ಬೆಂಗಳೂರು: ತಾಯಿ ಬೈದರೆಂದು ಬೇಸತ್ತು 17 ವರ್ಷದ ಯುವತಿ ಆತ್ಮಹತ್ಯೆ
ಅಡುಗೆ ಮಾಡಲು ಆಸಕ್ತಿಯಿಲ್ಲವೇಕೆ ಎಂದು ತಾಯಿ ಬೈದಿದ್ದಕ್ಕೆ ನೊಂದು 17 ವರ್ಷದ ...

Published On :
ಬೆಂಗಳೂರು: ಅಡುಗೆ ಮಾಡಲು ಆಸಕ್ತಿಯಿಲ್ಲವೇಕೆ ಎಂದು ತಾಯಿ ಬೈದಿದ್ದಕ್ಕೆ ನೊಂದು 17 ವರ್ಷದ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನ ಯಲಹಂಕ ನ್ಯೂ ಟೌನ್ ನಲ್ಲಿ ನಡೆದಿದೆ. ಮೃತ ಹುಡುಗಿಯನ್ನು ವರಲಕ್ಷ್ಮಿ ಎಂದು ಗುರುತಿಸಲಾಗಿದ್ದು ಈಕೆ ಯಲಹಂಕದ ಸರ್ಕಾರಿ ಪಿಯು ಕಾಲೇಜಿನಲ್ಲಿ ಓದುತ್ತಿದ್ದಳು. ಈಕೆಯ ಪೋಷಕರು ದಿನಗೂಲಿ ನೌಕರರಾಗಿದ್ದಾರೆ.
ನಿನ್ನೆ ಸಾಯಂಕಾಲ 4.30ರ ಸುಮಾರಿಗೆ ಘಟನೆ ನಡೆದಿದ್ದು ಈ ಸಂದರ್ಭದಲ್ಲಿ ವರಲಕ್ಷ್ಮಿ ಒಬ್ಬಳೇ ಮನೆಯಲ್ಲಿದ್ದಳು. ವರಲಕ್ಷ್ಮಿಯ ತಾಯಿ ಗಂಗಮ್ಮ ಕೆಲಸಕ್ಕೆಂದು ಹೊರ ಹೋಗಿದ್ದರು. ಮನೆಗೆ ರಾತ್ರಿ ವಾಪಸ್ ಬಂದು ನೋಡುವಾಗ ವರಲಕ್ಷ್ಮಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡುಬಂದಿದೆ.
ನೆರೆಹೊರೆಯರು ಯಲಹಂಕ ನ್ಯೂ ಟೌನ್ ಪೊಲೀಸ್ ರಿಗೆ ಸುದ್ದಿ ಮುಟ್ಟಿಸಿದರು. ಮೃತದೇಹವನ್ನು ಅಂಬೇಡ್ಕರ್ ಆಸ್ಪತ್ರೆಗೆ ವರ್ಗಾಯಿಸಲಾಯಿತು.
ಅಡುಗೆ ಮಾಡಲು ಕಲಿಯಲು ಗಂಗಮ್ಮ ಆಗಾಗ ಮಗಳಿಗೆ ಹೇಳುತ್ತಿದ್ದರಂತೆ. ವರಲಕ್ಷ್ಮಿಗೆ ಅಡುಗೆ ಮಾಡಲು ಆಸಕ್ತಿಯಿಲ್ಲದಿದ್ದರಿಂದ ಪದೇ ಪದೇ ಜಗಳವಾಗುತ್ತಿತ್ತು. ನಿನ್ನೆ ಕೂಡ ಗಂಗಮ್ಮ ಮಗಳಿಗೆ ಬುದ್ದಿವಾದ ಹೇಳಿದ್ದರು. ಇದರಿಂದ ಬೇಸತ್ತ ವರಲಕ್ಷ್ಮಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


