ರಾಜ್ಯ

ಬೆಂಗಳೂರು: ವಿಶೇಷ ಅಂಡರ್‏ವೇರ್ ಬಳಸಿ ದುಬಾರಿ ಕ್ರೀಡಾ ಸಲಕರಣೆ ಕದಿಯುತ್ತಿದ್ದ ಯುವಕನ ಬಂಧನ

ದೊಡ್ಡ ದೊಡ್ಡ ಮ್ನಾಲ್ ಗಳಿಗೆ ತೆರಳಿ ಅಲ್ಲಿ ಕ್ರೀಡಾ ವಸ್ತುಗಳನ್ನು ಕಳ್ಳತನ ಮಾಡುತ್ತಿದ್ದ ಯುವಕನನ್ನು ಬೆಂಗಳೂರಿನ ಕೊತ್ತನೂರು ಪೋಲೀಸರು ಬಂಧಿಸಿದ್ದಾರೆ.

ಬೆಂಗಳೂರು: ವಿಶೇಷ ಅಂಡರ್‏ವೇರ್ ಬಳಸಿ ದುಬಾರಿ ಕ್ರೀಡಾ ಸಲಕರಣೆ ಕದಿಯುತ್ತಿದ್ದ ಯುವಕನ ಬಂಧನ
ಡೆಕತ್ಲಾನ್‌ ಸ್ಟೋರ್‌ ಸಾಂದರ್ಭಿಕ ಚಿತ್ರ
Published On :
ಬೆಂಗಳೂರು: ದೊಡ್ಡ ದೊಡ್ಡ ಮಾಲ್ ಗಳಿಗೆ ತೆರಳಿ ವಿಶೇಷ ಆಂಡರ್ ವೇರ್ ಬಳಸಿಕೊಂಡು  ಕ್ರೀಡಾ ವಸ್ತುಗಳನ್ನು ಕಳ್ಳತನ ಮಾಡುತ್ತಿದ್ದ ಯುವಕನನ್ನು ಬೆಂಗಳೂರಿನ ಕೊತ್ತನೂರು ಪೋಲೀಸರು ಬಂಧಿಸಿದ್ದಾರೆ.
ಆರೋಪಿಯನ್ನು ಸೈಯದ್‌ ಬಲ್ಲಿ (30) ಎಂದು ಗುರುತಿಸಲಾಗಿದ್ದು ಆತನಿಂದ ಸುಮಾರು 45 ಸಾವಿರ ರೂ. ಮೌಲ್ಯದ ಕ್ರೀಡಾ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.
ಕಲ್ಯಾಣನಗರ ನಿವಾಸಿಯಾದ ಸೈಯದ್‌ ನಿರುದ್ಯೋಗಿ ಯುವಕನಾಗಿದ್ದು ಜ.2ರಂದು ಕೊತ್ತನೂರಿನ ಡೆಕತ್ಲಾನ್‌ ಸ್ಟೋರ್‌ಗೆ ತೆರಳಿದ್ಡಾನೆ. ಅಲ್ಲಿ ಬೈನಾಕುಲರ್‌, ಸಿ ಐ ಕ್ಯಾಮೆರಾ ಇದೇ ಮುಂತಾದ ದುಬಾರಿ ಬೆಲೆಯ ವಸ್ತುಗಳನ್ನು ಕಳವು ಮಾಡಿ ಪರಾರಿಯಾಗಿದ್ದನು. ಪ್ರಕರಣಕ್ಕೆ ಸಂಬಂಧಿಸಿ ಅಂಗಡಿ ಮಾಲೀಕರು ನೀಡಿದ ದೂರಿನ ಆಧಾರದಲ್ಲಿ ಆರೋಪಿಯ ಜಾಡು ಹಿಡಿದ ಪೋಲೀಸರು ಸೈಯದ್‌ ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
"ಸ್ಟೋರ್ ಮ್ಯಾನೇಜರ್ ನೀಡಿದ ದೂರಿನಂತೆ ನಾವು ಕಾರ್ಯಾಚರಣೆ ನಡೆಸಿದ್ದೇವೆ. ಸ್ಟೋರ್ ಮ್ಯಾನೇಜರ್ ಸ್ಟಾಕ್ ಆಡಿಟ್ ಮಾಡಿದಾಗ ಕೆಲವು ವಸ್ತುಗಳು ಕಾಣೆಯಾಗಿರುವುದು ಬೆಳಕಿಗೆ ಬಂದಿದೆ.  ಸಿಸಿಟಿವಿ ದೃಶ್ಯಗಳನ್ನು ಪರೀಕ್ಷಿಸಿದ ನಂತರ ಘಟನೆ ವಿವರ ತಿಳಿದಿದೆ. ಅವರು ತಕ್ಷಣ ಪೋಲೀಸರಿಗೆ ಮಾಹಿತಿ ನೀಡಿದ್ದಾರೆ. ನಾವು ಕಾರ್ಯಪ್ರವೃತ್ತರಾಗುವ ವೇಳೆ ಕಾಕತಾಳೀಯವೆನ್ನುವಂತೆ ಆರೋಪಿಯು ಕದ್ದ ಕ್ಯಾಮರಾವನ್ನು ಮಾರಾಟ ಮಾಡಲು ಪ್ರಯತ್ನ ನಡೆಸಿದ್ದ. ನಾವು ಖಚಿತ ಮಾಹಿತಿ ಪಡೆದು ಅವನನ್ನು ಬಂಧಿಸುವಲ್ಲಿ ಯಶಸ್ವಿಯಾದೆವು" ಪೋಲೀಸ್ ಅಧಿಕಾರಿಗಳು ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.