ಬೆಂಗಳೂರನ್ನು ದೇಶದ ಎರಡನೇ ರಾಜಧಾನಿಯಾಗಿಸಲು ಮನವಿ, ಸಚಿವ ದೇಶಪಾಂಡೆಯಿಂದ ಮೋದಿಗೆ ಪತ್ರ
'ಭಾರತಕ್ಕೀಗ ತುರ್ತಾಗಿ ಎಅರ್ಡನೇ ರಾಜಧಾನಿಯ ಅಗತ್ಯವಿದ್ದು ಬೆಂಗಳೂರು ಈ ಅಗ್ತ್ಯವನ್ನು ನಿಭಾಯಿಸಲು ಸಿದ್ದವಿದೆ. ಬೆಂಗಳೂರನ್ನು ದೇಶದ ಎರಡನೇ ರಾಜಧಾನಿಯನ್ನಾಗಿ ಘೋಷಿಸಬೇಕು.'

Published On :
ಬೆಂಗಳೂರು: 'ಭಾರತಕ್ಕೀಗ ತುರ್ತಾಗಿ ಎಅರ್ಡನೇ ರಾಜಧಾನಿಯ ಅಗತ್ಯವಿದ್ದು ಬೆಂಗಳೂರು ಈ ಅಗ್ತ್ಯವನ್ನು ನಿಭಾಯಿಸಲು ಸಿದ್ದವಿದೆ. ಬೆಂಗಳೂರನ್ನು ದೇಶದ ಎರಡನೇ ರಾಜಧಾನಿಯನ್ನಾಗಿ ಘೋಷಿಸಬೇಕು.' ಕರ್ನಾಟಕ ಬೃಹತ್, ಮದ್ಯಮ ಕೈಗಾರಿಕೆ ಹಾಗೂ ಮೂಲ ಸೌಕರ್ಯಾಭಿವೃದ್ದಿ ಸಚಿವ ಆರ್.ವಿ. ದೇಶಪಾಂಡೆ ಪ್ರಧಾನಿಗೆ ಪತ್ರ ಬರೆದಿದ್ದಾರೆ.
ದಕ್ಷಿಣ ಭಾರತದ ಅಭಿವೃದ್ದಿ ಹಾಗೂ ಒಟ್ಟಾರೆ ದೇಶದ ಪ್ರಗತಿಯ ಉದ್ದೇಶದಿಂಡ ಬೆಂಗಳೂರನ್ನು ಎರಡನೇ ರಾಜಧಾನಿಯಾಗಿಸಬೇಕು. ಎರಡನೇ ರಾಜಧಾನಿಯಾಗಲು ಬೇಕಾದ ಎಲ್ಲಾ ಅರ್ಹತೆಗಳು ಬೆಂಗಳುರಿಗಿದೆ ಎಂದು ಉಲ್ಲೇಖಿಸಿ ಜ.12ರಂದು ದೇಶಪಾಂಡೆ, ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ.
ದೇಶದ ಎರಡನೇ ರಾಜಧಾನಿಯಾಗಲು ಬೆಂಗಲೂರು ಎಷ್ಟು ಸೂಕ್ತ, ರಾಜಧಾನಿಯಾಗಲು ನಗರಕ್ಕೆ ಅರ್ಹತೆಗಳೇನು ಎನ್ನುವುದನ್ನು ಪಟ್ಟಿ ಮಾಡಿ ತಿಳಿಸಿರುವ ದೇಶಪಾಂಡೆ ಆಡಳಿತದಲ್ಲಿ ರಚನಾತ್ಮಕ ಸುಧಾರಣೆ, ರಾಷ್ಟ್ರ ನಿರ್ಮಾಣ, ಅಂತರಾಷ್ಟ್ರೀಯ ಸಹಕಾರ ಸೇರಿ ನಾನಾ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಣೆಗಾಗಿ ದೇಶಕ್ಕೆ ಎರಡನೇ ರಾಜಧಾನಿ ಅಗತ್ಯವಿದೆ. ರಾಷ್ಟ್ರೀಯ ದೃಷ್ಟಿಕೋನಗಳಲ್ಲಿ ದಕ್ಷಿಣ ಭಾರತದ ಸಕ್ರಿಯ ಪಾಲುದಾರಿಕೆಗಾಗಿ ಬೆಂಗಳೂರು ಋಆಷ್ಟ್ರದ ಎರಡನೇ ರಾಜಧಾನಿಯಾಗಬೇಕು. ದೇಶಪಾಂಡೆ ಒತ್ತಾಯಿಸಿದ್ದಾರೆ.
ಇನ್ನು ದೇಶಪಾಂಡೆ ಈ ವಿಚಾರವಾಗಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೂ ಮನವಿ ಸಲ್ಲಿಸಿದ್ದಾರೆ ಎಂದು ಹೇಳಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಬೆಂಗಳೂರುBengaluruಪ್ರಧಾನಿ ನರೇಂದ್ರ ಮೋದಿletterಪತ್ರPrime Minister Narendra ModiR V Deshpandesecond capitalಆರ್. ವಿ. ದೇಶಪಾಂಡೆಎರಡನೇ ರಾಜಧಾನಿ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


