ಬೆಂಗಳೂರಿನ ಐಎಎಫ್ ಕಮಾಂಡ್ ಆಸ್ಪತ್ರೆಗೆ 2017ರ ಅತ್ಯುತ್ತಮ ರಕ್ಷಣಾ ವಲಯದ ಆಸ್ಪತ್ರೆ ಪ್ರಶಸ್ತಿ
ವಾಯುಪಡೆಯ ಸುಪರ್ದಿಯಲ್ಲಿರುವ ಬೆಂಗಳೂರಿನ ಕಮಾಂಡ್ ಆಸ್ಪತ್ರೆ ರಕ್ಷಣಾ ಇಲಾಖೆ ಆಸ್ಪತ್ರೆಗಳ ಸಾಲಿನಲ್ಲಿ 2017ರ ಅತ್ಯುತ್ತಮ ಆಸ್ಪತ್ರೆ ಎಂಬ ಗೌರವಕ್ಕೆ ಪಾತ್ರವಾಗಿದೆ.

Published On :
ಬೆಂಗಳುರು: ವಾಯುಪಡೆಯ ಸುಪರ್ದಿಯಲ್ಲಿರುವ ಬೆಂಗಳೂರಿನ ಕಮಾಂಡ್ ಆಸ್ಪತ್ರೆ ರಕ್ಷಣಾ ಇಲಾಖೆ ಆಸ್ಪತ್ರೆಗಳ ಸಾಲಿನಲ್ಲಿ 2017ರ ಅತ್ಯುತ್ತಮ ಆಸ್ಪತ್ರೆ ಎಂಬ ಗೌರವಕ್ಕೆ ಪಾತ್ರವಾಗಿದೆ.
ರಕ್ಷಣಾ ಸಚಿವಾಲಯದ ಹೇಳಿಕೆಯ ಪ್ರಕಾರ, ಆಪರೇಷನ್ ಮತ್ತು ಮ್ಯಾನೇಜ್ ಮೆಂಟ್, ವೈದ್ಯಕೀಯ ಸೇವೆಗಳು ಮತ್ತು ವೈದ್ಯಕೀಯ ಶಿಕ್ಷಣವನ್ನು ಒದಗಿಸುವ ಸಂಸ್ಥೆಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು ಇವುಗಳಲ್ಲಿ ಬೆಂಗಳೂರಿನ ಕಮಾಂಡ್ ಆಸ್ಪತ್ರೆ ಅತ್ಯುತ್ತಮ ಶ್ರೇಯಾಂಕ ಪಡೆದುಕೊಂಡಿದೆ. ಕಮಾಂಡ್ ಆಸ್ಪತ್ರೆ ಈ ಪ್ರಶಸ್ತಿಗಾಗಿ ಅರ್ಜಿ ಸಲ್ಲಿಸಿದ್ದು ಅರ್ಜಿಯಲ್ಲಿ ಐದು ದಶಕಗಳಿಂದ ಸಾರ್ವಜನಿಕರಿಗೆ ಒದಗಿಸಲಾದ ಆರೋಗ್ಯ ಸೇವಾ ಸೌಲಭ್ಯಗಳ ಮಾಹಿತಿಗಳನ್ನು ಅಗತ್ಯ ದಾಖಲೆಗಳೊಡನೆ ಉಲ್ಲೇಖಿಸಲಾಗಿತ್ತು.

ಇದನ್ನು ಪರಿಗಣಿಸಿದ ಪ್ರಶಸ್ತಿ ಆಯ್ಕೆ ಸಮಿತಿಯು ಕಮಾಡ್ ಆಸ್ಪತ್ರೆಗೆ 2017ರ ರಕ್ಷಣಾ ವಲಯದ ಅತ್ಯುತ್ತಮ ಆಸ್ಪತ್ರೆ ಪ್ರಶಸ್ತಿ ನೀಡಿ ಗೌರವಿಸಿದೆ. ಇತ್ತೀಚೆಗೆ ನವದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ. ಏರ್ ವೈಸ್ ಮಾರ್ಷಲ್ ಎಂ. ವಿ. ಸಿಂಗ್, ಕಮಾಂಡೆಂಟ್ ಮತ್ತು ಏರ್ ಕೊಮೊಡೊರ್ ಅಫ್ತಾಬ್ ಆಲಂ, ಉಪ ಕಮಾಂಡೆಂಟ್, ಕಮಾಂಡ್ ಹಾಸ್ಪಿಟಲ್ ವಾಯುಪಡೆ ಬೆಂಗಳೂರು ಇವರುಗಳು ಪ್ರಶಸ್ತಿ ಸ್ವೀಕರಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಬೆಂಗಳೂರುBengaluruIndian Air Forceಭಾರತೀಯ ವಾಯುಪಡೆCommand Hospitalbest defence hospital of 2017ಕಮಾಂಡ್ ಆಸ್ಪತ್ರೆ2017 ರ ಅತ್ಯುತ್ತಮ ರಕ್ಷಣಾ ವಲಯದ ಆಸ್ಪತ್ರೆ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


