ರಾಜ್ಯ

ಹೊಸ ವರ್ಷಾಚರಣೆ ವೇಳೆ ಕ್ಯಾಬ್'ಗಳ ಕೊರತೆ: ಗಸ್ತು ವಾಹನಗಳಲ್ಲೇ ಜನರನ್ನು ಡ್ರಾಪ್ ಮಾಡಿದ ಪೊಲೀಸರು

ಹೊಸ ವರ್ಷದ ಸಂಭ್ರಮವನ್ನು ಆಚರಣೆ ಮಾಡಲೆಂದು ಹೊರ ಬಂದ ಜನರು ಸೂಕ್ತ ಸಮಯಕ್ಕೆ ಕ್ಯಾಬ್ ಗಳು, ಆಟೋಗಳು ದೊರಕದೆ ಪರದಾಡುವಂತಾಗಿತ್ತು...

ಹೊಸ ವರ್ಷಾಚರಣೆ ವೇಳೆ ಕ್ಯಾಬ್'ಗಳ ಕೊರತೆ: ಗಸ್ತು ವಾಹನಗಳಲ್ಲೇ ಜನರನ್ನು ಡ್ರಾಪ್ ಮಾಡಿದ ಪೊಲೀಸರು
ಗಸ್ತು ವಾಹನಗಳಲ್ಲೇ ಜನರನ್ನು ಡ್ರಾಪ್ ಮಾಡಿದ ಪೊಲೀಸರು
Published On :
ಬೆಂಗಳೂರು: ಹೊಸ ವರ್ಷದ ಸಂಭ್ರಮವನ್ನು ಆಚರಣೆ ಮಾಡಲೆಂದು ಹೊರ ಬಂದ ಜನರು ಸೂಕ್ತ ಸಮಯಕ್ಕೆ ಕ್ಯಾಬ್ ಗಳು, ಆಟೋಗಳು ದೊರಕದೆ ಪರದಾಡುವಂತಾಗಿತ್ತು. 
ಕ್ಯಾಬ್ ಗಳು ಸಿಗದೆ, ಆಟೋಗಳು ಸಿಗದೆ ಮಧ್ಯರಾತ್ರಿ ವೇಳೆ ರಸ್ತೆಗಳ ಬದಿಗಳಲ್ಲಿ ನಿಂತು ಕ್ಯಾಬ್ ಗಳಿಗಾಗಿ ಪರದಾಡುತ್ತಿದ್ದ ಜನರಿಗೆ ನೆರವಾಗಿರುವ ನಗರ ಪೊಲೀಸರು ತಮ್ಮ ಗಸ್ತು ವಾಹನಗಳ ಮೂಲಕವೇ ನೆರವಾಗಿದ್ದಾರೆ. 
ಹೊಸ ವರ್ಷ ಆಚರಿಸಲೆಂದು ಹೊರ ಬಂದಿದ್ದ ಸಾಕಷ್ಟು ಮಂದಿ ಸಂಭ್ರಮದ ಬಳಿಕ ಸಮಯಕ್ಕೆ ಸರಿಯಾಗಿ ಮನೆಗೆ ತಲುಪಲು ಸಾಧ್ಯವಾಗದೆ ರಸ್ತೆಗಳ ಮಧ್ಯೆಯೇ ಪರದಾಡುತ್ತಿದ್ದರು. ನಗರದಲ್ಲಿ ಆ್ಯಪ್ ಆಧಾರಿತ ಕ್ಯಾಬ್ ಗಳು ದೊರಕದಿದ್ದ ಕಾರಣ ಜನರಿಗೆ ಸಮಸ್ಯೆ ಎದುರಾಗಿತ್ತು. ವೈಟ್ ಫೀಲ್ಡ್ ವಿಭಾಗದಲ್ಲಂತೂ ಕ್ಯಾಬ್ ಗಳ ಕೊರತೆ ಹೆಚ್ಚಾಗಿತ್ತು. ಈ ಹಿನ್ನಲೆಯಲ್ಲಿ ಗಸ್ತು ವಾಹನಗಳನ್ನು ಬಳಸಿಕೊಂಡು ಜನರನ್ನು ಅವರವರ ಮನೆಗಳಿಗೆ ಬಿಡಲಾಯಿತು ಎಂದು ಪೊಲೀಸರು ಹೇಳಿದ್ದಾರೆ. 
ನೆಟ್ ವರ್ಕ್ ಸಮಸ್ಯೆ ಕೂಡ ಎದುರಾಗಿದ್ದರಿಂದಾಗಿ ಕ್ಯಾಬ್ ಗಳನ್ನು ಬುಕ್ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಈ ಹಿನ್ನಲೆಯಲ್ಲಿ ವೈಟ್ ಫೀಲ್ಡ್ ಪೊಲೀಸರು ಸಾರ್ವಜನಿಕರಿಗೆ ನೆರವಾಗಿ, ಗಸ್ತು ವಾಹನಗಳಲ್ಲೇ ಜನರನ್ನು ಡ್ರಾಪ್ ಮಾಡಿದ್ದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.