ಕಲಬುರಗಿ: ಫ್ಲಾಟ್ ಫಾರಂ ಗೋಡೆಗೆ ಡಿಕ್ಕಿ ಹೊಡೆದ ಸೋಲಾಪುರ-ರಾಯಚೂರು ಪ್ಯಾಸೆಂಜರ್ ರೈಲು!
ಸೋಲಾಪುರ-ರಾಯಚೂರು ಪ್ಯಾಸೆಂಜರ್ ರೈಲು ಹಳಿ ತಪ್ಪಿ ನಿಲ್ದಾಣದ ಗೋಡೆಗೆ ಢಿಕ್ಕಿ ಹೊಡೆದಿರುವ ಘಟನೆ ಕಲಬುರಗಿಯ ವಾಡಿ ರೈಲು ನಿಲ್ದಾಣದಲ್ಲಿ ಗುರುವಾರ ಸಂಭವಿಸಿದೆ.

Published On :
ಕಲಬುರಗಿ: ಸೋಲಾಪುರ-ರಾಯಚೂರು ಪ್ಯಾಸೆಂಜರ್ ರೈಲು ಹಳಿ ತಪ್ಪಿ ನಿಲ್ದಾಣದ ಗೋಡೆಗೆ ಢಿಕ್ಕಿ ಹೊಡೆದಿರುವ ಘಟನೆ ಕಲಬುರಗಿಯ ವಾಡಿ ರೈಲು ನಿಲ್ದಾಣದಲ್ಲಿ ಗುರುವಾರ ಸಂಭವಿಸಿದೆ.
ಮೂಲಗಳ ಪ್ರಕಾರ ಗುರುವಾರ ಬೆಳಗ್ಗೆ ಸೊಲಾಪುರದಿಂದ ರಾಯಚೂರಿಗೆ ತೆರಳುತ್ತಿದ್ದ ರೈಲು ವಾಡಿ ರೈಲು ನಿಲ್ದಾಣದ ಸಮೀಪ ಆಗಮಿಸುತ್ತಿದ್ದಂತೆಯೇ ಹಳಿ ತಪ್ಪಿದೆ. ಈ ವೇಳೆ ರೈಲಿನ ಎಂಜಿನ್ ಭಾಗ ನಿಲ್ದಾಣದ ಗೋಡೆ ಢಿಕ್ಕಿ ಹೊಡೆದಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾರಿಗೂ ಯಾವುದೇ ಅಪಾಯವಾಗಿಲ್ಲ. ಘಟನೆ ವೇಳೆ ನಿಲ್ದಾಣದ ಸಮೀಪ ಜನರಿದ್ದರಾದರೂ, ಯಾರಿಗೂ ಯಾವುದೇ ರೀತಿಯ ಗಾಯಗಳಾಗಿಲ್ಲ. ಅಂತೆಯೇ ರೈಲಿನಲ್ಲಿದ್ದ ಪ್ರಯಾಣಿಕರಿಗೂ ಯಾವುದೇ ಸಮಸ್ಯೆಯಾಗಿಲ್ಲ ಎಂದು ತಿಳಿದುಬಂದಿದೆ.
ಪ್ರಸ್ತುತ ಘಟನಾ ಸ್ಥಳಕ್ಕೆ ರೈಲ್ವೇ ಸುರಕ್ಷತಾ ಸಿಬ್ಬಂದಿ ದೌಡಾಯಿಸಿದ್ದು, ಪರಿಶೀಲನೆ ನಡೆಸಿದರು. ಅಂತೆಯೇ ಇತರೆ ಸಿಬ್ಬಂದಿಗಳೊಂದಿಗೆ ಹಳಿ ದುರಸ್ತಿ ಕಾರ್ಯ ಮಾಡುತ್ತಿದ್ದು, ಹಳಿ ತಪ್ಪಿದ್ದ ರೈಲು ಎಂಜಿನ್ ಭಾಗವನ್ನು ಹಳಿ ಮೇಲೆ ಕೂರಿಸಿದ್ದಾರೆ. ಇನ್ನು ಘಟನೆಗೆ ದಶಕಗಳ ಹಿಂದಿನ ಗೋಡೆಯಾ ಕಾರಣ ಎಂದು ಹೇಳಲಾಗಿತ್ತು, ದಶಕಗಳ ಹಿಂದೆ ಹಳೆಯ ರೈಲುಗಳಿಗೆ ಹೊಂದಾಣಿಕೆಯಾಗುವಂತೆ ಗೋಡೆ ನಿರ್ಮಿಸಲಾಗಿತ್ತು. ಆದರೆ ಈಗಿನ ಹೊಸ ರೈಲು ಎಂಜಿನ್ ಗಳ ಗಾತ್ರ ಕೊಂಚ ದೊಡ್ಡದಾರಿರುವುದೇ ಘಟನೆದೆ ಕಾರಣ ಎಂದು ಪ್ರತ್ಯಕ್ಷ ದರ್ಶಿಗಳು ಹೇಳಿದ್ದಾರೆ.
ಪ್ರಸ್ತುತ ಗೊಡೆಯಲ್ಲಿನ ಕಲ್ಲುಗಳನ್ನು ತೆಗೆಯುವ ಮೂಲಕ ರೈಲು ಸಿಬ್ಬಂದಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಕಲಬುರಗಿಅಪಘಾತaccidentkalaburagiIndian Railwaysಭಾರತೀಯ ರೈಲ್ವೇSolapur-Raichur passenger trainಸೋಲಾಪುರ-ರಾಯಚೂರ ಪ್ಯಾಸೆಂಜರ್ ರೈಲು
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


