಿ ವೈದ್ಯಕೀಯ ಕಾಲೇಜು (ಬಿಮ್ಸ್)ನ ರಕ್ತ ಭಂಡಾರದ ಮುಖ್ಯಸ್ಥ, ಗುಲ್ಬರ್ಗ ಮೂಲದ ಡಾ.ಅಮಿತ್ ಗಾಯಕವಾಡ (37) ಬಂಧಿತ ಆರೋಪಿ ಎಂದು ತಿಳಿದುಬಂದಿದೆ.
ವಿಶ್ವೇಶ್ವರಯ್ಯ ನಗರದ ವಿವಂತಾ ಅಪಾರ್ಟ್'ಮೆಂಟ್'ನ ಕಾರ್ ಪಾರ್ಕಿಂಗ್ ನಲ್ಲಿ ನಿಲ್ಲಿಸಿದ್ದ ಕಾರಿಗೆ ಅಮಿತ್ ಬುಧವಾರ ಬೆಂಕಿ ಹಚ್ಚಲು ಯತ್ನಿಸುತ್ತಿದ್ದ ಸಂದರ್ಭದಲ್ಲಿ ಸ್ಥಳೀಯರು ಈತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಬೆಳಗಾವಿಯ ಜ.13, 14, 15 ರಂದು ಜಾಧವನಗರ ಸೇರಿ ವಿವಿಧೆಡೆ ಮಂಗಳವಾರ 7 ಐಷಾರಾಮಿ ಕಾರುಗಳಿಗೆ ಬೆಂಕಿ ಹಚ್ಚಿದ ಪ್ರಕರಣಗಳು ನಡೆಸಿತ್ತು. ಈ ಸಂಬಂಧ ವಿಶೇಷ ತಂಡ ರಚಿಸಿ ತನಿಖೆಗೆ ಆದೇಶಿಸಲಾಗಿತ್ತು. ಇದರಂತೆ ಬುಧವಾರ ಅಮಿತ್ ಕಾರೊಂದಕ್ಕೆ ಬೆಂಕಿ ಹಚ್ಚಲು ಯತ್ನ ನಡೆಸುತ್ತಿದ್ದ ಸಂದರ್ಭದಲ್ಲಿ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ. ಅಮಿತ್ ಬೆಂಕಿ ಹಚ್ಚಿದ ಹಲವು ಕಾರುಗಳಲ್ಲಿ 7 ಕಾರುಗಳು ವೈದ್ಯರಿಗೆ ಸೇರಿದ್ದಾಗಿವೆ ಎಂದು ಪೊಲೀಸರು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


